ಏನ್ ಮಾಡಿದ್ರೂ ರಾತ್ರಿ 9 ನಂತರ ಕಣ್ಣು ಬಿಡೋಕೆ ಆಗಲ್ಲ, ಸೆಟ್‌ನಲ್ಲಿ ಮಗು ಇದ್ದಂತೆ: ಸಾಯಿ ಪಲ್ಲವಿ

Published : Mar 21, 2025, 04:40 PM ISTUpdated : Mar 21, 2025, 04:42 PM IST

ಸಾಯಿ ಪಲ್ಲವಿ ದಿನಚರಿ ಕೇಳಿ ಶಾಕ್ ಆದ ಜನರು. ಅಷ್ಟು ಬೆಳಗ್ಗೆ ಎದ್ದು ಮಾಡುವುದಾದರೂ ಏನು ಅಂತಿದ್ದಾರೆ. 

PREV
16
ಏನ್ ಮಾಡಿದ್ರೂ ರಾತ್ರಿ 9 ನಂತರ ಕಣ್ಣು ಬಿಡೋಕೆ ಆಗಲ್ಲ, ಸೆಟ್‌ನಲ್ಲಿ ಮಗು ಇದ್ದಂತೆ: ಸಾಯಿ ಪಲ್ಲವಿ

ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ ದಿನಚರಿ ನಿಜಕ್ಕೂ ಸಖತ್ ಡಿಫರೆಂಟ್ ಆಗಿದೆ.  ಡಾಕ್ಟರ್ ಓದ್ಕೊಂಡು ಸಿನಿಮಾ ಮಾಡ್ತಿದ್ದಾರೆ ಅಂದ್ರೆ ಅಷ್ಟು ಸುಲಭವಲ್ಲ. ಇತ್ತೀಚಿಗೆ ನಡೆದ ಸಂದರ್ಶನದಲ್ಲಿ ಪಲ್ಲವಿ ಮಾತನಾಡಿದ್ದಾರೆ. 

26

'ರಾತ್ರಿ 9 ಗಂಟೆಗೆ ಮಲಗುತ್ತೀನಿ ಬೆಳಗ್ಗೆ 4 ಗಂಟೆಗೆ ಎದ್ದೇಳುತ್ತೀನಿ. ಯಾಕೆ ಬೆಳಗ್ಗೆ 4 ಗಂಟೆಗೆ ಎದ್ದೇಳುತ್ತೀನಿ ಅಂತ ಗೊತ್ತಿಲ್ಲ ಆದರೆ ಈ ಅಭ್ಯಾಸ ಹುಟ್ಟಿದ್ದು ನಾನು ಓಡುವಾಗ'
 

36

'ನಾನು ಜಾರ್ಜಿಯಾದಲ್ಲಿ ಓಡುತ್ತಿರುವಾಗ ಬೆಳಗಿನಜಾವ 3.30 ಸುಮಾರಿಗೆ ಎದ್ದು ಓದುವ ಅಭ್ಯಾಸ ಮಾಡಿಕೊಂಡಿದ್ದೆ. ಹೀಗಾಗಿ ಅದೇ ನನ್ನ ದೇಹಕ್ಕೆ ಫಿಕ್ಸ್ ಆಗಿದೆ'

46

'ಕಾಲೇಜ್‌ ಮುಗಿದು ನಾನು ಫ್ರೀ ಆಗಿದ್ದೀನಿ ಅಂದ್ರೂ ಕೂಡ ಬೇಗ ಎದ್ದೇಳುತ್ತೀನಿ. ಎಷ್ಟೇ ಒತ್ತಾಯ ಮಾಡಿದರೂ ಮಲಗುವುದಕ್ಕೆ ಆಗುವುದಿಲ್ಲ' 

56

'ಹಲವು ಸಿನಿಮಾ ಕೆಲಸಗಳು ರಾತ್ರಿ ಇಡೀ ಶೂಟಿಂಗ್ ಮಾಡುತ್ತಾರೆ ಆದರೆ ನಂಗೆ 9 ಗಂಟೆ ಮೇಲೆ ಎದ್ದೇಳುವುದು ಕಷ್ಟ. ನಟಿಗಿಂತ ಸೆಟ್‌ನಲ್ಲಿ ಪುಟ್ಟ ಹುಡುಗಿ ಇದ್ದಾಳೆ ಅಂದುಕೊಳ್ಳುತ್ತಾರೆ ನಿರ್ದೇಶಕರು' ಎಂದಿದ್ದಾರೆ ಪಲ್ಲವಿ.

66

ಸಾಯಿ ಪಲ್ಲವಿ ವರ್ಷಕ್ಕೆ ಒಂದೆರಡು ಸಿನಿಮಾ ಮಾಡಿದ್ರೂ ಕೂಡ ಜನರಿಗೆ ಇಷ್ಟ ಆಗುವಂತೆ ಮಾಡುತ್ತಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ರೂ ಕೂಡ ನಿರ್ಮಾಪರ ಕಷ್ಟ ಅರ್ಥ ಮಾಡಿಕೊಳ್ಳುತ್ತಾರೆ. 
 

Read more Photos on
click me!

Recommended Stories