ಪ್ರಪಂಚದಾದ್ಯಂತ ರಂಗಭೂಮಿಯನ್ನು ಪರಿಚಯಿಸಲು 1961 ರಲ್ಲಿ ಇಂಟರ್ನ್ಯಾಷನಲ್ ಥಿಯೇಟರ್ ಇನ್ಸ್ಟಿಟ್ಯೂಟ್‌ಗೆ ಅಡಿಪಾಯ ಹಾಕಲಾಯಿತು. ರಂಗಭೂಮಿಯನ್ನು ಉತ್ತೇಜಿಸುವುದು ಮತ್ತು ಪ್ರಪಂಚದಾದ್ಯಂತ ಅದನ್ನು ಗುರುತಿಸುವುದು ಇದರ ಮೂಲ ಉದ್ದೇಶ ಮತ್ತು ದ್ಯೇಯವಾಗಿದೆ.
ಇಂದು ಶಾರುಖ್ ಖಾನ್ ಅವರನ್ನು ಬಾಲಿವುಡ್‌ನ ಕಿಂಗ್ ಅಥವಾ ಬಾದ್‌ಶಾ ಎಂದು ಕರೆಯಲಾಗುತ್ತದೆ. ಅವರು ಚಲನಚಿತ್ರಗಳಿಗೆ ಸೇರುವ ಮೊದಲು ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಅವರು ಥಿಯೇಟರ್ ಆಕ್ಷನ್ ಗ್ರೂಪ್ ಸದಸ್ಯರಾಗಿದ್ದರು. ಅವರು ದೀವಾನಾ ಚಿತ್ರದ ಮೂಲಕ ಪಾದಾರ್ಪಣೆ ಮಾಡಿದರು.
ಕಂಗನಾ ರಣಾವತ್ ನಟಿಯಾಗುವ ತಮ್ಮ ಕನಸನ್ನು ನೇರವೇರಿಸಲು 16 ನೇ ವಯಸ್ಸಿನಲ್ಲಿ ಮನೆಯಿಂದ ಓಡಿಹೋಗಿ ದೆಹಲಿಗೆ ಸೇರಿದರು. ಇಲ್ಲಿ ಅವರು ಮಾಡೆಲಿಂಗ್ ಜೊತೆಗೆ ರಂಗಭೂಮಿಯಲ್ಲೂ ಕೆಲಸ ಮಾಡಿದರು. ಅವರು ಇಂಡಿಯಾ ಹ್ಯಾಬಿಟಾಟ್ ಸೆಂಟರ್‌ನಲ್ಲಿ ಗೌರ್ ಥಿಯೇಟರ್ ವರ್ಕ್‌ಶಾಪ್‌ನಲ್ಲಿ ಕೆಲಸ ಮಾಡಿದರು.
ಸೀಮಾ ಬಿಸ್ವಾಸ್ ಅತ್ಯುತ್ತಮ ರಂಗ ಕಲಾವಿದರಲ್ಲಿ ಒಬ್ಬರು. ಅವರು ಅಸ್ಸಾಮಿ ರಂಗಭೂಮಿಯಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಎನ್‌ಎಸ್‌ಡಿಯಿಂದ ಪಾಸೌಟ್ ಆಗಿರುವ ಸೀಮಾ ಹಲವು ಉತ್ತಮ ನಾಟಕಗಳಲ್ಲಿಯೂ ನಟಿಸಿದ್ದಾರೆ. ಬ್ಯಾಂಡಿಟ್ ಕ್ವೀನ್ ಚಿತ್ರದಿಂದ ಇಂಡಸ್ಟ್ರಿಯಲ್ಲಿ ಗುರುತಿಸಿಕೊಂಡರು.
ವಿಲಕ್ಷಣ ಪಾತ್ರಗಳಿಗೆ ಹೆಸರುವಾಸಿಯಾದ ಮನೋಜ್ ಬೈಪೇಜಿ ಅವರು ದೊಡ್ಡ ಸ್ಟಾರ್ ಆಗಬೇಕೆಂಬ ಕನಸನ್ನು ಬಾಲ್ಯದಿಂದ ಹೊಂದಿದ್ದರು. ಈ ಕನಸನ್ನು ನನಸಾಗಿಸಲು ಅವರು NSD ಗೆ ಪ್ರವೇಶ ಪಡೆಯಲು ಪ್ರಯತ್ನಿಸಿದರು. ಆದರೆ ಅವರು ಪ್ರತಿ ಬಾರಿ ರಿಜೆಕ್ಟ್ ಆಗುತ್ತಿದ್ದರು. ಆದರೂ ಛಲ ಬಿಡದೆ ದೆಹಲಿಯಲ್ಲೇ ಉಳಿದು ಬೋರಿ ಜಾನ್ ಜತೆ ರಂಗಭೂಮಿ ಮಾಡಿದರು. ನಂತರ ಬಾಲಿವುಡ್ ಇಂಡಸ್ಟ್ರಿಗೆ ಪ್ರವೇಶಿಸಿದರು.
ಶಾಹಿದ್ ಕಪೂರ್ ಅವರ ತಂದೆ ಪಂಕಜ್ ಕಪೂರ್ ಉತ್ತಮ ರಂಗಭೂಮಿ ಕಲಾವಿದರು. ದೆಹಲಿಯ NSD ಯಿಂದ ಅಧ್ಯಯನ ಮಾಡಿದ ನಂತರ, ಅವರು 4 ವರ್ಷಗಳ ಕಾಲ ರಂಗಭೂಮಿಯನ್ನು ಮಾಡಿದರು ಮತ್ತು ನಂತರ ಗಾಂಧಿ ಚಿತ್ರದ ಮೂಲಕ ಅವರು ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದರು.
ಓಂ ಪುರಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ದಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಅಧ್ಯಯನ ಮಾಡಿದ ನಂತರ ರಂಗಭೂಮಿಯಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಓಂ ಪುರಿ ಅವರು ಮಕ್ಕಳ ಚಲನಚಿತ್ರ ಚೋರ್ ಚೋರ್ ಚುಪ್ ಜಾ ಚಿತ್ರದ ಮೂಲಕ ತಮ್ಮ ನಟನೆಯನ್ನು ಪ್ರಾರಂಭಿಸಿದರು.
ಕರೀನಾ ಕಪೂರ್ ಅವರ ಮುತ್ತಜ್ಜ ಪೃಥ್ವಿರಾಜ್ ಕಪೂರ್ ಕೂಡ ರಂಗಭೂಮಿ ಕಲಾವಿದರಾಗಿದ್ದಾರೆ. ಪೃಥ್ವಿ ಥಿಯೇಟರ್ ಅನ್ನು ತಮ್ಮದೇ ಹೆಸರಿನಲ್ಲಿ ಸ್ಥಾಪಿಸಿದರು. ಈ ನಾಟಕ ಕಂಪನಿಯ ಮೂಲಕ ದೇಶ-ವಿದೇಶಗಳಲ್ಲಿ ಹಲವು ನಾಟಕಗಳನ್ನು ಪ್ರದರ್ಶಿಸಿದರು. ಮತ್ತು ಅವರು ಚಲನಚಿತ್ರಗಳತ್ತ ಮುಖ ಮಾಡಿದರು. ಅವರು ಭಾರತೀಯ ಚಿತ್ರರಂಗದ ಮೊದಲ ಟಾಕಿ ಚಿತ್ರ ಆಲಂ ಅರಾದಲ್ಲಿ ಕಾಣಿಸಿಕೊಂಡರು.
ನಾಸಿರುದ್ದೀನ್ ಶಾ ಅವರು ಸಿನಿಮಾಗಳಲ್ಲಷ್ಟೇ ನಾಟಕದಲ್ಲೂ ಸಹ ಅತ್ಯುತ್ತಮ ಕಲಾವಿದ. ಅವರು ಮೋಟ್ಲಿ ಫೂಲ್ ಥಿಯೇಟರ್ ಗ್ರೂಪ್‌ನೊಂದಿಗೆ ಸಂಬಂಧ ಹೊಂದಿದ್ದರು. ಅವರು ನಿಶಾಂತ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.
ಶಬಾನಾ ಅಜ್ಮಿ ರಂಗಭೂಮಿಯಲ್ಲೂ ತಮ್ಮ ಅಭಿನಯ ಪ್ರದರ್ಶಿಸಿದ್ದಾರೆ. ಚಿತ್ರಗಳಲ್ಲಿ ಮಾತ್ರವಲ್ಲ ಇವರು ರಂಗಭೂಮಿಯಲ್ಲೂ ಸಾಕಷ್ಟು ಹೆಸರು ಗಳಿಸಿದ್ದಾರೆ. ಸೇಫ್ ಕುಂಡಲಿ, ತುಮ್ಹಾರಿ ಅಮೃತಾ ಮತ್ತು ಎ ಡಾಲ್ಸ್ ಹೌಸ್ ಮುಂತಾದ ನಾಟಕಗಳಲ್ಲಿ ಅವರು ನಟಿಸಿದ್ದಾರೆ. ಅಂಕುರ್ ಚಿತ್ರದ ಮೂಲಕ ಶಬಾನಾ ಚಿತ್ರರಂಗ ಪ್ರವೇಶಿಸಿದರು.