ನಾನು ಮಕ್ಕಳನ್ನು ಬೆಳೆಸಿದ ರೀತಿ ನೋಡಿದ್ರೆ ನನ್ನ ಅಪ್ಪ-ಅಮ್ಮ ತುಂಬಾ ಹೆಮ್ಮೆ ಪಡುತ್ತಿದ್ರು; ಶಾರುಖ್ ಖಾನ್

First Published | Nov 12, 2022, 1:23 PM IST

ಈಗ ನನ್ನ ಪರಿಸ್ಥಿತಿ ನೋಡಿದ್ದರೆ ಅಮ್ಮ ಬೇಸರ ಮಾಡಿಕೊಳ್ಳುತ್ತಿದ್ದಳು ಆರೋಗ್ಯದ ಕಾಳಜಿ ಹೆಚ್ಚಾಗುತ್ತಿತ್ತು ಎಂದು ಬಿ-ಟೌನ್ ಕಿಂಗ್  ಮಾತನಾಡಿದ್ದಾರೆ....

ಶಾರ್ಜಾದಲ್ಲಿ ನಡೆದ ಶಾರ್ಜಾ ಅಂತರಾಷ್ಟ್ರೀಯ ಪುಸ್ತಕ ಮೇಳ ಕಾರ್ಯಕ್ರಮದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಭಾಗಿಯಾಗಿದ್ದರು. ಈ ವೇಳೆ  Global Icon of Cinema and Cultural Narrative ಪ್ರಶಸ್ತಿ ಕೊಟ್ಟು ಗೌರವಿಸಲಾಗಿತ್ತು.

ಪ್ರಶಸ್ತಿ ಪಡೆದ ನಂತರ ತಂದೆ-ತಾಯಿ ಫ್ಯಾಮಿಲಿ ಬಗ್ಗೆ ಶಾರುಖ್ ಮಾತನಾಡಿದ್ದಾರೆ. 'ನನ್ನ ತಾಯಿ ನನ್ನ ಜೊತೆಗಿಲ್ಲ ಆದರೆ ಅಕೆ ಬದುಕಿದ್ದರೆ ಮೊದಲು ನನ್ ಆರೋಗ್ಯದ ಬಗ್ಗೆ ಚಿಂತೆ ಮಾಡುತ್ತಿದ್ದಳು'ಎಂದು ಶಾರುಖ್ ಮಾತನಾಡಿದ್ದಾರೆ.
 

Tap to resize

 'ಏನ್ ಮಗನೆ ನೀನು ಇಷ್ಟೊಂದು ಸಣ್ಣ ಆಗಿದ್ಯಾ ಸ್ವಲ್ಪ ದಪ್ಪ ಆಗು. ಮುಖ ಸಣ್ಣಗಾಗಿದೆ ಕೆನ್ನೆ ಒಳಗೋಗಿದೆ ಊಟ ಸರಿಯಗಿ ತಿನ್ನು ಎಂದು ಅಮ್ಮ ಹೇಳುತ್ತಿದ್ದಳು.'

 'ಆದರೆ ನಾನು ಮಾಡಿರುವ ಹೆಸರು ಮತ್ತು ಸಾಧನೆ ನೋಡಿದ್ದರೆ ನನ್ನ ತಂದೆ ತಾಯಿ ಹೆಮ್ಮ ಪಡುತ್ತಿದ್ದರು ಅನಿಸುತ್ತದೆ. ಇದು ಸಾಧನೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಿರುವೆ'

'ನನ್ನ ವೃತ್ತಿ ಜೀವನ ಸಾಧನೆ ಮಾತ್ರವಲ್ಲ ನನ್ನ ಮೂವರು ಮಕ್ಕಳನ್ನು ಬೆಳೆಸುತ್ತಿರುವ ರೀತಿ ನೋಡಿದ್ದರೂ ಖುಷಿ ಪಡುತ್ತಿದ್ದರು ಹೆಮ್ಮೆ ಪಡುತ್ತಿದ್ದರು' ಎಂದಿದ್ದಾರೆ ಶಾರುಖ್.

 ಗೌರಿ ಖಾನ್‌ ನ ಪ್ರೀತಿಸಿ ಶಾರುಖ್ ಮದುವೆಯಾಗಿ ಬಾಲಿವುಡ್ ಚಿತ್ರರಂಗದಲ್ಲಿ ಹೆಸರು ಮಾಡಿದ್ದಾರೆ. ಬ್ಯುಸಿನೆಸ್‌ ಕ್ಷೇತ್ರದಲ್ಲಿ ಗೌರಿ ತೊಡಗಿಸಿಕೊಂಡಿದ್ದಾರೆ. ಅಯಾನ್, ಸುಹಾನ ಮತ್ತು ಅರ್ಬಾಜ್ ಮೂವರು ಮಕ್ಕಳಿದ್ದಾರೆ.

Latest Videos

click me!