Year Ender 2021: ಕತ್ರಿನಾ - ವರುಣ್‌ ಧವನ್‌ ಈ ವರ್ಷ ಮದುವೆಯಾದ ಜೋಡಿಗಳು!

Published : Dec 16, 2021, 06:38 PM ISTUpdated : Dec 16, 2021, 06:41 PM IST

ಈ ವರ್ಷ ಬಾಲಿವುಡ್‌ನಲ್ಲಿ (Bollywood) ಸಾಕಷ್ಟು ಮದುವೆಗಳು ನೆಡೆಯುತ್ತಿವೆ. ಕಳೆದ ವರ್ಷ  ಕೋವಿಡ್ 19, ಕಾರಣದಿಂದಾಗಿ ವಿಳಂಬವಾಗಿದ್ದ ಅನೇಕ ವಿವಾಹಗಳು (Wedding)ಈ ವರ್ಷ ನೇರವೇರಿದೆ. ಸಾರ್ವಜನಿಕ ಮತ್ತು ಮಾಧ್ಯಮದಿಂದ ದೂರವಿರುವ ಖಾಸಗಿ ಕಾರ್ಯಕ್ರಮಗಳಲ್ಲಿ ಸಾಕಷ್ಟು ಸೆಲೆಬ್ರಿಟಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಂತರ, ನವವಿವಾಹಿತರು ತಮ್ಮ ಮದುವೆಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ, ಈ ವರ್ಷ ಮದುವೆಯಾದ ಸೆಲೆಬ್ರೆಟಿಗಳು ಇವರು.  

PREV
111
Year Ender 2021: ಕತ್ರಿನಾ - ವರುಣ್‌ ಧವನ್‌ ಈ ವರ್ಷ ಮದುವೆಯಾದ ಜೋಡಿಗಳು!

ಕತ್ರಿನಾ ಕೈಫ್ (Katrina Kaif) ಡಿಸೆಂಬರ್ 09 ರಂದು ಆಪ್ತ ಸ್ನೇಹಿತರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ವಿಕ್ಕಿ ಕೌಶಲ್ (Vicky Kaushal) ಅವರನ್ನು  ವಿವಾಹವಾದರು. ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಸಿಕ್ಸ್ ಸೆನ್ಸ್ ಫೋರ್ಟ್ ಬರ್ವಾರಾದಲ್ಲಿ   ದುಬಾರಿ-ರಾಯಲ್ ಶೈಲಿಯ ಈ ಜೋಡಿ ವಿವಾಹವಾದರು.
  

211

10 ವರ್ಷಗಳ ಡೇಟಿಂಗ್‌ ನಂತರ, ರಾಜ್‌ಕುಮಾರ್ ರಾವ್ ( Rajkummar Rao) ಅವರು ತಮ್ಮ ನಟಿ ಗೆಳತಿ ಪತ್ರಲೇಖಾ (Patralekhaa) ಅವರೊಂದಿಗೆ ನವೆಂಬರ್ 15, 2021 ರಂದು ನ್ಯೂ ಚಂಡೀಗಢದ ಒಬೆರಾಯ್ ಸುಖವಿಲಾಸ್ ಸ್ಪಾ ರೆಸಾರ್ಟ್‌ನಲ್ಲಿ ನಿಕಟ ವಿವಾಹ ಸಮಾರಂಭದಲ್ಲಿ ಸಪ್ತಪದಿ ತುಳಿದರು.
  
 

311

ಅಂಕಿತಾ ಲೋಖಂಡೆ (Ankita Lokhande) ಅವರು ತಮ್ಮ ದೀರ್ಘಕಾಲದ ಗೆಳೆಯ, ಉದ್ಯಮಿ ವಿಕ್ಕಿ ಜೈನ್ ( Vicky Jain) ಅವರನ್ನು ಡಿಸೆಂಬರ್ 14 ರಂದು ವಿವಾಹವಾದರು. ದಂಪತಿಗಳು ತಮ್ಮ ವಿವಾಹ  ಮತ್ತು ಪಾರ್ಟಿ ಹಲವಾರು ವೀಡಿಯೊಗಳು ಮತ್ತು ಫೋಟೋಗಳು ವೈರಲ್ ಆಗಿವೆ. 
 

411

ಯಾಮಿ ಗೌತಮ್ (Yami Gautam)  ಜೂನ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ URI ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್ (Aditya Dhar) ಅವರೊಂದಿಗೆ  ವಿವಾಹವಾದರು. ಹಿಮಾಚಲ ಪ್ರದೇಶದ ಮಂಡಿಯಲ್ಲಿರುವ ಯಾಮಿ ಅವರ ಫಾರ್ಮ್‌ಹೌಸ್‌ನಲ್ಲಿ ನಡೆದ ಸಾಧಾರಣ ಸಮಾರಂಭದಲ್ಲಿ ಪಹಾಡಿ ವಿಧಿವಿಧಾನಗಳ ಪ್ರಕಾರ ದಂಪತಿಗಳು ಮದುವೆಯಾದರು.
  

511

ಈ ವರ್ಷದ ಜನವರಿಯಲ್ಲಿ, ವರುಣ್ ಧವನ್ (Varun Dhawan) ತನ್ನ ದೀರ್ಘಕಾಲದ ಗೆಳತಿ, ಫ್ಯಾಷನ್ ಡಿಸೈನರ್ ನತಾಶಾ ದಲಾಲ್ (Natasha Dalal) ಅವರನ್ನು ಅಲಿಬಾಗ್ ಬಳಿಯ ರೆಸಾರ್ಟ್‌ನಲ್ಲಿ ವಿವಾಹವಾದರು. ವರುಣ್ ಜನವರಿ 24 ರಂದು ಮದುವೆಯ ಚಿತ್ರಗಳನ್ನು ಪೋಸ್ಟ್ ಮಾಡಿ 'ಜೀವಮಾನದ ಪ್ರೀತಿ ಈಗ ಅಧಿಕೃತವಾಗಿದೆ' ಎಂದು ಬರೆದಿದ್ದಾರೆ. 

611

ಮುಂಬೈನಲ್ಲಿ ನಡೆದ ಸಮಾರಂಭದಲ್ಲಿ, ಫೆಬ್ರವರಿ 15 ರಂದು ISB ಪದವೀಧರ-ಉದ್ಯಮಿ ವೈಭವ್ ರೇಖಿ (Vaibhav Rekhi) ಅವರೊಂದಿಗೆ ದಿಯಾ ಮಿರ್ಜಾ (Dia Mirza) ವಿವಾಹವಾದರು. ಅವರು ಮೇ 14, 2021 ರಂದು ತಮ್ಮ ಮಗ ಅವ್ಯಾನ್ ಆಜಾದ್ ಅವರನ್ನು ಸ್ವಾಗತಿಸಿದರು.
  

711

ತುಮ್ ಬಿನ್ 2 ಸ್ಟಾರ್ ಆದಿತ್ಯ ಸೀಲ್ (Aditya Seal) ಅವರು ಅನುಷ್ಕಾ ರಂಜನ್ (Anushka Ranjan ) ಅವರನ್ನು ನವೆಂಬರ್ 21 ರಂದು ಮುಂಬೈನ ಜುಹುವಿನಲ್ಲಿ ವಿವಾಹವಾದರು. ಆಲಿಯಾ ಭಟ್, ವಾಣಿ ಕಪೂರ್ ಮತ್ತು ಇನ್ನೂ ಅನೇಕ ಸ್ಟಾರ್ಸ್‌ ಇವರ ಮದುವೆಯಲ್ಲಿ ಭಾಗವಹಿಸಿದ್ದರು.

 

811

ಅನಿಲ್‌ ಕಪೂರ್‌ ಕಿರಿಯ ಪುತ್ರಿ ಚಲನಚಿತ್ರ ನಿರ್ಮಾಪಕಿ ರಿಯಾ ಕಪೂರ್ (Rhea Kapoor)  ಮತ್ತು ಕರಣ್ ಬೂಲಾನಿ (Karan Boolani) ಆಗಸ್ಟ್ 14 ರಂದು ಮುಂಬೈನ ಜುಹುದಲ್ಲಿರುವ ಅನಿಲ್ ಕಪೂರ್ ಅವರ ನಿವಾಸದಲ್ಲಿ ಆಪ್ತ ಸಮಾರಂಭದಲ್ಲಿ ವಿವಾಹವಾದರು.


 

911

ಪ್ಯಾರಿಸ್ ಹಿಲ್ಟನ್ (Paris Hilton ) ನವೆಂಬರ್ 11 ರಂದು ಕಾರ್ಟರ್ ರೀಮ್ ಅವರನ್ನು ವಿವಾಹವಾದರು. ಪ್ಯಾರಿಸ್ ಹಿಲ್ಟನ್ ಅವರ ವಿವಾಹದ ರಿಸೆಪ್ಷನ್‌  ಆಕೆಯ ದಿವಂಗತ ಅಜ್ಜ ಬ್ಯಾರನ್ ಹಿಲ್ಟನ್ ಅವರ ಬೆಲ್ ಏರ್ ಎಸ್ಟೇಟ್‌ನಲ್ಲಿ ನೆಡೆಯಿತು

1011

ಎವೆಲಿನ್ ಶರ್ಮಾ (Evelyn Sharma) ಈ ವರ್ಷ ಮೇ 15 ರಂದು ಆಸ್ಟ್ರೇಲಿಯಾದ ಬ್ರಿಸ್ಬೇನ್‌ನಲ್ಲಿ ತನ್ನ ಬಹುಕಾಲದ ಗೆಳೆಯ ಡಾ ತುಷಾನ್ ಭಿಂಡಿ ( Dr Tushaan Bhindi) ಅವರನ್ನು ವಿವಾಹವಾದರು. ಅವರ ವಿವಾಹವು ತುಂಬಾ ಸರಳವಾಗಿ ನೆರೆವೇರಿತು. 
 

1111

ಸಿಂಗರ್‌ ಅರಿಯಾನಾ ಗ್ರಾಂಡೆ (Ariana Grande) ಅವರು ಮೇ 15 ರಂದು ಡಾಲ್ಟನ್ ಗೊಮೆಜ್ (Dalton Gomez) ಅವರನ್ನು ಮದುವೆಯಾದರು. ಈ ಜೋಡಿಯ ಮದುವೆಯಲ್ಲಿ ಆಪ್ತ ಸ್ನೇಹಿತರು ಮತ್ತು ಕುಟುಂಬ ಸದಸ್ಯರು ಮಾತ್ರ ಭಾಗವಹಿಸಿದ್ದರು.

Read more Photos on
click me!

Recommended Stories