ನೆರೆಹೊರೆಯಾದ ಸಾರಾ, ಕಾರ್ತಿಕ್‌; ಮತ್ತೆ ಹತ್ತಿರವಾಗ್ತಾರಾ ಮಾಜಿ ಪ್ರೇಮಿ?

First Published | Sep 8, 2023, 5:01 PM IST

ಸಾರಾ ಅಲಿ ಖಾನ್ (Sara Ali Khan) ಮತ್ತು ಕಾರ್ತಿಕ್ ಆರ್ಯನ್ (Katik Aryan) ತಮ್ಮ ಸಂಬಂಧದ ಕಾರಣದಿಂದ ಆಗಾಗ್ಗೆ ಸುದ್ದಿಯಲ್ಲಿರುತ್ತಾರೆ. ಇಮ್ತಿಯಾಜ್ ಅಲಿ ಅವರ ಚಿತ್ರ ಲವ್ ಆಜ್ ಕಲ್ (2020) ಚಿತ್ರೀಕರಣದ ಸಮಯದಲ್ಲಿ ಕಾರ್ತಿಕ್ ಮತ್ತು ಸಾರಾ ಡೇಟಿಂಗ್ ಬಗ್ಗೆ ವದಂತಿಗಳು ಹೊರಹೊಮ್ಮಿದ್ದವು, ಆದರೂ ಅವರು ಚಿತ್ರದ ಬಿಡುಗಡೆಯ ಮೊದಲು ಅವರ ಸಂಬಂಧ  ಮುರಿದುಬಿತ್ತು ಇದೆಲ್ಲದರ ನಡುವೆ ಇಬ್ಬರೂ ಈಗ ಇಬ್ಬರೂ ಒಂದೇ ಕಡೆ ಆಸ್ತಿ ಖರೀದಿಸಿದ್ದಾರೆ. ಅಷ್ಟಕ್ಕೂ ಏನು ನಡೆಯುತ್ತಿದೆ ಇವರ ನಡುವೆ? ಮತ್ತೆ ಒಂದಾಗಲಿದ್ದಾರಾ ಮಾಜಿ ಪ್ರೇಮಿಗಳು?

ವಾಸ್ತವವಾಗಿ, ಸಾರಾ ಅಲಿ ಖಾನ್ ಮತ್ತು ಕಾರ್ತಿಕ್ ಆರ್ಯನ್  ಮುಂಬೈನ ಐಷಾರಾಮಿ ಪ್ರದೇಶದಲ್ಲಿ ತಮ್ಮ ಕಚೇರಿಗಾಗಿ ಆಸ್ತಿ ಖರೀದಿಸಿದ್ದಾರೆ.

ವೀರ್ ಸಾವರ್ಕರ್ ಪ್ರಾಜೆಕ್ಟ್ ಅಡಿಯಲ್ಲಿ ಕಾರ್ತಿಕ್ ಆರ್ಯನ್ ಈ ಆಸ್ತಿಯನ್ನು ಸಿಗ್ನೇಚರ್ ಬಿಲ್ಡಿಂಗ್‌ನಲ್ಲಿ ತೆಗೆದುಕೊಂಡಿದ್ದಾರೆ. ಕಾರ್ತಿಕ್ ಅವರ ಈ ಆಸ್ತಿ 10.09 ಕೋಟಿ ರೂಪಾಯಿಗಳಾಗಿದ್ದು, ಇದು 2,099 ಚದರ ಅಡಿಗಳಲ್ಲಿ ಹರಡಿದೆ. 

Tap to resize

ಕಾರ್ತಿಕ್ ಅವರು ಸೆಪ್ಟೆಂಬರ್ 4, 2023 ರಂದು ಅದನ್ನು ನೋಂದಾಯಿಸಿದ್ದಾರೆ ಮತ್ತು ಅದಕ್ಕಾಗಿ ಅವರು 47.55 ಲಕ್ಷ ರೂಪಾಯಿ ಮುದ್ರಾಂಕ ಶುಲ್ಕ ಪಾವತಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಸಾರಾ  ತನ್ನ ತಾಯಿ ಅಮೃತಾ ಸಿಂಗ್ ಜೊತೆಗೆ ಐಶ್ವರ್ಯಾ ಪ್ರಾಪರ್ಟಿ ಮತ್ತು ಎಸ್ಟೇಟ್ ನಿಂದ 9 ಕೋಟಿ ಮೌಲ್ಯದ ಆಸ್ತಿ ಖರೀದಿಸಿದ್ದಾರೆ. ಈ ಆಸ್ತಿಯು ನಾಲ್ಕನೇ ಮಹಡಿಯಲ್ಲಿದೆ ಮತ್ತು 2,099 ಚದರ ಅಡಿಗಳಲ್ಲಿ ಹರಡಿದೆ. ಇದಕ್ಕಾಗಿ ಸಾರಾ 41.01 ಲಕ್ಷ ರೂಪಾಯಿ ರಿಜಿಸ್ಟರೇಷನ್‌ ಫೀಸ್‌ ಪಾವತಿಸಿದ್ದಾರೆ. 

ಇವರಿಬ್ಬರು ಮಾತ್ರವಲ್ಲದೆ ಅಮಿತಾಭ್ ಬಚ್ಚನ್, ಅಜಯ್ ದೇವಗನ್‌ನಿಂದ ಹಿಡಿದು ಕಾಜೋಲ್‌ವರೆಗೆ ಎಲ್ಲರೂ ಈ ಕಟ್ಟಡದಲ್ಲಿ ತಮ್ಮ ಕಚೇರಿಗಳಿಗಾಗಿ ಆಸ್ತಿಯನ್ನು ತೆಗೆದುಕೊಂಡಿದ್ದಾರೆ ಎಂಬುದು ಗಮನಾರ್ಹ ವಿಷಯವಾಗಿದೆ.

ಸಾರಾ ಕೆಲವು ವರ್ಷಗಳ ಹಿಂದೆ ಕಾರ್ತಿಕ್ ಜೊತೆ ಡೇಟಿಂಗ್ (Dating) ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದರು. ಅಂತಹ ಪರಿಸ್ಥಿತಿಯಲ್ಲಿ, 'ಲವ್ ಆಜ್ ಕಲ್ 2' ನಲ್ಲಿ ಇಬ್ಬರೂ ಒಟ್ಟಿಗೆ ಕೆಲಸ ಮಾಡಿದಾಗ, ಅವರ ಸಂಬಂಧದ ಬಗ್ಗೆ ವದಂತಿಗಳು ಹರಡಲಾರಂಭಿಸಿದವು. 

ಆದರೆ, ಚಿತ್ರ ಬಿಡುಗಡೆಗೂ ಮುನ್ನವೇ ಇಬ್ಬರ ಸಂಬಂಧ ಮುರಿದುಬಿದ್ದಿತು. ಕಾರ್ತಿಕ್ ಇನ್‌ಸ್ಟಾಗ್ರಾಮ್‌ನಲ್ಲಿ ಸಾರಾ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ವರದಿಗಳೂ ಇವೆ. 

ಕೆಲ ಸಮಯದ ಹಿಂದೆ 'ಗದರ್ 2' ಯಶಸ್ಸಿನ ಪಾರ್ಟಿಯಲ್ಲಿ ಸಾರಾ ಮತ್ತು ಕಾರ್ತಿಕ್ ಮುಖಾಮುಖಿಯಾಗಿದ್ದರೂ, ಇಬ್ಬರೂ ಪರಸ್ಪರ ಅಪ್ಪಿಕೊಂಡರು. ಅಂತಹ ಪರಿಸ್ಥಿತಿಯಲ್ಲಿ, ಅವರ ಪ್ಯಾಚ್ ಅಪ್ ಸುದ್ದಿ ತೀವ್ರಗೊಂಡಿದೆ. 

ಅದೇ ಸಮಯದಲ್ಲಿ, ಇಬ್ಬರೂ ಪರಸ್ಪರ ನೆರೆಹೊರೆಯವರಾಗಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ.ಇವರ ಅಭಿಮಾನಿಗಳು ಸಹ  ಮುಂಬರುವ ದಿನಗಳಲ್ಲಿ ಅವರ ಸಂಬಂಧವನ್ನು ಗಟ್ಟಿಯಾಗಬಹುದು ಎಂದು ಊಹಿಸುತ್ತಿದ್ದಾರೆ.

Latest Videos

click me!