ಆ ವ್ಯಕ್ತಿಯ ಜೊತೆಗಿನ ಲಿಪ್ ಲಾಕ್…. ಅಭಿಷೇಕ್ - ರಾಣಿ ಮುಖರ್ಜಿ ಸಂಬಂಧ ಮುರಿಯೋದಕ್ಕೆ ಕಾರಣವಾಯ್ತ?

ಆ ಸಮಯದಲ್ಲಿ ರಾಣಿ ಮುಖರ್ಜಿ ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧವು ಸಾಕಷ್ಟು ಸುದ್ದಿ ಮಾಡಿತ್ತು. ರಾಣಿ ಬಚ್ಚನ್ ಕುಟುಂಬದ ಸೊಸೆಯಾಗಬಹುದೆಂಬ ಮಾತುಗಳೂ ಇದ್ದವು. ಆದರೆ ಮುಂದೆ  ಸಂಬಂಧ ಮುರಿದು ಬಿದ್ದಿದ್ದೇಕೆ?
 

Why Rani Mukharjee and Abhishek Bacchana broke up pav

ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ
ರಾಣಿ ಮುಖರ್ಜಿ (Rani Mukharjee) ಮತ್ತು ಅಭಿಷೇಕ್ ಬಚ್ಚನ್ ನಡುವಿನ ಸಂಬಂಧವು 2000 ರ ದಶಕದ ಆರಂಭದಲ್ಲಿ ಬಹಳಷ್ಟು ಸುದ್ದಿಯಲ್ಲಿತ್ತು. ಇಬ್ಬರೂ 'ಯುವ', 'ಬಂಟಿ ಔರ್ ಬಬ್ಲಿ', 'ಲಾಗ ಚುನಾರಿ ಮೇ ದಾಗ್' ನಂತಹ ಹಲವು ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದರು ಮತ್ತು ಅವರ ಜೋಡಿಯು ತೆರೆಯ ಮೇಲೆ ಮತ್ತು ತೆರೆಯ ಹೊರಗೆಯೂ ಸಹ ಜನರಿಗೆ ಇಷ್ಟವಾಗಿದ್ದರು. ರಾಣಿಯವರ ಹೆಸರು ಅನೇಕ ನಟರೊಂದಿಗೆ ತಳುಕು ಹಾಕಿಕೊಂಡಿದ್ದರೂ, ಅಭಿಷೇಕ್ ಬಚ್ಚನ್ ಜೊತೆಗಿನ ಅವರ ಸಂಬಂಧದ ಬಗ್ಗೆ ತಿಳಿದುಕೊಂಡಾಗ ಜನ ಶಾಕ್ ಆಗಿದ್ದರು. ಇಬ್ಬರೂ ಕೂಡ ಮದುವೆಯಾಗಲು ಬಯಸಿದ್ದರು ಎಂದೂ ಹೇಳಲಾಗುತ್ತದೆ. ಆದರೆ ನಂತರ ಆಗಿದ್ದೇನು? ಈ ಸಂಬಂಧ ಮುರಿದು ಬಿದ್ದಿದ್ದೇಕೆ?

Why Rani Mukharjee and Abhishek Bacchana broke up pav

ಜಯಾ ಆ ಸಂಬಂಧವನ್ನು ಒಪ್ಪಿಕೊಂಡಿದ್ದರು
ರಾಣಿ ಮುಖರ್ಜಿಯವರ ಹೆಸರು ಅಭಿಷೇಕ್ ಬಚ್ಚನ್ (Abhishek Bachchan) ಜೊತೆ ಕೇಳಿ ಬಂದಾಗ ಜನ ಖುಷಿ ಪಟ್ಟಿದ್ದರು. ಆದರೆ ಏನೋ ಘಟನೆ ನಡೆದು, ಸಂಬಂಧ ಮುರಿದು ಬಿತ್ತು. ಇದಕ್ಕೆ ಕಾರಣ ಅಭಿಷೇಕ್ ಅವರ ತಾಯಿ ಜಯಾ ಬಚ್ಚನ್ ಎಂಬ ಸುದ್ದಿ ಎಲ್ಲೆಡೆ ಹರಡಿತು. ವಿಷ್ಯಾ ಏನಂದ್ರೆ 'ಲಾಗ ಚುನಾರಿ ಮೇ ದಾಗ್' ಚಿತ್ರದ ಚಿತ್ರೀಕರಣದಲ್ಲಿದ ಸಮಯದಲ್ಲಿ ಜಯಾ ಮತ್ತು ರಾಣಿ ನಡುವೆ ಬಿರುಕು ಉಂಟಾಯಿತು ಎನ್ನಲಾಗಿತ್ತು. ಈ ಚಿತ್ರಕ್ಕೂ ಮುನ್ನ ಜಯಾ ತಮ್ಮ ಪುತ್ರ ಅಭಿಷೇಕ್ ಬಚ್ಚನ್ ಮತ್ತು ರಾಣಿ ಮುಖರ್ಜಿ ನಡುವಿನ ಸಂಬಂಧಕ್ಕೆ ಒಪ್ಪಿಗೆ ಸೂಚಿಸಿದ್ದರು. 


ಜಯಾ ಮತ್ತು ರಾಣಿ ನಡುವೆ ಬಿರುಕಿಗೆ ಕಾರಣ ಏನು?
ರಾಣಿ ಮುಖರ್ಜಿಯವರ ಕುಟುಂಬವು ಮದುವೆಯ ಬಗ್ಗೆ ಮಾತನಾಡಲು ಬಚ್ಚನ್ ಅವರ ಮನೆಗೆ ಹೋದಾಗ, ಜಯಾ ಬಚ್ಚನ್  ಹೇಳಿದ ವಿಷಯಗಳ ಬಗ್ಗೆ ರಾಣಿ ಹಾಗೂ ಅವರ ಕುಟುಂಬಕ್ಕೆ ತುಂಬಾ ಬೇಸರ ತಂದಿತ್ತಂತೆ. ಇಷ್ಟೇ ಅಲ್ಲ, ರಾಣಿಯ ಕುಟುಂಬಕ್ಕೂ ಜಯಾಳ ವರ್ತನೆ ಇಷ್ಟವಾಗಲಿಲ್ಲ. ಅಭಿಷೇಕ್ ಮತ್ತು ರಾಣಿ ನಡುವೆ ಎಲ್ಲವೂ ಚೆನ್ನಾಗಿದ್ದ ಕಾರಣ ಅವರ ನಡುವಿನ ಸಂಬಂಧವೂ ಚೆನ್ನಾಗಿರುತ್ತದೆ ಎಂದು ಜನರು ಭಾವಿಸಿದ್ದರು,  ಆದರೆ ಅಭಿಷೇಕ್ ಈ ಸಂಬಂಧವನ್ನು ಮದುವೆವರೆಗೂ ತೆಗೆದುಕೊಂಡು ಹೋಗಲೇ ಇಲ್ಲ. 

ಸಂಚಲನ ಹುಟ್ಟಿಸಿದ ಅಮಿತಾಬ್ ಜೊತೆ ರಾಣಿಯ ಲಿಪ್‌ಲಾಕ್ 
ರಾಣಿ ಅಮಿತಾಬ್ (Amitab Bachchan) ಜೊತೆ ಬ್ಲ್ಯಾಕ್ ಸಿನಿಮಾದಲ್ಲಿ ಕೆಲಸ ಮಾಡುತ್ತಿದ್ದಾಗ, ಆ ಸಮಯದಲ್ಲಿ ಅವರು ಬಿಗ್ ಬಿ ಜೊತೆ ಒಂದು ಕಿಸ್ಸಿಂಗ್ ದೃಶ್ಯವನ್ನು (Kissing Scene) ಚಿತ್ರೀಕರಿಸಬೇಕಾಗಿತ್ತು. ವರದಿಗಳ ಪ್ರಕಾರ, ಚಿತ್ರದಲ್ಲಿ ರಾಣಿ ತನ್ನ ಪತಿಗೆ ಮುತ್ತಿಟ್ಟಿದ್ದನ್ನು ನೋಡಿ ಜಯಾ ಬಚ್ಚನ್ ಬೇಸರಗೊಂಡಿದ್ದರು. ಅಭಿಷೇಕ್ ಬಚ್ಚನ್ ಅವರಿಗೂ ಇದು ಇಷ್ಟವಾಗಲಿಲ್ಲ. ಈ ಲಿಪ್‌ಲಾಕ್ ನಂತರ, ರಾಣಿ ಮುಖರ್ಜಿ ಮತ್ತು ಬಚ್ಚನ್ ಕುಟುಂಬದ ನಡುವೆ ಬಿರುಕು ಬೆಳೆಯಲು ಪ್ರಾರಂಭಿಸಿತು ಎಂದು ಹೇಳಲಾಗುತ್ತದೆ.

ರಾಣಿ -ಆದಿತ್ಯ ಚೋಪ್ರಾ
ನಂತರ, ರಾಣಿ ಪ್ರಸಿದ್ಧ ಚಲನಚಿತ್ರ ನಿರ್ಮಾಪಕ ಯಶ್ ಚೋಪ್ರಾ ಅವರ ಹಿರಿಯ ಮಗ ಆದಿತ್ಯ ಚೋಪ್ರಾ (Aditya Chopra) ಅವರನ್ನು ವಿವಾಹವಾದರು. ಆದಿತ್ಯನಿಗೆ ಕ್ಯಾಮೆರಾ ಮುಂದೆ ಬರಲು ಇಷ್ಟವಿಲ್ಲ. ಪೇಜ್ ತ್ರೀ ಪಾರ್ಟಿಗಳಿಗೆ ಹೋಗುವುದೂ ಇಷ್ಟವಿಲ್ಲ. ಇದೇ ಕಾರಣಕ್ಕೆ ಅವರು ಇಲ್ಲಿಯವರೆಗೆ ತಮ್ಮ ಮಗಳನ್ನು ಮಾಧ್ಯಮಗಳಿಂದ ದೂರವಿಟ್ಟಿದ್ದಾರೆ.  ಇಬ್ಬರು ಇಲ್ಲಿವರೆಗೆ ಅನ್ಯೋನ್ಯವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. 

Latest Videos

vuukle one pixel image
click me!