ನೀತಾ ಅಂಬಾನಿಯಿಂದ ಹಿಡಿದು ಬಾಲಿವುಡ್‌ ಸೆಲೆಬ್ರಿಟಿಗಳವರೆಗೆ ಎಲ್ಲರೂ ಇಷ್ಟಪಡೋ ಈ ಓರಿ ಯಾರು..?

First Published | Nov 3, 2023, 12:02 PM IST

ಬಾಲಿವುಡ್‌ ಮಂದಿಯ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಈ ಓರಿ ಇದ್ದೇ ಇರ್ತಾರೆ. ಬಾಲಿವುಡ್‌ನ ಬಹುತೇಕ ವಿಶೇಷವಾಗಿ ಹೆಣ್ಣು ಮಕ್ಕಳ ಜೊತೆ ಸದಾ ಫೋಟೋಗೆ ಫೋಸ್ ಕೊಡುವ ಓರಿ ಬಗ್ಗೆ ಬಾಲಿವುಡ್‌ನ ಹೆಂಗೆಳೆಯರಿಗೂ ಅಷ್ಟೇ ಪ್ರೀತಿ ಇದೆ. ಹಾಗಿದ್ರೆ ಸೆಲೆಬ್ರಿಟಿಗಳೆಲ್ಲಾ ಇಷ್ಟ ಪಡೋ ಈ ಓರಿ ಯಾರು ಇಲ್ಲಿದೆ ಡಿಟೇಲ್ಸ್‌....

ನೀತಾ ಅಂಬಾನಿ ಜೊತೆ ಓರಿ

ಬಾಲಿವುಡ್‌ನ ಬಹುತೇಕ ವಿಶೇಷವಾಗಿ ಹೆಣ್ಣು ಮಕ್ಕಳ ಜೊತೆ ಸದಾ ಫೋಟೋಗೆ ಫೋಸ್ ಕೊಡುವ ಈ ಓರಿ ಬಗ್ಗೆ ಬಾಲಿವುಡ್‌ನ ಹೆಂಗೆಳೆಯರಿಗೂ ಅಷ್ಟೇ ಪ್ರೀತಿ ಇದೆ. 

ನೀತಾ ಅಂಬಾನಿ ಜೊತೆ ಓರಿ

ಬಾಲಿವುಡ್‌ ಮಂದಿಯ ಯಾವುದೇ ಕಾರ್ಯಕ್ರಮಗಳಿರಲಿ ಅಲ್ಲಿ ಈ ಓರಿ ಇದ್ದೇ ಇರ್ತಾರೆ. ಹಾಗಿದ್ರೆ ಸೆಲೆಬ್ರಿಟಿಗಳೆಲ್ಲಾ ಇಷ್ಟ ಪಡೋ ಈ ಓರಿ ಯಾರು ಇಲ್ಲಿದೆ ಡಿಟೇಲ್ಸ್‌....

Tap to resize

ಇಶಾ ಅಂಬಾನಿ ಜೊತೆ ಓರಿ

ಜಾನ್ವಿ ಕಪೂರ್‌ನಿಂದ ಹಿಡಿದು ಕರೀನಾ, ದೀಪಿಕಾ ಪಡುಕೋಣೆವರೆಗೆ ಬಾಲಿವುಡ್‌ನ ಪ್ರಮುಖ ಸೆಲೆಬ್ರಿಟಿಗಳ ಜೊತೆ ಈ ಓರಿ ಅಲಿಯಾಸ್ ಒರ್ಹನ್ ಅವತ್ರಮಣಿ ಪೋಸ್‌ ನೀಡ್ತಿರ್ತಾರೆ. 

ಜಾನ್ವಿ ಜೊತೆ ಓರಿ

ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಯಾವುದೇ ಮುಜುಗರವಿಲ್ಲದೇ ಈತನನ್ನು ಬಿಗಿದಪ್ಪಿಕೊಂಡು ಸಖತ್ ಆಗಿ ಪೋಸ್ ನೀಡ್ತಾರೆ. ಸೆಲೆಬ್ರಿಟಿಗಳ ಈತ ಇರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

ದೀಪಿಕಾ ಪಡುಕೋಣೆ ಜೊತೆ ಓರಿ

ಬಾಲಿವುಡ್ ಸೆಲೆಬ್ರಿಟಿಗಳು ಕೂಡ ಯಾವುದೇ ಮುಜುಗರವಿಲ್ಲದೇ ಈತನನ್ನು ಬಿಗಿದಪ್ಪಿಕೊಂಡು ಸಖತ್ ಆಗಿ ಪೋಸ್ ನೀಡ್ತಾರೆ. ಸೆಲೆಬ್ರಿಟಿಗಳ ಈತ ಇರುವ ಹಲವು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿವೆ. 

Orry, Orhan Awatraman

ಆದರೆ ಓರಿ ಬಗ್ಗೆ ಇಂಟರ್‌ನೆಟ್‌ನಲ್ಲಿ ಹೆಚ್ಚೇನು ಇಲ್ಲ... ಹೀಗಾಗಿ ಕೆಲವೇ ಕೆಲವರಿಗೆ ಮಾತ್ರ ಈ ಓರಿ ಯಾರು ಎಂಬುದು ಗೊತ್ತಿದೆ. ಈತನೋರ್ವ ಸಾಮಾಜಿಕ ಹೋರಾಟಗಾರ ಹಾಗೂ ಶ್ರೀಮಂತ ಮನೆತನದ ಹಿನ್ನೆಲೆಯಿಂದ ಬಂದವ. 

Orry, Orhan Awatraman

ಈತನಿಗೆ ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್‌ನ ಅನೇಕ ಸೆಲೆಬ್ರಿಟಿಗಳ ಜೊತೆಗೂ ಉತ್ತಮ ಬಾಂಧವ್ಯವಿದೆ. ಅನ್ನಾ ಹಾತವೇ, ಕಿಮ್ ಕರ್ದಾಶಿಯನ್ ಕುಟುಂಬ ಮುಂತಾದವರ ಜೊತೆ ಈತನಿಗೆ ಒಳ್ಳೆಯ ಒಡನಾಟವಿದೆ. 

ತಮನ್ನಾ ಜೊತೆ ಓರಿ

ಒರಿ ಅಲಿಯಾಸ್ ಒರ್ಹಾನ್ ಜನಿಸಿದ್ದು, 1992ರ ಆಗಸ್ಟ್ 2 ರಂದು, ಶ್ರೀಮಂತ ಮನೆತನದಿಂದ ಬಂದ ಈ ಹುಡುಗ ಕಲಿತಿದ್ದೆಲ್ಲಾ ನ್ಯೂಯಾರ್ಕ್‌ನ ಕೊಲಂಬಿಯಾ ವಿವಿಯಲ್ಲಿ. ಸೈಫ್ ಅಲಿಖಾನ್ ಪುತ್ರಿ ಸಾರಾ ಅಲಿಖಾನ್ ಈತನ ಕ್ಲಾಸ್‌ಮೇಟ್. 

ಶುಭಮನ್‌ ಗಿಲ್ ಜೊತೆ ಓರಿ

ಇನ್ನು ಈ ಓರಿಯ ಸಹೋದರ ಕೂಡ  ನ್ಯೂಯಾರ್ಕ್‌ನಲ್ಲಿ ಉನ್ನತ ಹುದ್ದೆಯಲ್ಲಿದ್ದು ಸೊಲ್ಲೀಸ್‌ ಹೆಲ್ತ್‌ನಲ್ಲಿ ಸಾರ್ವಜನಿಕ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದಾರೆ. 

ಕರೀನ ಕರೀಷ್ಮಾ ಜೊತೆ ಓರಿ

ಇಂತಹ ಓರಿಗೆ ಇನ್ಸ್ಟಾಗ್ರಾಮ್‌ನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳಿದ್ದಾರೆ. ಈತ ಬರೀ ಫ್ಯಾಷನ್ ಇನ್‌ಫ್ಲುಯೆನ್ಸರ್ ಮಾತ್ರವಲ್ಲದೇ ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ನ ವಿಶೇಷ ಪ್ರಾಜೆಕ್ಟ್ ಮ್ಯಾನೇಜರ್ ಆಗಿ ಕೆಲಸ ಮಾಡ್ತಾನೆ. 

ಸಾರಾ ಅಲಿಖಾನ್ ಜೊತೆ ಓರಿ

ಬಾಲಿವುಡ್‌ನ ಝೆಡ್‌ ಜನರೇಷನ್‌ ಹಾಗೂ ಸ್ಟಾರ್‌ ಕಿಡ್‌ಗಳಾಗಿರುವ ಜಾನ್ವಿ ಕಪೂರ್, ಸಾರಾ ಅಲಿ ಖಾನ್, ಭೂಮಿ ಪಡ್ನೇಕರ್, ಇಬ್ರಾಹಿಂ ಖಾನ್‌ ಮುಂತಾದವರ ಜೊತೆ ಆಗಾಗ ಪಾರ್ಟಿಗಳಲ್ಲಿ ಭಾಗವಹಿಸುತ್ತಾ ಫೋಟೋಗಳಿಗೆ ಫೋಸ್‌ ನೀಡ್ತಿರುವ ಓರಿ ಇದೇ ಕಾರಣದಿಂದ ಜನಪ್ರಿಯತೆ ಗಳಿಸಿದ್ದಾರೆ.

ಸ್ನೇಹಿತರೊಂದಿಗೆ ಓರಿ

ಬಾಲಿವುಡ್‌ನಲ್ಲಿರುವ ನಾನು ಜೊತೆಗೆ ತಿರುಗಾಡುವ ಕೆಲವರು ನನ್ನ ಕ್ಲಾಸ್‌ಮೇಟ್‌ಗಳು ಎಂದು ಸಂದರ್ಶನವೊಂದರಲ್ಲಿ ಓರಿ ಹೇಳಿಕೊಂಡಿದ್ದರು. 

ಸ್ನೇಹಿತರೊಂದಿಗೆ ಓರಿ

ಬಾಲಿವುಡ್ ಕಿಡ್‌ಗಳಾದ ಸಾರಾ ಅಲಿಖಾನ್, ಇಬ್ರಾಹಿಂ ಖಾನ್, ನ್ಯಾಸ ದೇವಗನ್, ಜಾನ್ವಿ ಕಪೂರ್ ಸೇರಿದಂತೆ ಅನೇಕರ ಜೊತೆ ಆಗಾಗ ವಿದೇಶಗಳಲ್ಲೂ ಸುತ್ತಾಡ್ತಿರ್ತಾರೆ ಈ ಓರಿ

ಸ್ನೇಹಿತರೊಂದಿಗೆ ಓರಿ

ಬಾಲಿವುಡ್‌ನ ಎಲ್ಲರರೊಂದಿಗೆ ನನಗೆ ಸ್ನೇಹವಿಲ್ಲ, ನಾನು ಜೊತೆಗೆ ತಿರುಗಾಡುವವರು ನನ್ನ ಒಳ್ಳೆಯ ಗೆಳೆಯರು ಎಂದು ಹೇಳಿಕೊಳ್ತಾರೆ ಓರಿ

ಇಶಾ ಅಂಬಾನಿ ಜೊತೆ ಓರಿ

ಓರಿ ಸೆಲೆಬ್ರಿಟಿಗಳ ಜೊತೆ ಫೋಸ್ ನೀಡಿದಾಗಲೆಲ್ಲಾ, ಪಪರಾಜಿಗಳು ಅದನ್ನು ಪೋಸ್ಟ್ ಮಾಡುತ್ತಾರೆ. ಹೀಗಾಗಿ ಸೆಲೆಬ್ರಿಟಿಗಳ ಜೊತೆ ಫೋಸ್ ನೀಡುವ ಇವ ಯಾರು ಯಾರು ಎಂದು ನೂರಾರು ಜನ ಈ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಲೇ ಇರುತ್ತಾರೆ. 

Latest Videos

click me!