RRR Updates: ಶೂಟಿಂಗ್ ಸಂದರ್ಭ ಆಲಿಯಾ ಭಟ್‌ನನ್ನು ನಿರ್ಲಕ್ಷಿಸಿದ್ರಾ ರಾಮ್ ಚರಣ್ ?

First Published | Dec 12, 2021, 5:45 PM IST

RRR Movie Updates: ಸಿನಿಮಾ ಶೂಟಿಂಗ್ ಸಂದರ್ಭ ಆಲಿಯಾರನ್ನು ನಿರ್ಲಕ್ಷಿಸಿದ್ರಾ ರಾಮ್ ಚರಣ್ ? ಆಲಿಯಾ ಭಟ್ ಈ ಬಗ್ಗೆ ದೂರು ಹೇಳಿದ್ದಾರೆ. ಏನಂದಿದ್ದಾರೆ ?

ಖ್ಯಾತ ನಿರ್ದೇಶಕ ಎಸ್‌ಎಸ್ ರಾಜಮೌಳಿ ನಿರ್ದೇಶನದ RRR ಜನವರಿ 7 2022 ರಂದು ಅದ್ಧೂರಿಯಾಗಿ ಬಿಡುಗಡೆಗೊಳ್ಳಲು ಸಜ್ಜಾಗುತ್ತಿದೆ. ಇತ್ತೀಚೆಗೆ ಚಿತ್ರದ ಶೂಟಿಂಗ್‌ನಲ್ಲಿ ರಾಮ್ ಚರಣ್ ಮತ್ತು ಜೂನಿಯರ್ ಎನ್‌ಟಿಆರ್ ತನ್ನನ್ನು ನಿರ್ಲಕ್ಷಿಸಿದ್ದಾರೆ ಎಂದು ನಾಯಕಿ ಆಲಿಯಾ ಭಟ್ ಬಹಿರಂಗಪಡಿಸಿದ್ದಾರೆ.

ರಾಮ್ ಚರಣ್ ತನ್ನನ್ನು ನಿರ್ಲಕ್ಷಿಸಿದ್ದಾರೆ. ಅವರು ಸೆಟ್‌ಗಳಲ್ಲಿ ತಮ್ಮೊಂದಿಗೆ ಅಷ್ಟೇನೂ ಮಾತನಾಡಲಿಲ್ಲ ಎಂದು ಆಲಿಯಾ ಭಟ್ ಹಂಚಿಕೊಂಡಿದ್ದಾರೆ. ಇದಕ್ಕೆ ಉತ್ತರಿಸಿದ ರಾಮ್ ಚರಣ್, ನೀವು ತುಂಬಾ ಸುಂದರವಾಗಿದ್ದೀರಿ ಅಂತ ನಾಚಿಕೆ ಆಗ್ತಿತ್ತು ಎಂದಿದ್ದಾರೆ.

Tap to resize

ರಾಮ್ ಚರಣ್(Ram charan) ಮತ್ತು ಜೂನಿಯರ್ ಎನ್‌ಟಿಆರ್ ಹೇಗೆ ಸಂಪೂರ್ಣವಾಗಿ ವಿಭಿನ್ನವಾಗಿವೆ ಆದರೆ ಯಾವಾಗಲೂ ಒಂದೇ ರೀತಿ ಮುಂದುವರಿಯುತ್ತಾರೆ ಎಂಬುದನ್ನು ನಟಿ ಹೇಳಿದ್ದಾರೆ. ಅವರು ಪರಸ್ಪರ ಕಾಲೆಳೆಯುತ್ತಾರೆ ಅಷ್ಟೆ ಎಂದು ಆಲಿಯಾ ಹೇಳಿದ್ದಾರೆ.

ಅವರು ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತಿದ್ದರು. ಅವರ ಬಂಧವು ತುಂಬಾ ವಿಶೇಷವಾಗಿದೆ ಎಂದು ನನಗೆ ಗೊತ್ತಾಯಿತು. ನಾವು ಹಾಡನ್ನು ಚಿತ್ರೀಕರಿಸಿದಾಗ, ನೀವು ಮಾತನಾಡುತ್ತಿರುವುದು ನನಗೆ ಏನೂ ಅರ್ಥವಾಗುತ್ತಿಲ್ಲ, ದಯವಿಟ್ಟು ಅನುವಾದಿಸಬಹುದೇ ಎಂದು ಕೇಳಿದ್ದೆ. ರಾಮ್ ಚರಣ್ ಸರ್ ನನಗಾಗಿ ಭಾಷಾಂತರ ಮಾಡಿದರು ಎಂದಿದ್ದಾರೆ.

ತಮ್ಮ ಮೊದಲ ತೆಲುಗು ಚಿತ್ರದಲ್ಲಿ ಕೆಲಸ ಮಾಡಿದ ಅನುಭವವನ್ನೂ ಆಲಿಯಾ ಹಂಚಿಕೊಂಡಿದ್ದಾರೆ. ಬಾಲಿವುಡ್ ಸಿನಿಮಾಗಳಿಗೆ ಮಾತ್ರ ಸೀಮಿತವಾಗಲು ನಾನು ಬಯಸುವುದಿಲ್ಲ ಎಂದು ಅವರು ಹೇಳಿದ್ದಾರೆ. ಚಿತ್ರದಲ್ಲಿ ನನ್ನ ಪಾತ್ರದ ಬಗ್ಗೆ ನಿರ್ದೇಶಕರು ಮಾತ್ರ ನಿರ್ಧರಿಸಬೇಕು. ನಿರ್ದೇಶಕರ ದೃಷ್ಟಿ ಮುಖ್ಯ ಎಂದಿದ್ದಾರೆ.

ನಾನು ನಟಿಸಲು ಸಿದ್ಧ. ಆರ್‌ಆರ್‌ಆರ್‌ನಲ್ಲಿ ನಟಿಸಿದ್ದು ಉತ್ತಮ ಅನುಭವವಾಗಿದ್ದು, ಚಿತ್ರತಂಡ ನನ್ನನ್ನು ಚೆನ್ನಾಗಿ ನೋಡಿಕೊಂಡಿದೆ. ಅಭಿಮಾನಿಗಳ ಪ್ರೀತಿ ನೋಡಿ ಮನಸೋತಿದ್ದೇನೆ. ನಾನು ಹೆಚ್ಚು ದಕ್ಷಿಣ ಭಾರತದ ಚಿತ್ರಗಳಲ್ಲಿ ನಟಿಸಲು ಬಯಸುತ್ತೇನೆ ಎಂದಿದ್ದಾರೆ.

ಆರ್‌ಆರ್‌ಆರ್ ಹೊರತುಪಡಿಸಿ ಆಲಿಯಾ ಇನ್ನೂ ಹಲವಾರು ಸಿನಿಮಾ ಮಾಡುತ್ತಿದ್ದಾರೆ. ಕತ್ರಿನಾ ಕೈಫ್ ಮತ್ತು ಪ್ರಿಯಾಂಕಾ ಚೋಪ್ರಾ ಅವರೊಂದಿಗೆ ಜೀ ಲೆ ಜರಾ, ರಣಬೀರ್ ಕಪೂರ್ ಮತ್ತು ಅಮಿತಾಭ್ ಬಚ್ಚನ್, ಗಂಗೂಬಾಯಿ ಕಥಿವಾಡಿ ಅವರೊಂದಿಗೆ ಬ್ರಹ್ಮಾಸ್ತ್ರ, ರಣವೀರ್ ಸಿಂಗ್ ಅವರೊಂದಿಗೆ ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಹೊಂದಿದ್ದಾರೆ.

Latest Videos

click me!