'ಕಾಫಿ ವಿಥ್ ಕರಣ್' ಟೈಮ್‌ಪಾಸ್ ಶೋ ಎಂದ ರಣವೀರ್ ಸಿಂಗ್!

First Published | Sep 12, 2021, 12:47 PM IST

ಕರಣ್‌ ಜೋಹರ್‌ ಹೋಸ್ಟ್‌ ಮಾಡುತ್ತಿದ್ದ ಕಾಫಿ ವಿಥ್‌ ಕರಣ್‌ ಫೇಮಸ್‌ ಟಿವಿ ಟಾಕ್‌ ಶೋಗಳಲ್ಲಿ ಒಂದಾಗಿದೆ. ಈ ಶೋ ಹಲವು ವಿವಾದಗಳಿಗೆ ಗುರಿಯಾದರೂ ಸಹ ಸಾಕಷ್ಟು ಜನಪ್ರಿಯತೆ ಗಳಿಸಿದ್ದು ಸುಳ್ಳಲ್ಲ. ರಣವೀರ್ ಸಿಂಗ್ ಒಮ್ಮೆ ಕಾಫಿ ವಿಥ್ ಕರಣ್ 'ಟೈಮ್‌ ಪಾಸ್ ಶೋ' ಎಂದಿದ್ದರು. ಕಾರಣ ಇಲ್ಲಿದೆ.
 

ಒಮ್ಮೆ ರಣವೀರ್ ಸಿಂಗ್ ಮತ್ತು ರಣಬೀರ್ ಕಪೂರ್  ಇಬ್ಬರೂ ಕರಣ್‌ ಜೋಹರ್‌ ಅವರ  ಕಾಫಿ ವಿತ್ ಕರಣ್ ನ 'ಹಾಟ್ ಕೌಚ್‌' ಅಲಂಕರಿಸಿದ್ದರು. ಇವರಿಬ್ಬರು ತಮ್ಮ ತಮಾಷೆಯ ಮಾತಿನಿಂದ ಶೋ ಅನ್ನು ಅತ್ಯಂತ  ಸುಂದರ ಮಾಡಿದರು. 

ರಣಬೀರ್‌ ಕಪೂರ್‌ ಹಾಗೂ ರಣವೀರ್‌ ಸಿಂಗ್‌ ಇಬ್ಬರು ದೀಪಿಕಾ ಪಡುಕೋಣೆ ಜೀವನದ ಪ್ರಮುಖ ವ್ಯಕ್ತಿಗಳಾಗಿದ್ದಾರೆ. ರಣಬೀರ್‌ ಮೊದಲು ದೀಪಿಕಾರ ಜೊತೆ ರಿಲೆಷನ್‌ಶಿಪ್‌ ನಲ್ಲಿದ್ದರು ಹಾಗೂ ರಣವೀರ್‌ ಈ ಶೋಗೆ ಆಗಮಿಸಿದ ಸಮಯದಲ್ಲಿ ದೀಪಿಕಾರ ಜೊತೆ ಮದುವೆಯಾಗುವ ಯೋಜನೆಯಲ್ಲಿದ್ದರು, 

Tap to resize

ಕಾಫಿ ವಿಥ್‌ ಕರಣ್‌ನ ಆ ಎಪಿಸೋಡ್‌ನಲ್ಲಿ ರಣವೀರ್‌ ಹಾಗೂ ರಣಬೀರ್‌ ಇಬ್ಬರು ತಮ್ಮ ಪ್ರೇಮ ಜೀವನದ ಅನೇಕ ರಹಸ್ಯಗಳನ್ನು ಬಹಿರಂಗಪಡಿಸಿದ್ದರು. ಕಾರ್ಯಕ್ರಮದ ಸಮಯದಲ್ಲಿ, ರಣಬೀರ್ ಕಪೂರ್ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಮದುವೆಯಾಗಬೇಕೆಂದು ಮತ್ತು ಅವರ ಮಕ್ಕಳು ತಮ್ಮ ಅಭಿಮಾನಿಗಳಾಗಬೇಕೆಂದು ಬಯಸುತ್ತಾರೆ ಎಂದು ಎಂದು ಹೇಳಿದರು. 

ರಣಬೀರ್‌ ಕಪೂರ್‌ ಅವರ ಮಾತುಗಳನ್ನು ರಣವೀರ್ ಸಿಂಗ್ ತುಂಬಾ ಸ್ಪೋರ್ಟೀವ್‌ ಆಗಿ ತೆಗೆದುಕೊಂಡರು ಮತ್ತು ಇಬ್ಬರೂ  ತಮ್ಮ ಫನ್‌ ಆಟಿಟ್ಯೂಡ್‌ ಮೂಲಕ ಈ ಶೋ ಅನ್ನು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದರು.   
 

ಒಮ್ಮೆ ಬೇಫಿಕ್ರೆ ಸಿನಿಅಮದ  ಪ್ರಚಾರದ ಸಮಯದಲ್ಲಿ, ರಣವೀರ್ ಸಿಂಗ್ ಅವರನ್ನು  ಕಾಫಿ ವಿಥ್‌ ಕರಣ್‌ನಲ್ಲಿ ರಣಬೀರ್ ಕಪೂರ್ ನೀಡಿದ ಹೇಳಿಕೆಗೆ ಪ್ರತಿಕ್ರಿಯೆ ನೀಡಲು ಬಗ್ಗೆ ಕೇಳಲಾಯಿತು. ಇದರಿಂದ  ರಣವೀರ್ ಕೋಪಗೊಂಡರು 

'ಕಾಫಿ ವಿಥ್ ಕರಣ್  ಒಂದು ಟೈಂಪಾಸ್ ಶೋ ಆಗಿದೆ ಮತ್ತು ಜನರು  ಅಲ್ಲಿ  ರಬ್ಬಿಶ್‌ ಮಾತನಾಡುತ್ತಾರೆ ಎಂದು ಹೇಳಿದ್ದ  ಅವರು ವರದಿಗಾರರಿಗೆ ಕಾಫಿ ವಿಥ್ ಕರಣ್ ಅನ್ನು ಯಾರೂ ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿದರು. 

ಪ್ರಸ್ತುತ ರಣವೀರ್ 83, ಸರ್ಕಸ್ ಮತ್ತು ಇನ್ನೂ ಕೆಲವು ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.ಅದೇ ಸಮಯದಲ್ಲಿ ರಣಬೀರ್ ಆಲಿಯಾರ ಜೊತೆ  ಬ್ರಹ್ಮಾಸ್ತ್ರ, ವಾಣಿ ಕಪೂರ್ ಜೊತೆ ಶಮ್ಶೇರಾ ಮತ್ತು ಶ್ರದ್ಧಾ ಕಪೂರ್  ಅವರೊಂದಿಗೆ  ಇನ್ನೂ ಹೆಸರಿಡದ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

Latest Videos

click me!