Rashmika Mandanna Marriage News: ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ದೇವರಕೊಂಡ ಅವರು ಕೆಲ ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರೂ ಕೂಡ, ಎಲ್ಲಿಯೂ ಹೇಳಿಕೊಂಡಿರಲಿಲ್ಲ. ಇವರು ಒಂದೇ ಅಲ್ಲ, ಇನ್ನೂ ಕೆಲವರು ಹೀಗೆ ಮಾಡೋದುಂಟು. ಹಾಗಾದರೆ ಇದಕ್ಕೆ ಕಾರಣ ಏನು? ಯಾಕೆ ಹೀಗೆ ಮಾಡುತ್ತಾರೆ?
ಸ್ಯಾಂಡಲ್‌ವುಡ್‌ನಿಂದ ಬಾಲಿವುಡ್‌ವರೆಗೆ ಅನೇಕ ಸೆಲೆಬ್ರಿಟಿಗಳು ಒಪನ್ ಆಗಿ ಲವ್ ಬಗ್ಗೆ ಹೇಳೋದಿಲ್ಲ, ನಾವು ಸ್ನೇಹಿತರು ಎಂದು ಹೇಳಿ ಜಾರಿಕೊಳ್ಳುತ್ತಾರೆ, ಆಮೇಲೆ ಮದುವೆ ಆಗ್ತಾರೆ. ಇದಕ್ಕೆ ಕಾರಣ ಏನು?
ಲವ ಮ್ಯಾಟರ್‌ನ್ನು ಗುಟ್ಟಾಗಿಡಲು ಸೆಲೆಬ್ರಿಟಿಗಳಿಗೆ, ಸಾಮಾನ್ಯ ಜನರಿಗಿಂತಲೂ ಹೆಚ್ಚಿನ ಒತ್ತಡವಿರುತ್ತದೆ, ಕಾರಣಗಳಿರುತ್ತವೆ. ಬಣ್ಣದ ಲೋಕದಲ್ಲಿ ಒಂದು ಸಣ್ಣ ಸುಳಿವು ಸಿಕ್ಕರೂ ಕೂಡ ಅದು ದೊಡ್ಡ ಸುದ್ದಿಯಾಗುತ್ತದೆ.
28
ವೃತ್ತಿಜೀವನದ ಮೇಲೆ ಪರಿಣಾಮ
ವಿಶೇಷವಾಗಿ ಕಲಾವಿದರಿಗೆ ಅವರ 'ಸಿಂಗಲ್' ಸ್ಟೇಟಸ್ ಎನ್ನೋದು ಒಂದು ರೀತಿಯಲ್ಲಿ ಮಾರ್ಕೆಟ್ ವ್ಯಾಲ್ಯೂ ಇದ್ದಂತೆ. ಕಲಾವಿದರನ್ನು ಅಭಿಮಾನಿಗಳು ಕ್ರಶ್ ಥರ ನೋಡ್ತಾರೆ, ರಿಲೇಶನ್‌ಶಿಪ್‌ನಲ್ಲಿದ್ದಾರೆ ಎಂದು ಗೊತ್ತಾದರೆ ಆ ಕ್ರೇಜ್ ಕಮ್ಮಿ ಆಗಲೂಬಹುದು ಎಂಬ ಭಯ ನಿರ್ಮಾಪಕರಿಗೆ ಇರುವುದು.
38
ಬ್ರ್ಯಾಂಡ್ ಎಂಡೋರ್ಸ್‌ಮೆಂಟ್
ಕೆಲವು ಕಂಪನಿಗಳು "ಯೂತ್ ಐಕಾನ್" ಆಗಿರುವ ಸಿಂಗಲ್ ಸೆಲೆಬ್ರಿಟಿಗಳನ್ನೇ ತಮ್ಮ ಜಾಹೀರಾತುಗಳಿಗೆ ರಾಯಭಾರಿ ಆಗಿ ಹಾಕಿಕೊಳ್ಳುತ್ತವೆ. ಹೀಗಾಗಿ ಕೆಲ ಜಾಹೀರಾತು ಆಫರ್ ಮಿಸ್ ಆಗುವುದು.
ಲವ್ ವಿಷಯ ಹೊರಗಡೆ ಬಂದರೆ ಕೆಲವು ಮಾಧ್ಯಮಗಳು, ಪಾಪರಾಜಿಗಳು ಸೆಲೆಬ್ರಿಟಿಗಳ ಬೆನ್ನತ್ತುತ್ತಾರೆ. ಆ ಜೋಡಿ ಎಲ್ಲಿಗೆ ಹೋಯಿತು? ಏನು ತಿಂದರು? ಜಗಳವಾಡಿದ್ದಾರಾ? ಹೀಗೆ ಪ್ರತಿಯೊಂದು ವಿಷಯವೂ ಸುದ್ದಿ ಆಗುವುದು. ಈ ನಿರಂತರ ಕಣ್ಗಾವಲು ಈ ಜೋಡಿ ಸಂಬಂಧದಲ್ಲಿ ಅನಗತ್ಯ ಒತ್ತಡ ಉಂಟುಮಾಡುತ್ತದೆ.
58
'ಲಿಂಕ್-ಅಪ್' ಸುದ್ದಿಗಳ ಗೊಂದಲ
ಸಿನಿಮಾ ರಂಗದಲ್ಲಿ ಪ್ರಚಾರಕ್ಕಾಗಿ ತಾರೆಯರ ನಡುವೆ ಅಫೇರ್ ಇದೆ ಎಂಬ ವದಂತಿ ಹಬ್ಬಿಸುವುದು ಸಾಮಾನ್ಯ. ಆದರೆ ನಿಜವಾದ ಪ್ರೀತಿಯಲ್ಲಿರುವವರು, ತಮ್ಮ ಪವಿತ್ರವಾದ ರಿಲೇಶನ್‌ಶಿಪ್ ಇಂತಹ "ಪಬ್ಲಿಸಿಟಿ ಸ್ಟಂಟ್" ಆಗುವುದು ಇಷ್ಟಪಡುವುದಿಲ್ಲ.
68
ಸಂಬಂಧ ಮುರಿದುಬಿದ್ದರೆ?
ಒಂದು ವೇಳೆ ಮೊದಲೇ ಲವ್ ವಿಷಯ ಹೇಳಿ, ಆಮೇಲೆ ಬ್ರೇಕಪ್ ಆಧರೆ ಜನರು, ಸಮಾಜ, ಸೋಶಿಯಲ್ ಮೀಡಿಯಾ ಟ್ರೋಲ್‌ಗಳು ಇನ್ನಷ್ಟು ನೋವು ಕೊಡುತ್ತವೆ. ಹೀಗಾಗಿ ಮದುವೆ ತನಕ ಸುಮ್ಮನೆ ಇರುತ್ತಾರೆ.
78
ವೈಯಕ್ತಿಕ ಗೌಪ್ಯತೆ (Privacy)
ಕ್ಯಾಮೆರಾ ಮುಂದೆ ಇಡೀ ದಿನ ಕಳೆಯುವ ಸೆಲೆಬ್ರಿಟಿಗಳಿಗೆ ಖಾಸಗಿ ಜೀವನ ಖಾಸಗಿ ಆಗಿರಲಿ ಎಂಬ ಬಯಕೆ ಇರುವುದು. ಎಲ್ಲವನ್ನೂ ಜಗತ್ತಿಗೆ ಹೇಳಬೇಕೆಂಬ ನಿಯಮವಿಲ್ಲ ಎಂದುಕೊಳ್ಳುತ್ತಾರೆ.
88
ದೃಷ್ಟಿ ಬಿದ್ದರೆ
ಯಾವುದೇ ಕೆಲಸ ಆಗೋವರೆಗೂ ಹೇಳಬಾರದು, ದೃಷ್ಟಿ ಬೀಳುವುದು ಎನ್ನುತ್ತಾರೆ. ಹಾಗೆಯೇ ಲವ್ ಕೂಡ ಮದುವೆ ಆಗೋವರೆಗೂ ಹೇಳೋದು ಬೇಡ ಎಂದು ಸುಮ್ಮನೆ ಇರೋದುಂಟು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.