ಕರ್ನಾಟಕದ ಶಾಸಕರು ಮತ್ತು ಕೆಎಸ್‌ಸಿಎ ವತಿಯಿಂದ 10,000ಕ್ಕೂ ಹೆಚ್ಚು ಉಚಿತ ಟಿಕೆಟ್‌ಗಳಿಗೆ ಬೇಡಿಕೆ ಬಂದಿದ್ದರಿಂದ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಸ್ಥಳಾಂತರಿಸಲಾಗಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ತಿಳಿಸಿದ್ದಾರೆ.
ಪ್ರತಿ ಬಾರಿ ಐಪಿಎಲ್ ಪಂದ್ಯ ನಡೆದಾಗಲೂ 'ಈ ಸಲ ಕಪ್ ನಮ್ದೇ' ಎಂದು ಅಬ್ಬರಿಸುವ ಆರ್‌ಸಿಬಿ ಅಭಿಮಾನಿಗಳಿಗೆ ಈ ಬಾರಿ ತವರು ನೆಲದಲ್ಲೇ ಫೈನಲ್ ನೋಡುವ ಸೌಭಾಗ್ಯ ತಪ್ಪಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಐಪಿಎಲ್ 2026ರ ಹೈವೋಲ್ಟೇಜ್ ಫೈನಲ್ ಪಂದ್ಯ ಈಗ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂಗೆ ಸ್ಥಳಾಂತರಗೊಂಡಿದೆ.
ಇದಕ್ಕೆ ಕಾರಣ ಭದ್ರತೆಯೋ ಅಥವಾ ಮಳೆಯೋ ಅಲ್ಲ, ಬದಲಿಗೆ ಕರ್ನಾಟಕ ಕ್ರಿಕೆಟ್ ಸಂಸ್ಥೆ (KSCA) ಮತ್ತು ರಾಜ್ಯದ ಶಾಸಕರ ‘ಉಚಿತ ಟಿಕೆಟ್’ ಹಸಿವು ಎನ್ನುವ ಆಘಾತಕಾರಿ ವಿಚಾರವನ್ನು ಬಿಸಿಸಿಐ ಬಯಲು ಮಾಡಿದೆ.
26
ಏನಿದು ಉಚಿತ ಟಿಕೆಟ್ ವಿವಾದ
ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಅವರು ಈ ಕುರಿತು ಅಧಿಕೃತ ಸ್ಪಷ್ಟನೆ ನೀಡಿದ್ದು, ಕೆಎಸ್ಸಿಎ (KSCA) ನಡೆಸಿರುವ ಟಿಕೆಟ್ ಲೂಟಿಯನ್ನು ಬಹಿರಂಗಪಡಿಸಿದ್ದಾರೆ. ಐಪಿಎಲ್ ಶಿಷ್ಟಾಚಾರದ ಪ್ರಕಾರ, ಪಂದ್ಯ ಆಯೋಜಿಸುವ ರಾಜ್ಯ ಕ್ರಿಕೆಟ್ ಸಂಸ್ಥೆಗೆ ಒಟ್ಟು ಆಸನ ಸಾಮರ್ಥ್ಯದ ಕೇವಲ 15% ರಷ್ಟು ಟಿಕೆಟ್‌ಗಳನ್ನು ಮಾತ್ರ ಉಚಿತವಾಗಿ (Complimentary Passes) ನೀಡಲಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಈ ನಿಯಮವನ್ನು ಗಾಳಿಗೆ ತೂರಲಾಗಿದೆ.
36
10 ಸಾವಿರ ಹೆಚ್ಚುವರಿ ಟಿಕೆಟ್‌ಗೆ ಬೇಡಿಕೆ!
ಬಿಸಿಸಿಐ ನೀಡಿದ ಮಾಹಿತಿ ಪ್ರಕಾರ, ಕೆಎಸ್ಸಿಎ ತನ್ನ ಸದಸ್ಯರು, ಕ್ಲಬ್‌ಗಳು ಮತ್ತು ಇತರರಿಗಾಗಿ ನಿಗದಿತ 15% ಕೋಟಾದ ಹೊರತಾಗಿ ಸುಮಾರು 10,000 ಹೆಚ್ಚುವರಿ ಉಚಿತ ಟಿಕೆಟ್‌ಗಳನ್ನು ನೀಡುವಂತೆ ಪಟ್ಟು ಹಿಡಿದಿತ್ತು. ಈ ಬಗ್ಗೆ ಬಿಸಿಸಿಐ ವಿವರಣೆ ಕೇಳಿ ಮೇ 2 ರಂದು ಇಮೇಲ್ ಕಳುಹಿಸಿತ್ತು. ಇದಕ್ಕೆ ಕೆಎಸ್ಸಿಎ ನೀಡಿದ ಉತ್ತರ ಕಂಡು ಬಿಸಿಸಿಐ ಅಧಿಕಾರಿಗಳೇ ಆಘಾತಕ್ಕೊಳಗಾಗಿದ್ದಾರೆ.
ಅತ್ಯಂತ ಆಶ್ಚರ್ಯಕರ ಸಂಗತಿಯೆಂದರೆ, ಕರ್ನಾಟಕದ ಶಾಸಕರು (MLAs) ಮತ್ತು ವಿಧಾನ ಪರಿಷತ್ ಸದಸ್ಯರಿಗಾಗಿ (MLCs) ಸುಮಾರು 700ಕ್ಕೂ ಹೆಚ್ಚು ಉಚಿತ ಟಿಕೆಟ್‌ಗಳನ್ನು ನೀಡಬೇಕೆಂದು ಕೆಎಸ್ಸಿಎ ಬೇಡಿಕೆ ಇಟ್ಟಿತ್ತು. ರಾಜ್ಯ ಸರ್ಕಾರದ ಸದಸ್ಯರಿಗೂ ಉಚಿತ ಪಾಸ್ ನೀಡಬೇಕೆಂಬ ಒತ್ತಡವಿತ್ತು. ಸಾವಿರಾರು ರೂಪಾಯಿ ಕೊಟ್ಟು ಟಿಕೆಟ್ ಖರೀದಿಸಿ ಗಂಟೆಗಟ್ಟಲೆ ಕ್ಯೂ ನಿಲ್ಲುವ ಅಭಿಮಾನಿಗಳ ನಡುವೆ, ಜನಪ್ರತಿನಿಧಿಗಳ ಈ ಉಚಿತ ಟಿಕೆಟ್ ದಾಹದಿಂದಾಗಿ ಇಡೀ ಫೈನಲ್ ಪಂದ್ಯವೇ ಬೆಂಗಳೂರಿನಿಂದ ಕೈತಪ್ಪಿದೆ ಎಂದು ಹೇಳಲಾಗುತ್ತಿದೆ.
56
ಬಿಸಿಸಿಐ ಕಠಿಣ ನಿರ್ಧಾರ:
ನಿಯಮ ಮೀರಿ 10,000ಕ್ಕೂ ಹೆಚ್ಚು ಉಚಿತ ಟಿಕೆಟ್ ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ ಬಿಸಿಸಿಐ, ಇಂತಹ 'ಟಿಕೆಟ್ ಹಗರಣದ' ನಡುವೆ ಪಂದ್ಯ ನಡೆಸುವುದು ಅಸಾಧ್ಯ ಎಂದು ನಿರ್ಧರಿಸಿತು. ಹೀಗಾಗಿ ಫೈನಲ್ ಪಂದ್ಯವನ್ನು ಅಹಮದಾಬಾದ್‌ಗೆ ಹಾಗೂ ಇತರ ಪ್ಲೇ ಆಫ್ ಪಂದ್ಯಗಳನ್ನು ಧರ್ಮಶಾಲಾ ಮತ್ತು ಹೊಸ ಚಂಡೀಗಢಕ್ಕೆ ಶಿಫ್ಟ್ ಮಾಡಲಾಗಿದೆ ಎಂದು ಸ್ವತಃ ಬಿಸಿಸಿಐ ಕಾರ್ಯದರ್ಶಿ ದೇವಜೀತ್ ಸೈಕಿಯಾ ಮಾಹಿತಿ ನೀಡಿದ್ದಾರೆ.
66
ಆರ್‌ಸಿಬಿ ಫ್ಯಾನ್ಸ್‌ಗೆ ಅನ್ಯಾಯ:
ಪ್ರಸ್ತುತ ಪಾಯಿಂಟ್ಸ್ ಟೇಬಲ್‌ನಲ್ಲಿ ಆರ್‌ಸಿಬಿ ತಂಡವು 9 ಪಂದ್ಯಗಳಲ್ಲಿ 6 ಗೆಲುವು ದಾಖಲಿಸಿ 3ನೇ ಸ್ಥಾನದಲ್ಲಿದೆ. ತಂಡದ ಅದ್ಭುತ ಪ್ರದರ್ಶನ ಕಂಡು ಅಭಿಮಾನಿಗಳು ಫೈನಲ್ ಪಂದ್ಯವನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನೋಡಿ ಸಂಭ್ರಮಿಸಲು ಕಾಯುತ್ತಿದ್ದರು. ಆದರೆ ಸಾರ್ವಜನಿಕರ ಹಿತ ಕಾಯಬೇಕಾದ ಶಾಸಕರೇ ಉಚಿತ ಟಿಕೆಟ್‌ಗಾಗಿ ಹಠ ಮಾಡಿದ್ದರಿಂದ ಅಭಿಮಾನಿಗಳ ಕನಸು ಭಗ್ನಗೊಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.