ಡೇಟಿಂಗ್ ವದಂತಿ ಬೆನ್ನಲ್ಲೇ ಸಿದ್ಧಾಂತ್ ಮನೆಯಲ್ಲಿ ಕಾಣಿಸಿಕೊಂಡ ಅಮಿತಾಭ್ ಮೊಮ್ಮಗಳು ನವ್ಯಾ

Published : Nov 12, 2022, 03:28 PM IST

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ರೂಮರ್ ಬಾಯ್ ಫ್ರೆಂಡ್ ನಟ ಸಿದ್ದಾಂತ್ ಮನೆಯಲ್ಲಿ ಕಾಣಿಸಿಕೊಂಡಿದ್ದಾರೆ. ನವ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. 

PREV
16
ಡೇಟಿಂಗ್ ವದಂತಿ ಬೆನ್ನಲ್ಲೇ ಸಿದ್ಧಾಂತ್ ಮನೆಯಲ್ಲಿ ಕಾಣಿಸಿಕೊಂಡ ಅಮಿತಾಭ್ ಮೊಮ್ಮಗಳು ನವ್ಯಾ

ಸಿನಿಮಾರಂಗದಲ್ಲಿ ಡೇಟಿಂಗ್, ಲವ್, ಬ್ರೇಕಪ್ ವಿಚಾರಗಳು ಹೊಸದೇನಲ್ಲ. ಅದರಲ್ಲೂ ಬಾಲಿವುಡ್ ನಲ್ಲಿ ತುಸು ಹೆಚ್ಚಾಗಿಯೇ ಕೇಳಬರುತ್ತದೆ. ಇದೀಗ ಮತ್ತೊಂದು  ಡೇಟಿಂಗ್ ವಿಚಾರ ವೈರಲ್ ಆಗಿದೆ.  ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಹಾಗೂ ಖ್ಯಾತ ನಟ ಸಿದ್ಧಾಂತ್ ಚತುರ್ವೇದಿ ಡೇಟಿಂಗ್ ವಿಚಾರ.

26

ನವ್ಯಾ ಮತ್ತು ಸಿದ್ದಾಂತ್ ಇಬ್ಬರೂ ಪ್ರೀತಿಯಲ್ಲಿದ್ದಾರೆ ಎನ್ನುವ ಸುದ್ದಿ ಕೇಳದ ಕೆಲವು ತಿಂಗಳಿಂದ ಬಾಲಿವುಡ್ ಅಂಗಳದಲ್ಲಿ ಹರಿದಾಟುತ್ತಿದೆ. ಇಬ್ಬರ ಡೇಟಿಂಗ್ ವಿಚಾರ ವೈರಲ್ ಆಗಿರುವ ಬೆನ್ನಲ್ಲೇ ನಟಿ ನವ್ಯಾ ನವೇಲಿ ಸಿದ್ಧಾಂತ್ ಮನೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. 

36

ಇತ್ತೀಚಿಗಷ್ಟೆ ನವ್ಯಾ ನವೇಲಿ ರೂಮರ್ ಬಾಯ್ ಫ್ರೆಂಡ್ ಸಿದ್ದಾಂತ್ ಮನೆಯೊಳಗೆ ಎಂಟ್ರಿ ಕೊಡುತ್ತಿರುವ ದೃಶ್ಯ ಕಾಮ್ಯರಾಗೆ ಸೆರೆಯಾಗಿದೆ. ಬಳಿ ಬಣ್ಣದ ಕುರ್ತ ಧರಿಸಿದ್ದ ನವ್ಯಾ ಸಿದ್ದಾಂತ್ ಮನೆಗೆ ಹೋಗುತ್ತಿದ್ದಾರೆ. ಪಾಪರಾಜಿಗಳಿಗೆ ಸೆರೆಯಾಗಿರುವ ನವ್ಯಾ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

46

ಇತ್ತೀಚಿಗಷ್ಟೆ ನಟ ಸಿದ್ಧಾಂತ್ ಸಿನಿಮಾ ಪ್ರಚಾರ ವೇಳೆ ಡೇಟಿಂಗ್ ವಿಚಾರದ ಬಗ್ಗೆ ಮೊದಲ ಬಾರಿಗೆ ಬಹಿರಂಗ ಪಡಿಸಿದ್ದರು. 'ನಾನು ಡೇಟಿಂಗ್ ಮಾಡುತ್ತಿದ್ದೀನಿ ಎನ್ನುವ ವದಂತಿ ಇದೆ. ಅದು ನಿಜವಾಗಲಿ ಎಂದು ನಾನು ಬಯಸುತ್ತೇನೆ' ಎಂದು ಹೇಳಿದ್ದರು. ಈ ಮೂಲಕ ಸುದ್ದಿ ನಿಜವಲ್ಲ ಎಂದು ಪರೋಕ್ಷವಾಗಿ ಹೇಳಿದರು. ಆದರೀಗ ಸಿದ್ಧಾಂತ್ ಮನೆಯಲ್ಲಿ ನವ್ಯಾ ಕಾಣಿಸಿಕೊಂಡಿರುವುದು ವದಂತಿಗೆ ಮತ್ತಷ್ಟು ಪುಷ್ಠಿ ಸಿಕ್ಕಂತೆ ಆಗಿದೆ. 

56

ಅಮಿತಾಭ್ ಬಚ್ಚನ್ ಮೊಮ್ಮಗಳು ನವ್ಯಾ ನವೇಲಿ ಸದ್ಯ 'ವಾಟ್ ದಿ ಹೆಲ್ ನವ್ಯಾ' ಪೋಡ್ ಕಾಸ್ಟ್ ನಡೆಸುತ್ತಿದ್ದಾರೆ. ಈ ಶೋನಲ್ಲಿ ನವ್ಯಾ ಜೊತೆ ಅಜ್ಜಿ ಜಯಾ ಬಚ್ಚನ್, ತಾಯಿ ಶ್ವೇತಾ ಬಚ್ಚನ್ ಅವರನ್ನು ಸಂದರ್ಶನ ಮಾಡಿದ್ದರು. 

66

ಇತ್ತೀಚಿಗಷ್ಟೆ ಮೊಮ್ಮಗಳು ನವ್ಯಾ ಜೊತೆ ಸಂದರ್ಶನದಲ್ಲಿ ಭಾಗಿಯಾಗಿದ್ದ ಜಯಾ ಬಚ್ಚನ್ ಡೇಟಿಂಗ್ ಸಲಹೆ ನೀಡಿದರು. 'ಮದುವೆಯಾಗದೆ ಮಗುವನ್ನು ಪಡೆದರೂ ನನಗೇನು ಸಮಸ್ಯೆ ಇಲ್ಲ' ಎಂದು ಜಯಾ ಬಚ್ಚನ್ ಹೇಳಿದರು. ಈ  ಹೇಳಿಕೆ ವೈರಲ್ ಆಗಿತ್ತು. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories