ರಾಜಾಮೌಳಿ ಅವರ ರಾಮ್ ಚರಣ್ ನಟಿಸಿರುವ ಪ್ಯಾನ್ ಇಂಡಿಯಾ ಸಿನಿಮಾ 'ಆರ್‌ಆರ್‌ಆರ್' ಮಾರ್ಚ್ 25ರಂದು ತೆರೆಕಂಡಿತ್ತು. ಈ ಬಾಕ್ಸ್ ಆಫೀಸ್‌ನಲ್ಲಿ ಹೊಸ ದಾಖಲೆ ಬರೆದಿದ್ದು, ಈವರೆಗೂ ಯಾವ ಸಿನಿಮಾವೂ ಮಾಡಿರದಂತಹ ಸಾಧನೆಯನ್ನು ಮಾಡಿದೆ.
ಆರ್‌ಆರ್‌ಆರ್ ಸಿನಿಮಾದ ಯಶಸ್ಸಿನ ಹಿನ್ನೆಲೆಯಲ್ಲಿ ರಾಮ್ ಚರಣ್ ಫ್ರೆಂಡ್ಸ್ ಮತ್ತು ಫ್ಯಾನ್ಸ್‌ಗೆ ಥ್ಯಾಂಕ್ಸ್ ಹೇಳಿದ್ದಾರೆ. ವಿಶೇಷವೆಂದರೆ, ಅವರು ಕನ್ನಡದಲ್ಲೂ ಧನ್ಯವಾದ ತಿಳಿಸಿದ್ದಾರೆ. ಟ್ವಿಟರ್‌ನಲ್ಲಿ ಈ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ ರಾಮ್ ಚರಣ್.
ಇಂಗ್ಲಿಷ್, ತೆಲುಗು, ಹಿಂದಿ, ಕನ್ನಡ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ಬಿಡುಗಡೆಯಾಗಿರುವ RRR ಸಿನಿಮಾದಂತೆಯೇ ರಾಮ್ ಚರಣ್ ಧನ್ಯವಾದವನ್ನು ಸಹ ಎಲ್ಲಾ ಭಾಷೆಯಲ್ಲಿ ಹಂಚಿಕೊಂಡಿದ್ದಾರೆ.
ಎಸ್‌ಎಸ್ ರಾಜಮೌಳಿ ಅವರ RRR ಸಿನಿಮಾಗಾಗಿ ಅಪಾರ ಪ್ರೀತಿ ಮತ್ತು ಮೆಚ್ಚುಗೆಗೆ ಧನ್ಯವಾದಗಳು. ಅತ್ಯಂತ ಉತ್ಸಾಹದಿಂದ ಚಿತ್ರಮಂದಿರಗಳಲ್ಲಿ ಚಿತ್ರವನ್ನು ವೀಕ್ಷಿಸಿದ ಪ್ರತಿಯೊಬ್ಬರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು. ಈ ಅದ್ಭುತ ಹುಟ್ಟುಹಬ್ಬದ ಉಡುಗೊರೆಯನ್ನು ನಾನು ನಮ್ರತೆಯಿಂದ ಸ್ವೀಕರಿಸುತ್ತೇನೆ..' ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.
ನಟನ ಜೊತೆಗೆ ರಾಮ್ ಚರಣ್ ಯಶಸ್ವಿ ಉದ್ಯಮಿ ಕೂಡ ಎಂಬುದು ಕೆಲವರಿಗೆ ತಿಳಿದಿದೆ. ಅವರು ತಮ್ಮದೇ ಆದ ಏರ್‌ಲೈನ್ ಕಂಪನಿಯನ್ನು ಹೊಂದಿದ್ದಾರೆ ಮತ್ತು ಪೋಲೋ ರೈಡಿಂಗ್ ಕ್ಲಬ್, ಡೆವಿಲ್ಸ್ ಸರ್ಕ್ಯೂಟ್, ಕೊನಿಡೆಲಾ ಪ್ರೊಡಕ್ಷನ್ ಕಂಪನಿ, ಅಬ್ಸ್ಟಾಕಲ್ ರನ್ನಿಂಗ್ ಸೀರೀಸ್ ಮತ್ತು ಮಾ ಟಿವಿಯಲ್ಲಿ ಷೇರುಗಳನ್ನು ಹೊಂದಿದ್ದಾರೆ. ಅವರ ನಿವ್ವಳ ಮೌಲ್ಯದ ಸುಮಾರು 1300 ಕೋಟಿ ರೂ ಎಂದು ಅಂದಾಜಿಸಲಾಗಿದೆ.
ಅಂದಹಾಗೆ, ರಾಮ್ ಚರಣ್ ಬಾಲಿವುಡ್ ಉದ್ಯಮದಲ್ಲೂ ತಮ್ಮ ಲಕ್ ಪ್ರಯತ್ನಿಸಿದ್ದಾರೆ. ಅವರು ಬಾಲಿವುಡ್ ಚಿತ್ರ ಜಂಜೀರ್‌ನಲ್ಲಿ ಕಾಣಿಸಿಕೊಂಡರು. ಆದರೆ ಅದು ಸೂಪರ್‌ಫ್ಲಾಪ್ ಎಂದು ಸಾಬೀತಾಯಿತು. ಈ ಚಿತ್ರದ ನಂತರ ಅವರು ಮತ್ತೆ ಯಾವುದೇ ಹಿಂದಿಯಲ್ಲಿ ಕೆಲಸ ಮಾಡಲಿಲ್ಲ.
ರಾಮ್ ಚರಣ್ ತಮ್ಮ 15 ವರ್ಷಗಳ ಚಿತ್ರರಂಗದಲ್ಲಿ ಸುಮಾರು 16 ಚಿತ್ರಗಳಲ್ಲಿ ನಟಿಸಿದ್ದಾರೆ. ಅವರ ಬಹುತೇಕ ಚಿತ್ರಗಳು ಭಾರೀ ಗಲ್ಲಾಪೆಟ್ಟಿಗೆ ಕಲೆಕ್ಷನ್ ಮಾಡಿದವು ಮತ್ತು ಇದೇ ಕಾರಣಕ್ಕೆ ಅವರನ್ನು ಗೋಲ್ಡನ್ ಬಾಯ್ ಎಂದೂ ಕರೆಯುತ್ತಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ರಾಮ್ ಚರಣ್ ಅವರ ಚಿತ್ರ RRR ಗಲ್ಲಾಪೆಟ್ಟಿಗೆಯಲ್ಲಿ ಸಂಚಲನ ಮೂಡಿಸಿದೆ. ಯಾರೂ ಮುರಿಯಲು ಸಾಧ್ಯವಾಗದ ದಾಖಲೆಯನ್ನು ಚಿತ್ರ ಮಾಡಿದೆ. ಈ ಚಿತ್ರದಲ್ಲಿ ಅವರೊಂದಿಗೆ ಜೂನಿಯರ್ ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿದ್ದಾರೆ. ಚಿತ್ರದ ನಿರ್ದೇಶಕರು ಎಸ್ ಎಸ್ ರಾಜಮೌಳಿ.
ಮಗಧೀರ, ಆರೆಂಜ್, ನಾಯಕ್, ಏವಡು, ಧ್ರುವ, ರಂಗಸ್ಥಳಂ, ವಿನಯ್ ವಿಧೇಯ ರಾಮ, ಬ್ರೂಸ್ಲಿ ದಿ ಫಿಟ್ಟರ್, ಕಿಲಾಡಿ ನಂ, 150 ಮುಂತಾದ ಸೂಪರ್‌ಹಿಟ್ ಚಿತ್ರಗಳಲ್ಲಿ ರಾಮಚರಣ್ ಕೆಲಸ ಮಾಡಿದ್ದಾರೆ. ರಾಮಚರಣ್ ಶೀಘ್ರದಲ್ಲೇ ಆಚಾರ್ಯ ಮತ್ತು ಆರ್‌ಸಿ 15 ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆಚಾರ್ಯ ಚಿತ್ರದಲ್ಲಿ ತಂದೆ ಚಿರಂಜೀವಿ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ.