ಅಶುತೋಷ್ ಗೋವಾರಿಕರ್ ಅವರ ಸ್ವದೇಸ್ ಚಿತ್ರದಲ್ಲಿ ಶಾರುಖ್ ಖಾನ್ ಎದುರು ಗಾಯತ್ರಿ ಜೋಶಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇದಾದ ನಂತರ ಗಾಯತ್ರಿ ಯಾವ ಚಿತ್ರದಲ್ಲೂ ಕಾಣಿಸಿಕೊಂಡಿಲ್ಲ.
ಮರಾಠಿ ಕುಟುಂಬದಿಂದ ಬಂದ ಗಾಯತ್ರಿ ಜೋಶಿ ವಿದ್ಯಾಭ್ಯಾಸ ಮುಗಿಸಿ ವಿಡಿಯೋ ಜಾಕಿಯಾಗಿ ವೃತ್ತಿ ಜೀವನ ಆರಂಭಿಸಿದರು. ಆದಾಗ್ಯೂ, ಅವರು ಶೀಘ್ರದಲ್ಲೇ ಈ ಕೆಲಸವನ್ನು ಬಿಟ್ಟು ಮಾಡೆಲಿಂಗ್ ಪ್ರಾರಂಭಿಸಿದರು.
ಗಾಯತ್ರಿ ಜೋಶಿ ಅವರು 1999 ರ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದರು ಮತ್ತು ಅಗ್ರ 5 ರಲ್ಲಿ ಸ್ಥಾನ ಪಡೆದರು. ನಂತರ ಅವರು 2000 ಫೆಮಿನಾ ಮಿಸ್ ಇಂಡಿಯಾ ಇಂಟರ್ನ್ಯಾಷನಲ್ ಅನ್ನು ಗೆದ್ದರು.
ಸೌಂದರ್ಯ ಸ್ಪರ್ಧೆಯನ್ನು ಗೆದ್ದ ನಂತರ, ಗಾಯತ್ರಿ ಜೋಶಿ ನಿರಂತರವಾಗಿ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳ ಅಫರ್‌ಗಳನ್ನು ಪಡೆಯಲಾರಂಭಿಸಿದರು. ಈ ವೇಳೆ ಶಾರುಖ್ ಖಾನ್ ಜೊತೆ ಜಾಹೀರಾತು ಕೂಡ ಮಾಡಿದ್ದರು.
ಗಾಯತ್ರಿ ಜೋಶಿ ಅವರು 2001 ರಲ್ಲಿ ಕ್ಯಾಲೆಂಡರ್‌ಗಳು ಮತ್ತು ಸೀಸನ್ ಕ್ಯಾಟಲಾಗ್‌ಗಳಿಗೆ ಮಾಡೆಲ್ ಆಗಿದ್ದರು. ಈ ವೇಳೆ ನಿರ್ದೇಶಕ ಅಶುತೋಷ್ ಗೋವಾರಿಕರ್ ಅವರ ಗಮನ ಅವರ ಮೇಲೆ ಬಿದ್ದು ಸ್ವದೇಸ್ ಚಿತ್ರದಲ್ಲಿ ಗಾಯತ್ರಿ ಅವರಿಗೆ ಅವಕಾಶ ಸಿಕ್ಕಿತು
Gayatri Joshi
ಸ್ವದೇಸ್ ಚಿತ್ರದಲ್ಲಿ ಕೆಲಸ ಮಾಡಿದ ನಂತರ ಅವರಿಗೆ ಹಲವು ಚಿತ್ರಗಳ ಆಫರ್ ಬಂದರೂ ಕಥೆಗಳು ಇಷ್ಟವಾಗಲಿಲ್ಲ. ನಂತರ ನಟನೆ ಬಿಟ್ಟು ಸೆಟ್ಲ್ ಆಗಲು ನಿರ್ಧರಿಸಿದ್ದರು.
2019 ರಲ್ಲಿ ಸಂದರ್ಶನವೊಂದರಲ್ಲಿ, ಗಾಯತ್ರಿ ಜೋಶಿ ಸ್ವದೇಸ್ ನಂತರ ನಟನೆಯನ್ನು ತೊರೆಯುವ ಯಾವುದೇ ಪೂರ್ವ ಯೋಜನೆ ಇರಲಿಲ್ಲ. ಆದರೆ, ಆಕೆ ಬಯಸಿದ ಪಾತ್ರಗಳು ಸಿಗಲಿಲ್ಲ ಎಂದು ಹೇಳಿದರು.
ನಟನೆಯನ್ನು ತೊರೆದ ನಂತರ, ಗಾಯತ್ರಿ ಜೋಶಿ 27 ಆಗಸ್ಟ್ 2005 ರಂದು ಉದ್ಯಮಿ ವಿಕಾಸ್ ಒಬೆರಾಯ್ ಅವರನ್ನು ವಿವಾಹವಾದರು. ವಿಕಾಸ್ ಒಬೆರಾಯ್ ರಿಯಾಲ್ಟಿ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿದ್ದಾರೆ.
ಗಾಯತ್ರಿ ಜೋಶಿ ಅವರ ಪತಿ ವಿಕಾಸ್ ಒಬೆರಾಯ್ ಅವರ ಆಸ್ತಿಯ ಬಗ್ಗೆ ಮಾತನಾಡುತ್ತಾ, ವರದಿಗಳ ಪ್ರಕಾರ ಅವರು 28000 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.