ಅರ್ಜುನ್‌ ಕಪೂರ್‌ ಜೊತೆ ಡೇಟಿಂಗ್‌; ಕುಶಾ ಕಪಿಲಾ ಹೇಳಿದ್ದಿಷ್ಟು!

Published : Sep 08, 2023, 05:16 PM IST

ಇತ್ತೀಚೆಗೆ ಕುಶಾ ಕಪಿಲಾ (Kusha Kapila) ಮತ್ತು ಅರ್ಜುನ್ ಕಪೂರ್ (Arjun Kapoor) ನಡುವಿನ ಡೇಟಿಂಗ್ (Dating) ವದಂತಿಗಳು ಅಂತರ್ಜಾಲದಲ್ಲಿ ಸಖತ್‌ ಸುದ್ದಿ ಮಾಡಿದೆ. ಪ್ರಸ್ತುತ ತಮ್ಮ ಮುಂಬರುವ ಚಿತ್ರ 'ಸುಖೀ' ಪ್ರಚಾರ ಮಾಡುತ್ತಿರುವ ಸಾಮಾಜಿಕ ಮಾಧ್ಯಮದ ಪ್ರಭಾವಿ/ನಟಿ ಕುಶಾ ಕಪಿಲಾ ನಟ ಅರ್ಜುನ್‌ ಕಪೂರ್‌ ಜೊತೆಗಿನ  ಸಂಬಂಧದ ವದಂತಿಗಳಿಗೆ ಪ್ರತಿಕ್ರಿಯಿಸಿದ್ದಾರೆ. 

PREV
110
ಅರ್ಜುನ್‌ ಕಪೂರ್‌ ಜೊತೆ ಡೇಟಿಂಗ್‌; ಕುಶಾ ಕಪಿಲಾ ಹೇಳಿದ್ದಿಷ್ಟು!

ಇತ್ತೀಚೆಗೆ ಕರಣ್ ಜೋಹರ್ ಪಾರ್ಟಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡ ನಂತರ ಕುಶಾ ಕಪಿಲಾ ಮತ್ತು ಅರ್ಜುನ್ ಕಪೂರ್ ಅವರ ಡೇಟಿಂಗ್ ವದಂತಿ ಪ್ರಾರಂಭವಾದವು. 
 

210

ಸದ್ಯ 'ಸುಖೀ' ಮತ್ತು 'ಥ್ಯಾಂಕ್ಯೂ ಫಾರ್ ಕಮಿಂಗ್' ಚಿತ್ರಗಳ ಪ್ರಚಾರದಲ್ಲಿ ನಿರತರಾಗಿರುವ ಕುಶಾ ಕಪಿಲಾ ಇತ್ತೀಚೆಗೆ ನಟ ಅರ್ಜುನ್ ಕಪೂರ್ ಜೊತೆಗಿನ ಡೇಟಿಂಗ್ ವದಂತಿಗಳ ಬಗ್ಗೆ ಮೌನ ಮುರಿದಿದ್ದಾರೆ.

310

 ಅವರು  ಟ್ರೋಲ್‌ ಬಗ್ಗೆ ಮತ್ತು ತನ್ನ ಮಾಜಿ ಪತಿ ಜೊರಾವರ್ ಅಹ್ಲುವಾಲಿಯಾ ಜೊತೆಗಿನ ಪ್ರತ್ಯೇಕತೆಯ ಬಗ್ಗೆಯೂ ಮಾತನಾಡಿದ್ದಾರೆ.

410

ಕುಶಾ ಕಪಿಲಾ ಇತ್ತೀಚೆಗೆ ತನ್ನ ಮತ್ತು ನಟ ಅರ್ಜುನ್ ಕಪೂರ್ ಕಪೂರ್ ನಡುವಿನ ಡೇಟಿಂಗ್ ವದಂತಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. 

510

'ನಾನು ಯಾವುದೇ ರೀತಿಯ ಪ್ರತಿಕ್ರಿಯೆಗೆ ಮಹತ್ವ ನೀಡಲು ಬಯಸುವುದಿಲ್ಲ. ಯಾವುದೇ ರೀತಿಯ ಪ್ರತಿಕ್ರಿಯೆಯೊಂದಿಗೆ ಈ ರೀತಿಯ ವಿಷಯಗಳಿಗೆ ಮಹತ್ವ ನೀಡುವ ಅಗತ್ಯವಿಲ್ಲ ಎಂದು ನಾನು ಭಾವಿಸುತ್ತೇನೆ,' ಎಂದು ಇತ್ತೀಚೆಗೆ  ಕುಶಾ ಕಪಿಲಾ ಜೂಮ್ ಟಿವಿಯೊಂದಿಗೆ ಮಾತನಾಡುತ್ತಾ ಹೇಳಿದ್ದಾರೆ.

610

ಕುಶಾ ಕಪಿಲಾ ಅವರು ಜೂನ್‌ನಲ್ಲಿ ಮಾಜಿ ಪತಿ ಜೋರಾವರ್ ಅಹ್ಲುವಾಲಿಯಾ ಅವರಿಂದ ಬೇರ್ಪಡುವುದಾಗಿ ಘೋಷಿಸಿದರು ಮತ್ತು ಅಂದಿನಿಂದ ಅವರು ಟ್ರೋಲ್‌ಗೆ ಗುರಿಯಾಗುತ್ತಲೇ ಇದ್ದಾರೆ. 
 

710

'ನನ್ನನ್ನು ರಕ್ಷಿಸಲು ನನ್ನ ಸುತ್ತಲೂ ಎಲ್ಲರೂ ಸುತ್ತುವರಿದಿದ್ದಾರೆ. ನಾನು ಸಾರ್ವಜನಿಕ ವ್ಯಕ್ತಿ ಎಂದು ಅರ್ಥಮಾಡಿಕೊಂಡಿದ್ದೇನೆ. ನನ್ನ ಚರ್ಮವನ್ನು ಗಟ್ಟಿ ಮಾಡಿಕೊಳ್ಳುವ ಪ್ರಯತ್ನದಲ್ಲಿದ್ದೇನೆ. ಟ್ರೋಲ್‌ಗೆ ಬಾದರ್ ಮಾಡುವುದನ್ನೇ ನಿಲ್ಲಿಸಿದ್ದೇನೆ, ಎನ್ನುತ್ತಾರೆ.

810

 ಕುಶಾ ಕಪಿಲ್‌ ಅವರು ಈ ಹಿಂದೆ ಅಕ್ಷಯ್ ಕುಮಾರ್ ಮತ್ತು ಇಮ್ರಾನ್ ಹಶ್ಮಿ ಅವರ 'ಸೆಲ್ಫಿ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

910

 ಈಗ ಭೂಮಿ ಪೆಡ್ನೇಕರ್, ಶೆಹನಾಜ್ ಗಿಲ್ ಮತ್ತು ಡಾಲಿ ಸಿಂಗ್ ಪ್ರಮುಖ ಪಾತ್ರಗಳಲ್ಲಿ 'ಥ್ಯಾಂಕ್ ಯು ಫಾರ್ ಕಮಿಂಗ್' ಚಿತ್ರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. 

1010

ಜೊತೆಗೆ ಕುಶಾ, ಶಿಲ್ಪಾ ಶೆಟ್ಟಿ ಅವರ 'ಸುಖೀ' ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.ಇದಲ್ಲದೆ ಅರ್ಜುನ್ ಕಪೂರ್ ಅವರ ಜೊತೆ  ನಾಯರ್ ಥ್ರಿಲ್ಲರ್ 'ದಿ ಲೇಡಿಕಿಲ್ಲರ್' ಕೂಡ ಸಾಲಿನಲ್ಲಿದೆ.

Read more Photos on
click me!

Recommended Stories