ಕೊನೆಗೂ The Kashmir Files ಬಗ್ಗೆ ಬಾಯಿಬಿಟ್ಟ Taapsee Pannu

First Published | Mar 27, 2022, 5:30 PM IST

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ 'ದಿ ಕಾಶ್ಮೀರ್ ಫೈಲ್ಸ್' ( The Kashmir Files) ಚಿತ್ರ ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಈ ಚಿತ್ರದ ಕಲೆಕ್ಷನ್ ನೋಡಿ ಇಡೀ ಬಾಲಿವುಡ್ ಇಂಡಸ್ಟ್ರಿ ಬೆಚ್ಚಿ ಬಿದ್ದಿದೆ.  ಆದರೆ ಬಾಲಿವುಡ್‌ನ ಹಲವು ಸ್ಟಾರ್ಸ್‌ ಈ ಚಿತ್ರದ ಗಳಿಕೆಯ ಬಗ್ಗೆ ಮೌನವಾಗಿ ಕುಳಿತಿದೆ. ಈಗ  ಬಾಲಿವುಡ್ ನಟಿ ತಾಪ್ಸಿ ಪನ್ನು (Taapsee Pannu ) ಕೊನೆಗೂ ಬಾಯಿ ಬಿಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಪನ್ನು ಅಭಿಪ್ರಾಯವೇನು ಗೊತ್ತಾ? 

ಈ ಚಿತ್ರದ ಕಲೆಕ್ಷನ್ ನೋಡುತ್ತಿದ್ದೇನೆ ಎಂದು ತಾಪ್ಸಿ ಪನ್ನು ಹೇಳಿದ್ದಾರೆ. ಕಾರಣವೇನೇ ಇರಲಿ, ಆದರೆ ಏನಾಯಿತು, ಅದು ಸಂಭವಿಸಿದೆ ಎಂಬುದು ಸತ್ಯ ಎಂದು ಚಿತ್ರದ ಬಗ್ಗೆ ಬೋಲ್ಡ್ ಶೈಲಿಯಲ್ಲಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

'ಕಡಿಮೆ ಬಜೆಟ್‌ನ ಸಿನಿಮಾ ಈ ರೀತಿಯ ಕಲೆಕ್ಷನ್ ನೀಡಿದರೆ ಅದು ಕೆಟ್ಟ ಚಿತ್ರವಾಗಲಾರದು, ಜನರ ಮನಸ್ಥಿತಿಯ ಬಗ್ಗೆ ಪ್ರಶ್ನೆ ಏಳಬಹುದು, ಅದರ ಅರ್ಥ ಮತ್ತು ಇತರ ವಿಷಯಗಳನ್ನು ನೀವು ಪ್ರಶ್ನಿಸಬಹುದು. ಈ ಎಲ್ಲಾ ಅಂಶಗಳು ವಿಷಯವಾಗಿದೆ. ಒಪ್ಪಿಕೊಳ್ಳೋಣ ಅಥವಾ ಒಪ್ಪದೇ ಇರೋಣ. ಆದರೆ ನಿಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ನಿಮಗೆ ಹಕ್ಕಿದೆ' ಎಂದು ತಾಪ್ಸಿ ಹೇಳಿದ್ದಾರೆ. 

Tap to resize

'ಕೆಲವೊಮ್ಮೆ ಅನೇಕ ವಿಷಯಗಳು ನಿಮ್ಮ ಪ್ರತಿಭೆಯನ್ನು ದಾಟಿ ಮುಂದೆ ಹೋಗುತ್ತವೆ ಪ್ರತಿ ಮನೆಯಲ್ಲೂ, ಪ್ರತಿ ಡೈನಿಂಗ್ ಟೇಬಲ್‌ನಲ್ಲಿಯೂ ನಿಮ್ಮ ಬಗ್ಗೆ ಚರ್ಚಿಸುತ್ತಿರುವಾಗ, ಪ್ರತಿಯೊಬ್ಬ ವ್ಯಕ್ತಿಗೂ ಸರಿ ಎಂದು ಸಾಬೀತುಪಡಿಸುವುದು ತುಂಬಾ ಕಷ್ಟ, ಇದು ನಿಮ್ಮ ವೃತ್ತಿಜೀವನ ಎಷ್ಟು ದೂರ ಹೋಗುತ್ತದೆ ಎಂಬುದನ್ನು ನಿರ್ಧರಿಸುತ್ತದೆ' ಎಂದಿದ್ದಾರೆ.

ಮತ್ತೊಂದೆಡೆ, ಮಾಯಾನಗರಿ ವೃತ್ತಿಜೀವನದ ಬಗ್ಗೆ ತಾಪ್ಸಿ ಪನ್ನು ಅವರು 'ಇದು ಮಾನಸಿಕವಾಗಿ ತುಂಬಾ ಆಯಾಸಗೊಳಿಸುವ ಕೆಲಸ, ಏಕೆಂದರೆ ನನ್ನ ಯಶಸ್ಸು ಅಥವಾ ವೈಫಲ್ಯವು ಇತರರ ಕೈಯಲ್ಲಿದೆ. ಕೆಟ್ಟ ಕಾಲದಲ್ಲಿ ಬದುಕಲು ನನಗೆ ಅವಕಾಶವಿಲ್ಲ' ಎಂದು ಹೇಳಿದ್ದಾರೆ.

'ಎಲ್ಲ ರೀತಿಯ ಪರಿಸ್ಥಿತಿಯಲ್ಲೂ ಅದನ್ನು ಅನುಭವಿಸಲು ಕಲಿತಿದ್ದೇನೆ, ಈ ವೃತ್ತಿಯಲ್ಲಿ ಇರುವುದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ತಾಪ್ಸಿ ಹೇಳಿದ್ದಾರೆ. ಈ ಉದ್ಯಮವು ನಿಮಗೆ ಸಂತೋಷವನ್ನು ನೀಡುತ್ತದೆ ಮತ್ತು ದುಃಖವನ್ನು ಸಹಿಸಿಕೊಳ್ಳುವುದನ್ನು ಕಲಿಸುತ್ತದೆ' ಎಂದು ತಾಪ್ಸಿ ಇನಷ್ಟು ಹೇಳಿಕೊಂಡಿದ್ದಾರೆ. 

Latest Videos

click me!