Round Up 2021: ಆಮೀರ್‌ ಖಾನ್‌- ಸಮಂತಾ ಡಿವೋರ್ಸ್‌ ಪಡೆದ ಸೆಲೆಬ್ರಿಟಿಗಳು!

First Published | Dec 17, 2021, 8:04 PM IST

 2021ರಲ್ಲಿ ಹಲವು ಸೆಲೆಬ್ರೆಟಿ ಕಪಲ್‌ಗಳು ಹಸೆಮಣೆ ಏರಿರುವುದನ್ನು ನೋಡಿದ್ದೇವೆ. ಆದರೆ ಅನೇಕ ಸೆಲೆಬ್ರಿಟಿಗಳು ತಮ್ಮ ಸಂಗಾತಿಗಳಿಗೆ ವಿಚ್ಛೇದನ (Divorce) ನೀಡಲು ಸಹ ನಿರ್ಧರಿಸಿದರು. ಇದರಲ್ಲಿ ಬಾಲಿವುಡ್‌ನ (Bollywod) ನಟ ಆಮೀರ್ ಖಾನ್ ನಂಬರ್ ಒನ್ ಸ್ಥಾನದಲ್ಲಿದ್ದಾರೆ. ಮಿಸ್ಟರ್ ಪರ್ಫೆಕ್ಷನಿಸ್ಟ್ ತಮ್ಮ ಎರಡನೇ ಪತ್ನಿ ಕಿರಣ್ ರಾವ್‌ನಿಂದ ಬೇರ್ಪಡುವುದಾಗಿ ಘೋಷಿಸಿದಾಗ, ಎಲ್ಲರೂ ಆಘಾತಕ್ಕೊಳಗಾದರು. ಈ ವರ್ಷ ವೈವಾಹಿಕ ಜೀವನವು ಕೊನೆಗೊಳಿಸಿ ವಿಚ್ಛೇದನ ಪಡೆಯಲು ನಿರ್ಧರಿಸಿದ ಸೆಲೆಬ್ರಿಟಿ ಜೋಡಿಗಳಿವು.

ಆಮೀರ್ ಖಾನ್ (Aamir Khan) ಮತ್ತು ಕಿರಣ್ ರಾವ್  (Kiran Rao) ಜಂಟಿ ಹೇಳಿಕೆ ನೀಡಿ, ತಮ್ಮ 15 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿದರು. 'ಈ 15 ಸುಂದರ ವರ್ಷಗಳಲ್ಲಿ ನಾವು ಒಟ್ಟಿಗೆ ಜೀವನದ ಅನುಭವಗಳು, ಸಂತೋಷ ಮತ್ತು ನಗುವನ್ನು ಹಂಚಿಕೊಂಡಿದ್ದೇವೆ ಮತ್ತು ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಲ್ಲಿ ಮಾತ್ರ ಬೆಳೆದಿದೆ. ಈಗ ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಬಯಸುತ್ತೇವೆ' ಎಂದು ಅವರು ಹೇಳಿದರು. 

ಈಗ ನಾವು ಮಗುವಿನ ಪೋಷಕರಾಗಿ ಒಟ್ಟಿಗೆ ಇರುತ್ತೇವೆ ಎಂದು ಅವರು ಹೇಳಿದ ಆಮೀರ್ ಮತ್ತು ಕಿರಣ್ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಆದರೆ ತಮ್ಮ ಮಗ ಆಜಾದ್‌ಗಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಅವರ ಬಾಂಧವ್ಯ ಮೊದಲಿನಂತೆಯೇ ಇದೆ. ‘ಲಾಲ್ ಸಿಂಗ್ ಚಡ್ಡಾ’ ಚಿತ್ರದ ಶೂಟಿಂಗ್ ವೇಳೆ ಇಬ್ಬರೂ ಲಡಾಖ್ ಮತ್ತು ಕಾಶ್ಮೀರದಲ್ಲಿ ಒಟ್ಟಿಗೆ ಇದ್ದರು.

Tap to resize

ಸೌತ್‌ನ ಸೂಪರ್‌ಸ್ಟಾರ್‌ಗಳಾದ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಾಗ ಚೈತನ್ಯ (Naga Chaitanya) ಕೂಡ ಬೇರ್ಪಡುವ ಮೂಲಕ ಅಭಿಮಾನಿಗಳನ್ನು ಅಚ್ಚರಿಗೊಳಿಸಿದರು. ಅವರು 10 ವರ್ಷಗಳ ಸ್ನೇಹ ಮತ್ತು ನಾಲ್ಕು ವರ್ಷಗಳ ಮದುವೆಯ ಸಂಬಂಧವನ್ನು ವಿಚ್ಛೇದನದ ಮೂಲಕ ಕೊನೆಗೊಳಿಸಿಕೊಂಡರು.

ಮದುವೆಯಾದ  8 ವರ್ಷಗಳ ನಂತರ, ಶಿಖರ್ ಧವನ್ (Shikhar Dhawan) ಮತ್ತು ಆಯೇಶಾ ಮುಖರ್ಜಿ (Aesha Mukerji) ಈ ವರ್ಷ ಬೇರೆಯಾಗಲು ನಿರ್ಧರಿಸಿದರು. ಇಬ್ಬರು 2012 ರಲ್ಲಿ ವಿವಾಹವಾದ ಈ ಜೋಡಿ ಜೋರಾವರ್ ಎಂಬ ಮಗನನ್ನು ಹೊಂದಿದ್ದಾರೆ ಆಯೇಶಾ ಮುಖರ್ಜಿ ಮೆಲ್ಬೋರ್ನ್‌ನವರು ಮತ್ತು ಹವ್ಯಾಸಿ ಬಾಕ್ಸರ್ ಆಗಿದ್ದರು. ಅವರಿಗೆ  ಈ ಹಿಂದೆ ಮದುವೆಯಾಗಿದ್ದು, ಎರಡು ಮಕ್ಕಳನ್ನು ಹೊಂದಿದ್ದಾರೆ. 
 

ಗಾಯಕ ಹನಿ ಸಿಂಗ್ (Honey Singh)  ಆಗಸ್ಟ್ 3 ರಂದು ಪತ್ನಿ ಶಾಲಿನಿ ತಲ್ವಾರ್ (Shalini Talwar)  ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದರು. ಶಾಲಿನಿ ಅವರು ರಾಪರ್ ಹನಿ ಸಿಂಗ್ ವಿರುದ್ಧ ಕೌಟುಂಬಿಕ ದೌರ್ಜನ್ಯ ಮತ್ತು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದರು. ಇದರ ನಂತರ, ತನ್ನ ವಿರುದ್ಧದ ಸುಳ್ಳು ಆರೋಪಗಳಿಂದ ತೀವ್ರ ದುಃಖಿತನಾಗಿದ್ದೇನೆ ಎಂದು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಗಾಯಕ ಹೇಳಿಕೆಯನ್ನು ನೀಡಿದ್ದಾರೆ.

ನಟಿ ಕೀರ್ತಿ ಕುಲ್ಹಾರಿ ( Kirti Kulhari) ತಮ್ಮ ಪತಿ ಸಾಹಿಲ್ ಸೆಹಗಲ್ (Saahil Sehgal) ಅವರಿಂದ ಬೇರೆಯಾಗಲು ನಿರ್ಧರಿಸಿದ್ದರು. ಮದುವೆಯಾದ 5 ವರ್ಷಗಳ ನಂತರ ಇಬ್ಬರೂ ವಿಚ್ಛೇದನ ಪಡೆದರು. ನನ್ನ ಪತಿ ಸಾಹಿಲ್ ಮತ್ತು ನಾನು ಬೇರೆಯಾಗಲು ನಿರ್ಧರಿಸಿದ್ದೇವೆ ಎಂದು ಎಲ್ಲರಿಗೂ ಹೇಳಲು ಬಯಸುತ್ತೇನೆ ಎಂದು 'ಮಿಷನ್ ಮಂಗಲ್' ನಟಿ ಹೇಳಿಕೆ ನೀಡಿದ್ದಾರೆ. ಕೀರ್ತಿ ಮತ್ತು ಸಾಹಿಲ್ 2016 ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

Latest Videos

click me!