ಅನುಷ್ಕಾ ಶರ್ಮಾ- ಆಲಿಯಾ ಭಟ್: ಈ ನಟಿಯರು ಯಶಸ್ವೀ ಉದ್ಯಮಿಗಳು ಕೂಡ!

Published : Sep 12, 2021, 01:50 PM IST

ಬಾಲಿವುಡ್‌ನ ಹಲವು ನಟಿಯರು ನಟನೆ ಮತ್ತು ಸಿನಿಮಾ ಜೊತೆ ತಮ್ಮನ್ನು ಬೇರೆ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಅವುಗಳಲ್ಲಿ ಬ್ಯುಸಿನೆಸ್‌ ಒಂದು. ಇವರುಗಳು  ಫೇಮಸ್‌ ಸ್ಟಾರ್ಸ್‌ ಜೊತೆ ಉದ್ಯಮಿಗಳು ಕೂಡ ಹೌದು ಈ ಪಟ್ಟಿಯಲ್ಲಿ ಯಾರಾರು ಇದ್ದಾರೆ ನೋಡೋಣ.

PREV
16
ಅನುಷ್ಕಾ ಶರ್ಮಾ- ಆಲಿಯಾ ಭಟ್: ಈ ನಟಿಯರು ಯಶಸ್ವೀ ಉದ್ಯಮಿಗಳು ಕೂಡ!

ಬಾಲಿವುಡ್ ನಟಿಯರಲ್ಲಿ ಅನೇಕರು ತಮ್ಮದೇ ಆದ ಸ್ವಂತ ವ್ಯಾಪಾರಗಳನ್ನು ಸ್ಥಾಪಿಸಿದ್ದಾರೆ ಮತ್ತು ಅವರು ಸಿನಿಮಾರಂಗದ ಜೊತೆಗೆ ಬ್ಯುಸಿನೆಸ್‌ ವರ್ಲ್ಡ್‌ನಲ್ಲೂ ತಮ್ಮ ಹೆಸರನ್ನು ಸ್ಥಾಪಿಸಿದ್ದಾರೆ. ಯಶಸ್ವಿ ಉದ್ಯಮಿಗಳಾದ ಬಾಲಿವುಡ್‌ನ  ಪ್ರಸಿದ್ಧ ಮಹಿಳೆಯರು ಇಲ್ಲಿದ್ದಾರೆ.
 

26

ಆಲಿಯಾ ಭಟ್: ಆಲಿಯಾ ಭಟ್ ತನ್ನದೇ  ಬಟ್ಟೆಯ ಬ್ರಾಂಢ್‌ ಅನ್ನು ಮಕ್ಕಳಿಗಾಗಿ ಆರಂಭಿಸಿದ್ದಾರೆ. ಆಲಿಯಾರ  'ಎಡ್-ಎ-ಮಮ್ಮಾ' (Ed-a-Mamma) ಬ್ರಾಂಡ್‌  ಅಡಿಯಲ್ಲಿ 2-14 ವರ್ಷ ವಯಸ್ಸಿನ ಮಕ್ಕಳ ಬಟ್ಟೆ  ಪೂರೈಸುತ್ತಾರೆ. ಅವರು ಸ್ಟೈಲ್ ಕ್ರ್ಯಾಕರ್ ಮತ್ತು ನೈಕಾ ಮುಂತಾದ ಕಂಪನಿಗಳಲ್ಲಿ ಹೂಡಿಕೆಯನ್ನು ಮಾಡಿದ್ದಾರೆ.

 

36

ಅನುಷ್ಕಾ ಶರ್ಮಾ: ಅನುಷ್ಕಾ ಶರ್ಮಾ  ತಮ್ಮದೇ ಆದ ಕ್ಲೀನ್ ಸ್ಲೇಟ್ ಫಿಲ್ಮ್ಜ್ಎಂಬ ನಿರ್ಮಾಣ ಸಂಸ್ಥೆಯನ್ನು ಹೊಂದಿದ್ದಾರೆ. ಇದರಡಿಯಲ್ಲಿ ವೆಬ್ ಸೀರಿಸ್‌ಗಳನ್ನು ನಿರ್ಮಾಣ ಮಾಡಿದ್ದಾರೆ ನಟಿ. ಜೊತೆಗೆ ನಟಿ  2017 ರಲ್ಲಿ ನುಶ್  ಎಂಬ ಬಟ್ಟೆಯ ಬ್ರಾಂಡ್‌ ಅನ್ನು ಪ್ರಾರಂಭಿಸಿದರು.

46

ಪ್ರಿಯಾಂಕಾ ಚೋಪ್ರಾ: ಬಾಲಿವುಡ್‌ ಜೊತೆ ಹಾಲಿವುಡ್‌ನಲ್ಲೂ ಸಾಕಷ್ಟು ಜನಪ್ರಿಯವಾಗಿದ್ದಾರೆ ಈ ನಟಿ . ಈ ವರ್ಷ ಮಾರ್ಚ್‌ನಲ್ಲಿ ಪ್ರಿಯಾಂಕಾ ಚೋಪ್ರಾ ನ್ಯೂಯಾರ್ಕ್‌ನಲ್ಲಿ ಸೋನಾ ಎಂಬ ಹೆಸರಿನ ತಮ್ಮ ರೆಸ್ಟೋರೆಂಟ್ ಅನ್ನು ಪ್ರಾರಂಭಿಸಿದ್ದಾರೆ. ಅವರು ಅನೋಮಲಿ ಹೆಸರಿನ ಹೇರ್‌ಕೇರ್ ಬ್ರಾಂಡ್ ಅನ್ನು ಸಹ ಹೊಂದಿದ್ದಾರೆ. ಇದರ ಜೊತೆಗೆ ನಟಿ ನಿರ್ಮಾಣ ಕಂಪನಿಯನ್ನು ಹೊಂದಿದ್ದಾರೆ.
 

56

ದೀಪಿಕಾ ಪಡುಕೋಣೆ: ದೀಪಿಕಾ ಪಡುಕೋಣೆ, 2017 ರಲ್ಲಿ 'ಕೆಎ ಎಂಟರ್‌ಪ್ರೈಸಸ್' ಅನ್ನು ಸ್ಥಾಪಿಸಿದರು. ಇದು ಎಪಿಗಾಮಿಯಾ, ಹಾಬಿ ಬೇಸ್ಡ್‌  ಸ್ಟಾರ್ಟ್ಅಪ್‌ಗಳು ಮತ್ತು ಹೆಚ್ಚಿನ ಬ್ರಾಂಡ್‌ಗಳಲ್ಲಿ ಹೂಡಿಕೆ ಮಾಡಿದೆ. ಈಗ ದೀಪಿಕಾ ಭಾರತದಲ್ಲಿ ಬೇರೂರಿರುವ ಒಂದು ಗ್ಲೋಬಲ್‌ ಲೈಫ್‌ಸ್ಟೈಲ್‌   ಬ್ರಾಂಡ್ ಅನ್ನು ಪ್ರಾರಂಭಿಸಿಲಿದ್ದಾರೆ.

66

ಕತ್ರಿನಾ ಕೈಫ್: ಕತ್ರಿನಾ ಕೈಫ್ ಕೇ ಬ್ಯೂಟಿ ಮೂಲಕ ಬ್ಯುಸಿನೆಸ್‌ ವರ್ಲ್ಡ್‌ಗೆ ಕಾಲಿಟ್ಟು ಉದ್ಯಮಿಯಾಗಿದ್ದಾರೆ. ಇದು ಅವರ ಕಾಸ್ಮೆಟಿಕ್ ಕಂಪೆನಿಯಾಗಿದೆ. ಕತ್ರೀನಾ ತಮ್ಮ ಈ ಬ್ರಾಂಡ್‌ ಅನ್ನು.  ನೈಕಾದಲ್ಲಿ ಲಾಂಚ್‌ ಮಾಡಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories