ಬಾತ್‌ಟಬ್‌ನಲ್ಲಿ ತುಪ್ಪದ ಬೆಡಗಿ, ಉಫ್‌..ನೋಡೋಕೆ ಎರಡು ಕಣ್ಣು ಸಾಲ್ತಿಲ್ಲ ಎಂದ ನೆಟ್ಟಿಗರು

First Published | Dec 10, 2023, 3:10 PM IST

ಸ್ಯಾಂಡಲ್​ವುಡ್​ ಬೆಡಗಿ ರಾಗಿಣಿ ದ್ವಿವೇದಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಸಕ್ರಿಯವಾಗಿದ್ದಾರೆ. ಆಗಾಗ ಸ್ಯಾರಿ, ಡ್ರೆಸ್‌ನಲ್ಲಿ ಫೋಟೋಶೂಟ್‌ ಮಾಡಿಸ್ಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ. ಇದೀಗ ರಾಗಿಣಿ ದ್ವಿವೇದಿ ಬಾತ್‌ಟಬ್‌ನಲ್ಲಿ ಮಲಗಿ ಹಾಟ್‌ಲುಕ್ ಕೊಟ್ಟು ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ. 

ಸ್ಯಾಂಡಲ್​ವುಡ್​ ಬೆಡಗಿ ರಾಗಿಣಿ ದ್ವಿವೇದಿ ಅವರು ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಸಕ್ರಿಯವಾಗಿದ್ದಾರೆ. ಆಗಾಗ ಸ್ಯಾರಿ, ಡ್ರೆಸ್‌ನಲ್ಲಿ ಫೋಟೋಶೂಟ್‌ ಮಾಡಿಸ್ಕೊಂಡು ಪೋಸ್ಟ್ ಮಾಡುತ್ತಿರುತ್ತಾರೆ. ಬಿಕಿನಿ ಫೋಟೋಶೂಟ್​ ಸಹ ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ವೈರಲ್ ಆಗುತ್ತಿರುತ್ತದೆ. 

ಇದೀಗ ರಾಗಿಣಿ ದ್ವಿವೇದಿ ಬಾತ್‌ಟಬ್‌ನಲ್ಲಿ ಮಲಗಿ 'ಸೆಲ್ಫ್‌ ಲವ್‌' ಎಂದು ಹಾಟ್‌ಲುಕ್ ಕೊಟ್ಟು ಪಡ್ಡೆ ಹುಡುಗರ ಹೃದಯ ಕದ್ದಿದ್ದಾರೆ. ಈ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Tap to resize

ಸ್ಯಾಂಡಲ್‌ವುಡ್‌ನಲ್ಲಿ 'ತುಪ್ಪದ ಹುಡಗಿ'ಯೆಂದೇ ಖ್ಯಾತಿ ಪಡೆದ ನಟಿ, ರಾಗಿಣಿ ದ್ವಿವೇದಿ ಐಪಿಎಸ್‌ ಸಿನಿಮಾದ ಮೂಲಕ ಮತ್ತಷ್ಟೂ ಖ್ಯಾತಿ ಗಳಿಸಿದವರು. ವೀರ ಮದಕರಿ ಚಿತ್ರದ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದರು.

ನಟಿ ರಾಗಿಣಿ ದ್ವಿವೇದಿ ಸಿನಿಮಾಗಳಿಗಿಂತಲೂ ಫೋಟೋ ಶೂಟ್ ವಿಷಯದಲ್ಲಿಯೇ ವೈರಲ್ ಆಗುತ್ತಾರೆ. ಮಾಮೂಲಿ ದಿನಗಳಲ್ಲಿ ಮಾಡರ್ನ್‌ ಡ್ರೆಸ್‌, ಹಬ್ಬ ಹರಿದಿನಗಳು ಬಂದ್ರೆ ಟ್ರೆಡಿಷಿನಲ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಅವರು ಇದೀಗ ಹೊಸ ರೀತಿಯ ಫೋಟೋ ಶೂಟ್ ಮೂಲಕ ಪಡ್ಡೆಗಳ ನಿದ್ದೆಗೆಡಿಸಿದ್ದಾರೆ.

ಬಾತ್‌ಟಬ್‌ನಲ್ಲಿ ಮಲಗಿಕೊಂಡು ನಾನಾ ರೀತಿಯಲ್ಲಿ ಫೋಸ್ ನೀಡಿದ್ದಾರೆ. ಇದಕ್ಕೆ ನೆಟ್ಟಿಗರು ಸಹ ಹಲವು ಕಾಮೆಂಟ್ ಮಾಡಿದ್ದಾರೆ. ವಾವ್‌, ಡಿಫರೆಂಟ್ ಲುಕ್‌ ಎಂದು ಕಮೆಂಟಿಸಿದ್ದಾರೆ. ಮತ್ತೆ ಕೆಲವರು, 'ಗಂಡು ಮಕ್ಕಳು ನೆಮ್ಮದಿಯಾಗಿ ಬದುಕೋಕೆ ಬಿಡಲ್ವಾ ನೀವು' ಎಂದಿದ್ದಾರೆ.

ರಾಗಿಣಿ ದ್ವಿವೇದಿ ಸದ್ಯ ವೃಷಭ ಸಿನಿಮಾದ ಶೂಟಿಂಗ್ ಅಲ್ಲಿಯೇ ಬ್ಯುಸಿ ಇದ್ದಾರೆ. ಇವರ ಇನ್ನೊಂದು ಸಿನಿಮಾದ ಶೂಟಿಂಗ್ ಹೊರ ದೇಶದಲ್ಲಿಯೇ ನಡೆಯುತ್ತಿದೆ. ನಂದ್ ಕಿಶೋರ್ ಈ ಚಿತ್ರವನ್ನ ಡೈರೆಕ್ಟ್ ಮಾಡುತ್ತಿದ್ದಾರೆ.

ರಾಗಿಣಿ ದ್ವಿವೇದಿ ಒಪ್ಪಿರೋ ವೃಷಭ ಸಿನಿಮಾ ಪ್ಯಾನ್ ಇಂಡಿಯಾವಾಗಿದ್ದು, ಮಲೆಯಾಳಂ ಮತ್ತು ತೆಲುಗು ಭಾಷೆಯಲ್ಲಿ ಈ ಚಿತ್ರ ತಯಾರಾಗುತ್ತಿದೆ. ಆ ಬಳಿಕವೇ ಇತರ ಭಾಷೆಗೆ ಚಿತ್ರ ಡಬ್ಬಿಂಗ್ ಆಗಿ ರಿಲೀಸ್ ಆಗುತ್ತದೆ.

Latest Videos

click me!