ರಾಮ ಅಯೋಧ್ಯೆ ಬಿಟ್ಟು ಕಾಡಿಗೆ ತೆರಳುವ ಸನ್ನಿವೇಶದಲ್ಲಿ ಬರುವ ಹಾಡು. ಈ ಹಾಡಿನ ರೆಕಾರ್ಡಿಂಗ್‌ಗೆ ಏಳು ದಿನಗಳ ಸುದೀರ್ಘ ಅವಧಿ ಹಿಡಿಯಿತು. ನಮ್ಮ ಮನಸ್ಸು ಅದೆಷ್ಟು ಭಾವುಕವಾಗಿತ್ತೆಂದರೆ ನಮಗೆ ಕಣ್ಣೀರನ್ನು ತಡೆ ಹಿಡಿಯಲಾಗುತ್ತಿರಲಿಲ್ಲ.
ನಿತೇಶ್ ತಿವಾರಿ ನಿರ್ದೇಶನದಲ್ಲಿ ಯಶ್, ರಣಬೀರ್ ಕಪೂರ್ ಮುಖ್ಯಪಾತ್ರದಲ್ಲಿ ನಟಿಸಿರುವ ‘ರಾಮಾಯಣ’ ಸಿನಿಮಾದ ಹಾಡೊಂದರ ರೀರೆಕಾರ್ಡಿಂಗ್ ಬಗ್ಗೆ ಚಿತ್ರ ಸಾಹಿತಿ ಡಾ ಕುಮಾರ್ ವಿಶ್ವಾಸ್ ಭಾವನಾತ್ಮಕವಾಗಿ ವಿವರಿಸಿದ್ದಾರೆ.
25
ಕಣ್ಣೀರನ್ನು ತಡೆ ಹಿಡಿಯಲಾಗುತ್ತಿರಲಿಲ್ಲ
ಅದು ರಾಮ ಅಯೋಧ್ಯೆ ಬಿಟ್ಟು ಕಾಡಿಗೆ ತೆರಳುವ ಸನ್ನಿವೇಶದಲ್ಲಿ ಬರುವ ಹಾಡು. ಈ ಹಾಡಿನ ರೆಕಾರ್ಡಿಂಗ್‌ಗೆ ಏಳು ದಿನಗಳ ಸುದೀರ್ಘ ಅವಧಿ ಹಿಡಿಯಿತು. ನಮ್ಮ ಮನಸ್ಸು ಅದೆಷ್ಟು ಭಾವುಕವಾಗಿತ್ತೆಂದರೆ ನಮಗೆ ಕಣ್ಣೀರನ್ನು ತಡೆ ಹಿಡಿಯಲಾಗುತ್ತಿರಲಿಲ್ಲ.
35
ಸುದೀರ್ಘ ಸಮಯ ಹಿಡಿಯಿತು
ಭಕ್ತಿ ಮತ್ತು ಭಾವನೆಗಳು ತುಂಬಿ ಹರಿಯುತ್ತಿದ್ದ ಕಾರಣ ಕೆಲಸ ಮುಗಿಸಲು ಸುದೀರ್ಘ ಸಮಯ ಹಿಡಿಯಿತು ಎಂದು ಡಾ. ಕುಮಾರ್ ಹೇಳಿದ್ದಾರೆ. ಹ್ಯಾನ್ಸ್ ಜಿಮ್ಮರ್, ಎ ಆರ್ ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಈ ಹಾಡು ಮೂಡಿಬಂದಿದೆ.
ರಾಮನಾಗಿ ರಣಬೀರ್ ಕಪೂರ್, ರಾವಣನ ಪಾತ್ರದಲ್ಲಿ ಯಶ್ ನಟಿಸಲಿದ್ದಾರೆ. ಸೀತೆ ಪಾತ್ರದಲ್ಲಿ ಸಾಯಿ ಪಲ್ಲವಿ, ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋನ್, ಲಕ್ಷ್ಮಣನಾಗಿ ರವಿ ದುಬೇ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ರಾಮಾಯಣ ಚಿತ್ರದ ಆಫೀಷಿಲಿಯನ್ ವಿಡಿಯೋ ರಿಲೀಸ್ ಆಗಿದೆ.
55
ಸಿನಿಮಾ ಯಾವಾಗ ತೆರೆಗೆ?
2026 ದೀಪಾವಳಿಗೆ ರಾಮಾಯಣ ಪಾರ್ಟ್-1, 2027 ದೀಪಾವಳಿಗೆ ಪಾರ್ಟ್ 2 ಬಿಡುಗಡೆಯಾಗಲಿದೆ. ಚಿತ್ರದ ತಂಡವು ಆಸ್ಕರ್ ಪ್ರಶಸ್ತಿ ವಿಜೇತ ಸಂಯೋಜಕರಾದ ಹ್ಯಾನ್ಸ್ ಜಿಮ್ಮರ್ ಮತ್ತು ಎಆರ್ ರೆಹಮಾನ್ ಸೇರಿದಂತೆ ಪ್ರಸಿದ್ಧ ಅಂತರರಾಷ್ಟ್ರೀಯ ಕಲಾವಿದರನ್ನು ಒಳಗೊಂಡಿದೆ, ಅವರು ಸಂಗೀತ ಮತ್ತು ಹಾಡುಗಳಲ್ಲಿ ಸಹಕರಿಸುತ್ತಿದ್ದಾರೆ.