ಟಾಕ್ಸಿಕ್‌ಗಾಗಿ ಕಿಯಾರ, ಯಶ್ ಭರ್ಜರಿ ಸ್ಟೆಪ್ಸ್‌: ಕೊರಿಯೋಗ್ರಾಫ್‌ ಮಾಡ್ತಿರೋದು ಯಾರು?

Published : Jan 27, 2025, 09:44 AM IST

ಗೋವಾದ ಕೆಲವೊಂದು ಸ್ಥಳಗಳನ್ನು ಹಾಡಿನ ಶೂಟ್‌ಗೆ ಆಯ್ಕೆ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಯಶ್‌ ಮತ್ತು ಕಿಯಾರ ಅವರ ರೊಮ್ಯಾಂಟಿಕ್‌ ಡ್ಯಾನ್ಸ್‌ ಶೂಟ್‌ ನಡೆಯುತ್ತಿದೆ ಎನ್ನಲಾಗಿದೆ.

PREV
16
ಟಾಕ್ಸಿಕ್‌ಗಾಗಿ ಕಿಯಾರ, ಯಶ್ ಭರ್ಜರಿ ಸ್ಟೆಪ್ಸ್‌: ಕೊರಿಯೋಗ್ರಾಫ್‌ ಮಾಡ್ತಿರೋದು ಯಾರು?

ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದ ವಿಶೇಷ ಹಾಡಿನ ಚಿತ್ರೀಕರಣ ಗೋವಾದಲ್ಲಿ ನಡೆಯುತ್ತಿದೆ. ಹೆಸರಾಂತ ಕೊರಿಯೋಗ್ರಾಫರ್‌ ಗಣೇಶ್‌ ಆಚಾರ್ಯ ನೃತ್ಯ ಸಂಯೋಜನೆ ಮಾಡುತ್ತಿದ್ದಾರೆ. 

26

ಗೋವಾದ ಕೆಲವೊಂದು ಸ್ಥಳಗಳನ್ನು ಹಾಡಿನ ಶೂಟ್‌ಗೆ ಆಯ್ಕೆ ಮಾಡಲಾಗಿದೆ. ಕಳೆದ ಕೆಲ ದಿನಗಳಿಂದ ಯಶ್‌ ಮತ್ತು ಕಿಯಾರ ಅವರ ರೊಮ್ಯಾಂಟಿಕ್‌ ಡ್ಯಾನ್ಸ್‌ ಶೂಟ್‌ ನಡೆಯುತ್ತಿದೆ ಎನ್ನಲಾಗಿದೆ.

36

ಈ ಸಿನಿಮಾದಲ್ಲಿ ಖ್ಯಾತ ದಕ್ಷಿಣ ಭಾರತೀಯ ನಟಿ ನಯನತಾರಾ ನಟಿಸುತ್ತಿರುವುದನ್ನು ಬಾಲಿವುಡ್‌ ನಟ ಅಕ್ಷಯ್‌ ಓಬೇರಾಯ್‌ ಖಚಿತಪಡಿಸಿದ್ದಾರೆ. ನಯನತಾರಾ ಯಶ್ ಅವರ ಸಹೋದರಿಯ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನಲಾಗಿದೆ. ಈ ಮಾಹಿತಿ ನೀಡಿರುವ ಅಕ್ಷಯ್‌ ಅವರೂ ಈ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

46

ಗೋವಾದ ಮಾದಕ ದ್ರವ್ಯ ಜಾಲದ ಕುರಿತಾದ ಕಥಾವಸ್ತು ಒಳಗೊಂಡಿರುವ ‘ಟಾಕ್ಸಿಕ್‌’ ಸಿನಿಮಾವನ್ನು ಗೀತು ಮೋಹನ್‌ದಾಸ್‌ ನಿರ್ದೇಶಿಸುತ್ತಿದ್ದಾರೆ. ಕೆವಿಎನ್‌ ಪ್ರೊಡಕ್ಷನ್‌ ಮತ್ತು ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಶನ್ಸ್‌ ಈ ಸಿನಿಮಾ ನಿರ್ಮಾಣ ಮಾಡುತ್ತಿವೆ.

56

ಸಿನಿಮಾ ದೃಶ್ಯ ಸೋರಿಕೆ: ಯಶ್‌ ನಟನೆಯ ‘ಟಾಕ್ಸಿಕ್‌’ ಸಿನಿಮಾದ ಪ್ರಮುಖ ದೃಶ್ಯದ ಸೆಟ್‌ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸೋರಿಕೆಯಾಗಿದೆ. ಅದ್ದೂರಿ ಸೆಟ್‌, ಭರ್ಜರಿ ಪಾರ್ಟಿಯೊಂದರ ಸೆಟ್‌ಅಪ್, 90ರ ದಶಕದ ಹಿನ್ನೆಲೆಯಲ್ಲಿ ಯಶ್‌ ಪ್ರಮುಖ ವ್ಯಕ್ತಿಯೊಬ್ಬರನ್ನು ಭೇಟಿ ಮಾಡುವ ಸನ್ನಿವೇಶ ಈ ದೃಶ್ಯದಲ್ಲಿ ರಿವೀಲ್‌ ಆಗಿದೆ.

66

ಈ ದೃಶ್ಯವನ್ನು ಸೆಟ್‌ನಲ್ಲಿದ್ದವರೇ ಚಿತ್ರೀಕರಿಸಿದಂತಿದೆ. ಇದೀಗ ಸೋಷಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ನಲ್ಲಿದೆ. ಸಾಮಾನ್ಯವಾಗಿ ಇಂಥಾ ದೊಡ್ಡ ಬ್ಯಾನರ್‌ ಚಿತ್ರಗಳಲ್ಲಿ ಸಿನಿಮಾ ದೃಶ್ಯಗಳು ಸೋರಿಕೆ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತಾರೆ. ಆದರೂ ಸಿನಿಮಾದ ಪ್ರಮುಖ ಎನ್ನಲಾದ ದೃಶ್ಯದ ಸೋರಿಕೆ ಆಗಿರುವುದು ಚಿತ್ರತಂಡಕ್ಕೆ ತಲೆ ನೋವಾಗಿದೆ.
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories