Samantha
ಸಮಂತಾ ರುತ್ ಪ್ರಭು ಅವರ ವೈಯಕ್ತಿಕ ಫಿಟ್ನೆಸ್ ತರಬೇತುದಾರರು ಅವರ ವರ್ಕೌಟ್ ಅವಧಿಗಳ ಬಗ್ಗೆ ಬಹಿರಂಗ ಪಡಿಸಿದರು ಮತ್ತು ಸಮಂತಾ ಅವರನ್ನು ವಿರಾಟ್ ಕೊಹ್ಲಿಗೆ ಹೋಲಿಸಿದ್ದಾರೆ. ಅಷ್ಟಕ್ಕೂ ಯಾವ ಗುಣದಲ್ಲಿ ಸಮಂತಾ ಕ್ರಿಕೆಟರ್ ವಿರಾಟ್ ಕೊಹ್ಲಿಯನ್ನು ಹೋಲುತ್ತಾರೆ?
Samantha
ಸಮಂತಾ ರುತ್ ಪ್ರಭು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಅನುಯಾಯಿಗಳು ಮತ್ತು ಅಭಿಮಾನಿಗಳ ಜೊತೆ ರೆಗ್ಯುಲರ್ ಆಗಿ ತಮ್ಮ ಜೀವನ ಅಪ್‌ಡೇಟ್ಸ್ ಹಂಚಿಕೊಳ್ಳುತ್ತಿರುತ್ತಾರೆ. ಸ್ಯಾಮ್ ಪ್ರಸ್ತುತ ಬಹಳಷ್ಟು ಫಿಟೆಸ್ಟ್ ಮತ್ತು ಹಾರ್ಡ್ ವರ್ಕಿಂಗ್ ನಟಿಯರಲ್ಲಿ ಒಬ್ಬರು.
samantha
ಆಕೆಯ ವೈಯಕ್ತಿಕ ಫಿಟ್ನೆಸ್ ತರಬೇತುದಾರ ಇತ್ತೀಚೆಗೆ ನಟಿಯನ್ನು ವಿರಾಟ್ ಕೊಹ್ಲಿಗೆ ಹೋಲಿಸಿದ್ದಾರೆ.ಸಮಂತಾ ತನ್ನ ಇಂಟೆನಸ್ ವರ್ಕೌಟ್ ಸೆಷನ್‌ಗಳ ವೀಡಿಯೊಗಳನ್ನು Instagram ನಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ ಮತ್ತು ತನ್ನ ಅಭಿಮಾನಿಗಳಿಗೆ ಪ್ರಮುಖ ಫಿಟ್‌ನೆಸ್ ಗೋಲ್‌ಗಳನ್ನು ನೀಡುತ್ತಾರೆ.
ಕೆಲವರು ಆಕೆಯ ವೀಡಿಯೊಗಳು ಮತ್ತು ಫೋಟೋಗಳಿಂದ ಪ್ರೇರೇಪಿಸಲ್ಪಡುತ್ತಾರೆ. ಆಕೆಯ ಫಿಟ್ನೆಸ್ ತರಬೇತುದಾರ ಜುನೈದ್ ಶೇಖ್ ಸಮಂತಾ ಅವರು ತಮ್ಮ ಮಿತಿಗಳನ್ನು ಮೀರಿ ವರ್ಕೌಟ್ ಮಾಡುವುದರಲ್ಲಿ ವಿರಾಟ್ ಕೊಹ್ಲಿಗೆ ಹೋಲಿಸಿದ್ದಾರೆ.
samantha
ಸಮಂತಾ ಈ ಹಿಂದೆ ಡೆಡ್‌ಲಿಫ್ಟ್‌ಗಳು, ಸ್ಕ್ವಾಟ್‌ಗಳು, ಏರೋಬಿಕ್ಸ್, ಏರಿಯಲ್ ಯೋಗ ವರ್ಕೌಟ್ ಸೆಷನ್‌ಗಳ ವೀಡಿಯೊಗಳನ್ನು ಹಂಚಿಕೊಂಡಿದ್ದರು. ಸಮಂತಾ ಅವರ ಟ್ರೈನರ್ ಸ್ಥಳೀಯ ಸುದ್ದಿ ವೆಬ್‌ಸೈಟ್‌ನೊಂದಿಗೆ ಮಾತನಾಡುತ್ತಾ ಸಮಂತಾ ಬಗ್ಗೆ ಹೇಳಿದ್ದಾರೆ.
'ನೀವು ಕ್ರೀಡಾಪಟುವಾಗಿದ್ದರೆ, ನೀವು ವಿರಾಟ್ ಕೊಹ್ಲಿಯಂತೆ ಇರುತ್ತಿದ್ದಿರಿ' ಎಂದು ನಟಿಯ ಬಗ್ಗೆ ಹೇಳಿದ್ದಾರೆ. 'ಸಮಂತಾ 'ನಾನು ಅದನ್ನು ಮತ್ತೆ ಪ್ರಯತ್ನಿಸುತ್ತೇನೆ ಮತ್ತು ಮಾಡುತ್ತೇನೆ ಎಂಬ ಮನೋಭಾವವನ್ನು ಹೊಂದಿದ್ದಾರೆ. ಅವರು ತುಂಬಾ ಆಕ್ರಮಣಕಾರಿ ಮತ್ತು ಮಿತಿ ಮೀರಿ ಕೆಲಸಗಳನ್ನು ಮಾಡಲು ಬಯಸುತ್ತಾರೆ. ನಾನು ಅವರಿಂದ ಪ್ರೇರಣೆ ಪಡೆಯುತ್ತೇನೆ' ಎಂದಿದ್ದಾರೆ.