ಕಂಗನಾ ರಣಾವತ್ ರಾಜಕೀಯಕ್ಕೆ ಸೇರುತ್ತಾರಾ? ನಟಿ ಹೇಳಿದ್ದಿಷ್ಟು!

Published : Sep 12, 2021, 01:57 PM ISTUpdated : Sep 12, 2021, 01:59 PM IST

ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರಸ್ತುತ ತಮ್ಮ ಮುಂಬರುವ ಸಿನಿಮಾ ತಲೈವಿಯ ಪ್ರಚಾರದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ದೆಹಲಿಯಲ್ಲಿ ತಲೈವಿ ಚಿತ್ರದ ಪ್ರಚಾರದ ಸಮಯದಲ್ಲಿ  ಅವರು ರಾಜಕೀಯ ಪ್ರವೇಶಿಸುವ ಬಗ್ಗೆ ಮಾತನಾಡಿದರು. ಈ ಬಗ್ಗೆ ನಟಿ ಹೇಳಿದ್ದೇನು? ವಿವರ ಇಲ್ಲಿದೆ.   

PREV
16
ಕಂಗನಾ ರಣಾವತ್ ರಾಜಕೀಯಕ್ಕೆ ಸೇರುತ್ತಾರಾ?  ನಟಿ ಹೇಳಿದ್ದಿಷ್ಟು!

ಇತ್ತೀಚಿಗೆ ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ತಲೈವಿ ಚಿತ್ರದ ಪ್ರಚಾರಕ್ಕಾಗಿ ದೆಹಲಿಯಲ್ಲಿದ್ದರು. ಈ ಸಿನಿಮಾ ತಮಿಳುನಾಡಿನ ದಿವಂಗತ ಮಾಜಿ ಮುಖ್ಯಮಂತ್ರಿ ಜೆ ಜಯಲಲಿತಾ ಅವರ ಜೀವನವನ್ನು ಆಧರಿಸಿದೆ. ಕಂಗನಾ ಜಯಲಲಿತಾರ ಪಾತ್ರವನ್ನು ನಿರ್ವಹಿಸಿದ್ದಾರೆ

 

26

ಈ ಸಮಯದಲ್ಲಿ ಕಂಗನಾ ಕೇಂದ್ರ ಸಚಿವೆ ಸ್ಮೃತಿ ಇರಾನಿಯವರನ್ನು ಭೇಟಿ ಮಾಡಿದ್ದರು. ಅವರ ಜೊತೆ ಇರುವ ಫೋಟೋವನ್ನು ಇನ್ಸ್ಟಾಗ್ರಾಮ್‌ ಪೋಸ್ಟ್‌ ಮಾಡಿ. 'ನಿಜ ಜೀವನದ ತಲೈವಿ ಜೊತೆ' ಎಂದು ಕ್ಯಾಪ್ಷನ್‌  ನೀಡಿ  ಸ್ಮೃತಿ ಇರಾನಿ ಅವರನ್ನು ಟ್ಯಾಗ್‌ ಮಾಡಿದ್ದಾರೆ ಕಂಗನಾ.

36
Kangana

ನಟಿ ಕಂಗನಾ ಕಡಾಡಿ, ಸಂಧ್ಯಾ ರೇ, ಅರವಿಂದ್ ಶರ್ಮಾ ಮತ್ತು ಅಶೋಕ್ ಬಾಜಪೇಯಿ ಸೇರಿದಂತೆ ಹಲವು  ಸಂಸತ್ತಿನ ಸದಸ್ಯರು ಜೊತೆ ಸಿನಿಮಾದ ಸ್ಕ್ರೀನಿಂಗ್‌ ಶೋನಲ್ಲಿ ಭಾಗವಹಿಸಿದ್ದರು ಮತ್ತು  ಜೊತೆಗೆ, ದೆಹಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದರು, 

46

ಅಲ್ಲಿ ಅವರು ನಂತರ ರಾಜಕೀಯಕ್ಕೆ ಧುಮುಕಬಹುದು ಎಂದು ಸುಳಿವು ಸಹ ನೀಡಿದರು. ಚಲನಚಿತ್ರ, ರಾಜಕೀಯ ಮತ್ತು ರಾಜಕಾರಣಿಗಳ ಬಗ್ಗೆ ಮಾತನಾಡಿದ ನಟಿ  ರಾಜಿಕೀಯದ ಬಗ್ಗೆ ತಮ್ಮ ಒಲವು ವ್ಯಕ್ತಪಡಿಸಿದ್ದಾರೆ.

56

'ನಾನು ರಾಜಕೀಯದ ಬಗ್ಗೆ ಬಹಳ ಹಳೆಯ ಚಿಂತನೆಯನ್ನು ಹೊಂದಿದ್ದೆ. ಇವರು ಅದೃಷ್ಟವಂತರು ತುಂಬಾ ಪವರ್‌ ಪಡೆಯುತ್ತಾರೆ. ಆದರೆ ಈ  ಚಿತ್ರದಲ್ಲಿ ಕೆಲಸ ಮಾಡಿದ ನಂತರ ಮತ್ತು ಸಂಶೋಧನೆ ಮಾಡಿದ ನಂತರ, ನನ್ನ ಆಲೋಚನೆ ಬದಲಾಯಿತು.ರಾಜಕೀಯವು ಸುಲಭವಲ್ಲ ಮತ್ತು ಹಲವಾರು ಸವಾಲುಗಳಿವೆ ಎಂಬುದನ್ನು ನಾನು  ಅರಿತುಕೊಂಡೆ' ಎಂದು ನಟಿ ಹೇಳಿದರು. 

66

'ನಾನು ಒಬ್ಬ ರಾಷ್ಟ್ರೀಯವಾದಿ, ಮತ್ತು ನಾನು ದೇಶಕ್ಕಾಗಿ ಮಾತನಾಡುವುದು ಒಬ್ಬ ರಾಜಕಾರಣಿಯಾಗಿರುವುದರಿಂದ ಅಲ್ಲ, ಜವಾಬ್ದಾರಿಯುತ ಪ್ರಜೆಯಾಗಿ. ಮತ್ತು ರಾಜಕೀಯ ಪ್ರವೇಶಕ್ಕೆ ಸಂಬಂಧಿಸಿದಂತೆ, ನನಗೆ ಸಾರ್ವಜನಿಕರಿಂದ ಸಾಕಷ್ಟು ಬೆಂಬಲ ಬೇಕಾಗಬಹುದು, ಆದರೆ ನಾನು ಇದೀಗ ನಟಿಯಾಗಿರುವುದಕ್ಕೆ ನನಗೆ ಸಂತೋಷವಾಗಿದೆ. ಆದರೆ ನಾಳೆ ಜನರು ನನ್ನನ್ನು ಇಷ್ಟಪಟ್ಟರೆ ಮತ್ತು ನನ್ನನ್ನು ಬೆಂಬಲಿಸಿದರೆ, ಖಂಡಿತವಾಗಿಯೂ ನಾನು ರಾಜಿಕೀಯಕ್ಕೆ ಬರಲು ಇಷ್ಟಪಡುತ್ತೇನೆ' ಎಂದ ಕಂಗನಾ ರಣಾವತ್‌.

click me!

Recommended Stories