ಕಾರಿನೊಳಗಿನ ಸೀನ್‌ನಿಂದ ಹೆಚ್ಚಿದ ರಾಜಕೀಯ ಒತ್ತಡ, ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಹೆಚ್ಚಾಗುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಒತ್ತಡಗಳು ಹೆಚ್ಚಾಗಿದೆ.
ಯಶ್ ಅಭಿನಯದ ಟಾಕ್ಸಿಕ್ ಟೀಸರ್ ಭಾರಿ ಸಂಚಲನ ಸೃಷ್ಟಿಸಿದೆ. ಕನ್ನಡ ಸಿನಿಮಾದ ಟೀಸರ್ ದೇಶ ವಿದೇಶಗಳಲ್ಲಿ ಭಾರಿ ಧೂಳೆಬ್ಬಿಸಿದೆ. ಟಾಕ್ಸಿಕ್ ಟೀಸರ್‌ನ ಪ್ರತಿ ಫ್ರೇಮ್ ಕೂಡ ಚರ್ಚೆಯಾಗುತ್ತಿದೆ. ಈ ಪೈಕಿ ಅತೀ ಹೆಚ್ಚು ಚರ್ಚೆ, ವಾದ ವಿವಾದಕ್ಕೆ ಕಾರಣವಾಗಿದ್ದು ಯಶ್ ಎಂಟ್ರಿಗೆ ನೀಡಿರುವ ಕಾರಿನೊಳಗಿನ ಸೀನ್.
26
ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್ ತಲೆನೋವು ಹೆಚ್ಚಳ
ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್ ಯಶ್ ಟಾಕ್ಸಿಕ್ ಟೀಸರ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಉಕ್ರೇನ್ ನಟಿ ಹಾಗೂ ಆಕೆಯ ಧೈರ್ಯಕ್ಕೆ ಜನರು ದಂಗಾಗಿದ್ದಾರೆ. ಅಡ್ವಾನ್ಸ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ಪಡ್ಡೆ ಹುಡುಗರ ನೆಚ್ಚಿನ ತಾರೆಯಾಗಿ ಹೊರಹೊಮ್ಮಿದ್ದಾರೆ. ಯಶ್ ಟಾಕ್ಸಿಕ್ ಟೀಸರ್ ಯಶಸ್ಸಿನ ಬೆನ್ನಲ್ಲೇ ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್‌ಗೆ ತಲೆನೋವು ಹೆಚ್ಚಾಗಿದೆ.
36
ನಟಿಗೆ ಬಂತು ರಾಜಕೀಯ ಒತ್ತಡ
ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್‌ಗೆ ಸೋಶಿಯಲ್ ಮೀಡಿಯಾದಲ್ಲಿ ಮೆಚ್ಚುಗೆ ಜೊತೆಗೆ ಟೀಕೆಗಳು ವ್ಯಕ್ತವಾಗುತ್ತಿದೆ. ಕರ್ನಾಟಕ, ಭಾರತದಲ್ಲಿ ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್‌ಗೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗುತ್ತಿದೆ. ಆದರೆ ಉಕ್ರೇನ್ ಸೇರಿದಂತೆ ಇತರ ದೇಶಗಳಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ. ಇದರ ಬೆನ್ನಲ್ಲೇ ರಾಜಕೀಯ ಒತ್ತಡಗಳು ಹೆಚ್ಚಾಗಿದೆ. ನಟಿ ವಿರುದ್ಧ ಹಲವು ಪ್ರಭಾವಿ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಇದು ನಟಿಯ ನೆಮ್ಮದಿಯೆನ್ನೇ ಕೆಡಿಸಿದೆ.
ಇನ್‌ಸ್ಟಾಗ್ರಾಂ ಡಿಲೀಟ್ ಮಾಡಿದ ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್
ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್ ಮೇಲೆ ರಾಜಕೀಯ ಒತ್ತಡಗಳು, ಪ್ರಭಾವಿಗಳ ಒತ್ತಡ, ಆಕ್ರೋಶ, ಟೀಕೆಗಳು ಹೆಚ್ಚಾದ ಬೆನ್ನಲ್ಲೇ ತಮ್ಮ ಇನ್‌ಸ್ಟಾಗ್ರಾಂ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಮಿಲಿಯನ್ ಫಾಲೋವರ್ಸ್ ಇದ್ದ ಇನ್‌ಸ್ಟಾಗ್ರಾಂ ಖಾತೆಯನ್ನೇ ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್ ಡಿಲೀಟ್ ಮಾಡಿದ್ದಾರೆ.
56
ಮೌನಕ್ಕೆ ಜಾರಿದ ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್
ಇನ್‌ಸ್ಟಾಗ್ರಾಂ ಖಾತೆಯನ್ನು ಡಿಲೀಟ್ ಮಾಡಿದ ಬಿಟ್ರಿಝ್ ತೌಫೆನ್‌ಬ್ಯಾಕ್ ಇದೀಗ ಯಾರ ಕರೆಯನ್ನು ಸ್ವೀಕರಿಸುತ್ತಿಲ್ಲ ಅನ್ನೋ ಮಾತುಗಳು ಕೇಳಿಬಂದಿದೆ. ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್ ಮೌನಕ್ಕೆ ಜಾರಿದ್ದಾರೆ. ಯಾರ ಮೆಸೇಜ್‌ಗಳಿಗೂ ಸ್ಪಂದಿಸುತ್ತಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.
ಮೌನಕ್ಕೆ ಜಾರಿದ ನಟಿ ಬಿಟ್ರಿಝ್ ತೌಫೆನ್‌ಬ್ಯಾಕ್
66
ಭಾರತದಲ್ಲಿ ಒಂದು ಸೀನ್‌ನಿಂದ ಹಲವು ದೂರು
ಆಮ್ ಆದ್ಮಿ ಪಾರ್ಟಿ ಮಹಿಳಾ ವಿಭಾಗ ಈಗಾಗಗಲೇ ಮಹಿಳಾ ಆಯೋಗಕ್ಕೆ ದೂರು ನೀಡಿದೆ. ಟಾಕ್ಸಿಕ್ ಟೀಸರ್ ವಿರುದ್ಧ ಗುಡುಗಿದ್ದಾರೆ. ಇತ್ತ ಮಹಿಳಾ ಆಯೋಗ, ಕೇಂದ್ರ ಸೆನ್ಸರ್ ಮಂಡಳಿಗೆ ಪತ್ರ ಬರೆದು ವಿವರಣೆ ಕೇಳಿದೆ. ಇದೇ ವೇಳೆ ಇತರ ಕೆಲ ಸಂಘಟನೆಗಳಿಂದಲೂ ದೂರು ದಾಖಲಾಗಿದೆ.
ಭಾರತದಲ್ಲಿ ಒಂದು ಸೀನ್‌ನಿಂದ ಹಲವು ದೂರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.