ಮಿಸ್ಟರ್ ಅಂಡ್ ಮಿಸೆಸ್ ಮಹಿ ಚಿತ್ರೀಕರಣದಲ್ಲಿನ ರಾಜ್‌ಕುಮಾರ್‌ ರಾವ್‌ ಪೋಟೋ ಹಂಚಿಕೊಂಡ ಜಾನ್ವಿ

First Published | Nov 12, 2022, 4:44 PM IST

ಜಾನ್ವಿ ಕಪೂರ್ (Janhvi Kapoor) ಅವರು ಮಿಸ್ಟರ್ ಅಂಡ್ ಮಿಸೆಸ್ ಮಾಹಿ (Mr and Mrs Mahi) ಚಿತ್ರೀಕರಣದಿಂದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಬಾಲಿವುಡ್ ನಟಿ ಜಾನ್ವಿ ಕಪೂರ್ ಶುಕ್ರವಾರ ತಮ್ಮ ಮುಂಬರುವ ಸ್ಪೋರ್ಟ್ಸ್‌ ಡ್ರಾಮಾ ಚಿತ್ರ 'ಮಿಸ್ಟರ್ ಅಂಡ್ ಮಿಸಸ್ ಮಹಿ' ಸೆಟ್‌ಗಳಿಂದ ರಾಜ್‌ಕುಮಾರ್ ರಾವ್ (Rajkummar Rao) ಅವರ ಒಂದು ಫೋಟೋವನ್ನು ಹಂಚಿಕೊಂಡಿದ್ದಾರೆ. ಜಾನ್ವಿ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ  ಫೋಟೋವನ್ನು ಹಂಚಿಕೊಂಡಿದ್ದು ಸಖತ್‌ ವೈರಲ್‌ ಆಗಿದೆ.

ಜಾನ್ವಿ ಹಂಚಿಕೊಂಡ ಪೋಟೋಗೆ 'Hard at work dnd @rajkumma_rao Mr and Mrs Mahi' ಎಂದು ಶೀರ್ಷಿಕೆ ನೀಡಿದ್ದಾರೆ. ಫೋಟೋದಲ್ಲಿ, ರಾಜ್‌ಕುಮಾರ್‌ ರಾವ್‌ ಸೋಫಾ ಮೇಲೆ ಕುಳಿತು ನಿದ್ರೆ ಮಾಡುತ್ತಿರುವುದನ್ನು ಕಾಣಬಹುದು.

ಶರಣ್ ಶರ್ಮಾ ನಿರ್ದೇಶನದ ಮತ್ತು ಕರಣ್ ಜೋಹರ್ ಅವರ ಧರ್ಮ ಪ್ರೊಡಕ್ಷನ್ಸ್ ನಿರ್ಮಿಸಿದ ಈ ಚಿತ್ರದಲ್ಲಿ ಜಾನ್ವಿ ಮತ್ತು ರಾಜ್‌ಕುಮಾರ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.ಮಿಸ್ಟರ್ ಅಂಡ್ ಮಿಸಸ್ ಮಹಿ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ರಾಜ್‌ಕುಮಾರ್ ರಾವ್ ಅವರ ಚೊಚ್ಚಲ ಚಿತ್ರವಾಗಿದೆ.

Tap to resize

ಹಾರರ್ ಕಾಮಿಡಿ ಚಿತ್ರ 'ರೂಹಿ' ನಂತರ ಮತ್ತೊಮ್ಮೆ ಈ ಇಬ್ಬರೂ ತಾರೆಯರು ತೆರೆ ಹಂಚಿಕೊಳ್ಳಲಿದ್ದಾರೆ. ಚಿತ್ರವು ಅಕ್ಟೋಬರ್ 7, 2022 ರಂದು ಥಿಯೇಟರ್‌ಗಳಿಗೆ ಬರಬೇಕಿತ್ತು. ಆದರೆ  ಶೂಟಿಂಗ್ ಇನ್ನೂ ಮುಕ್ತಾಯವಾಗಿಲ್ಲ.

ಇತ್ತೀಚೆಗೆ ಜಾನ್ವಿ ಅವರ ಫೋಟೋ ಮತ್ತು ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಮುಂಬರುವ ಚಿತ್ರದಲ್ಲಿ ಅವರು ತಮ್ಮ ಪಾತ್ರಕ್ಕಾಗಿ ಕ್ರಿಕೆಟ್ ಮೈದಾನದಲ್ಲಿ ತರಬೇತಿ ಪಡೆಯುತ್ತಿರುವುದನ್ನು ಕಾಣಬಹುದು

ಜಾಹ್ನವಿ ಕಪೂರ್ ಮುಂದಿನ ದಿನಗಳಲ್ಲಿ ನಿರ್ದೇಶಕ ನಿತೇಶ್ ತಿವಾರಿ ಅವರ ಬಾವಲ್ ಚಿತ್ರದಲ್ಲಿ ವರುಣ್ ಧವನ್ ಎದುರು ಕಾಣಿಸಿಕೊಳ್ಳಲಿದ್ದಾರೆ, ಇದು ಏಪ್ರಿಲ್ 7, 2023 ರಂದು ಚಿತ್ರಮಂದಿರಗಳಿಗೆ ಬರಲಿದೆ.  

ಜಾನ್ವಿ ಕಪೂರ್ ಇತ್ತೀಚೆಗೆ ಸನ್ನಿ ಕೌಶಲ್ ಮತ್ತು ಮನೋಜ್ ಪಹ್ವಾ ಅವರೊಂದಿಗೆ ಥ್ರಿಲ್ಲರ್ ಚಿತ್ರ ಮಿಲಿಯಲ್ಲಿ ಕಾಣಿಸಿಕೊಂಡರು. ಈ ಸಿನಿಮಾದಲ್ಲಿ ಅವರು ಮೆಚ್ಚುಗೆ ಗಳಿಸಿದ್ದಾರೆ. ಮಾತುಕುಟ್ಟಿ ಕ್ಸೇವಿಯರ್ ನಿರ್ದೇಶನದ ಮಿಲಿ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಜಾನ್ವಿ ಅವರ ತಂದೆ ಬೋನಿ ಕಪೂರ್ ನಿರ್ಮಿಸಿದ್ದಾರೆ.

ರಾಜ್‌ಕುಮಾರ್ ಇತ್ತೀಚೆಗೆ ಒಟಿಟಿ ಪ್ಲಾಟ್‌ಫಾರ್ಮ್ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಿದ ಹುಮಾ ಖುರೇಷಿ ಮತ್ತು ರಾಧಿಕಾ ಆಪ್ಟೆ ಅವರೊಂದಿಗೆ 'ಮೋನಿಕಾ ಓ ಮೈ ಡಾರ್ಲಿಂಗ್' ಎಂಬ ಥ್ರಿಲ್ಲರ್ ಚಲನಚಿತ್ರದಲ್ಲಿ ಕಾಣಿಸಿಕೊಂಡರು. ಅವರು ನಿರ್ದೇಶಕ ಜೋಡಿ ರಾಜ್ ಮತ್ತು ಡಿಕೆ ಅವರ ಮುಂಬರುವ ಚಿತ್ರ 'ಗನ್ಸ್ ಎನ್ ಗುಲಾಬ್' ನಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!