ಶಾರುಖ್ ಖಾನ್ ಪುತ್ರನ ಜೊತೆ ಡೇಟಿಂಗ್ ರೂಮರ್ಸ್‌ : ಯಾರು ಲಾರಿಸ್ಸಾ ಬೋನೆಸಿ ?

First Published | Jan 1, 2025, 7:43 PM IST

ಬಾಲಿವುಡ್ ನಟ ಶಾರುಖ್ ಖಾನ್ ಹಿರಿಯ ಪುತ್ರ ಆರ್ಯನ್ ಖಾನ್, ತಮ್ಮ ಗೆಳತಿ ಎನ್ನಲಾದ ಲಾರಿಸ್ಸಾ ಬೋನೆಸಿ ಜೊತೆ ಮುಂಬೈನಲ್ಲಿ ಹೊಸ ವರ್ಷ ಆಚರಿಸಿದ್ದಾರೆ. ಪಾರ್ಟಿಯಲ್ಲಿ ಇಬ್ಬರೂ ಇರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೊಸ ಗಾಸಿಪ್ ಸೃಷ್ಟಿಸಿದೆ. 

2025ರ ಹೊಸ ವರ್ಷದ ಆರಂಭವನ್ನು ಬಾಲಿವುಡ್ ಸೆಲೆಬ್ರಿಟಿಗಳು ಅದ್ದೂರಿಯಾಗಿ ಆಚರಿಸಿದ್ದಾರೆ. ಶಾರುಖ್ ಖಾನ್ ಅವರ ಹಿರಿಯ ಮಗ ಆರ್ಯನ್ ಖಾನ್, ತಮ್ಮ ಗೆಳತಿ ಎನ್ನಲಾದ ಲಾರಿಸ್ಸಾ ಬೋನೆಸಿ ಜೊತೆ ಬ್ರ್ಯಾಂಡ್ ಪಾರ್ಟಿಗೆ ಬಂದಿದ್ದರು.

ಇಬ್ಬರೂ ತಮ್ಮ ಗೆಳೆಯರೊಂದಿಗೆ ಬಂದಿದ್ದರು ಮತ್ತು ಕಾರ್ಯಕ್ರಮಕ್ಕೆ ಹೋಗುವ ಮೊದಲು ಮಾಧ್ಯಮದವರ ಕ್ಯಾಮರಾಗೆ ಪೋಸ್ ನೀಡದೇ ಎಸ್ಕೇಪ್ ಆಗಿದ್ದಾರೆ ಹೀಗಾಗಿ ಆರ್ಯನ್ ಖಾನ್ ಜೊತೆಗಿದ್ದಾಕೆ ಯಾರು ಎಂಬ ಕುತೂಹಲ ಸಹಜವಾಗಿ ಕಾಡಿದೆ. ಈ ಸಂದರ್ಭದಲ್ಲಿ ಆರ್ಯನ್ ಕ್ಯಾಶುಯಲ್ ಆದರೂ ಸ್ಟೈಲಿಶ್ ಆಗಿ ಬಂದಿದ್ದರೆ. ಲಾರಿಸ್ಸಾ ಬೋನೆಸಿ ಗುಲಾಬಿ ಬಣ್ಣದ ಡ್ರೆಸ್‌ನಲ್ಲಿ ಮಿಂಚಿದ್ದರು.(ವಿಡಿಯೋ)

Tap to resize

ಪಾರ್ಟಿ ಒಳಗೆ ಹೋಗುವ ಮುನ್ನ ಈ ಜೋಡಿ ಪಾರ್ಟಿ ಸ್ಥಳಕ್ಕೆ ಆಗಮಿಸುವಾಗ ಪಾಪರಾಜಿ ಕ್ಯಾಮರಾದಲ್ಲಿ ಸೆರೆಯಾಗಿದ್ದಾರೆ.. ಬೋನೆಸಿ ತನ್ನ ಗೆಳೆಯರ ಗುಂಪಿನೊಂದಿಗೆ ಬಂದಿದ್ದು ಛಾಯಾಗ್ರಾಹಕರಿಗೆ ಪೋಸ್ ನೀಡಲು ನಿರಾಕರಿಸಿದರು, ಆದರೆ ಆರ್ಯನ್‌ ಖಾನ್ ಅವರನ್ನು ಅವರ ಭದ್ರತಾ ಸಿಬ್ಬಂದಿ ಕರೆದೊಯ್ದರು. ಎಂಸಿ ಸ್ಟಾನ್, ಅದಾ ಮಲಿಕ್ ಮತ್ತು ರೋಹಿಣಿ ಅಯ್ಯರ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಈ ಮಧ್ಯೆ, ಕೆಲಸದ ಬಗ್ಗೆ ಹೇಳುವುದಾದರೆ, ಶಾರುಖ್‌ ತಮ್ಮ ಮಗ ಆರ್ಯನ್ ಅವರ ನಿರ್ದೇಶನದ ಚೊಚ್ಚಲ ಸೀರಿಸನ್ನು ಅಧಿಕೃತವಾಗಿ ಬಹಿರಂಗಪಡಿಸಿದ್ದಾರೆ, ಇದು ನೆಟ್‌ಫ್ಲಿಕ್ಸ್‌ನಲ್ಲಿ ಪ್ರಥಮವಾಗಿ ಪ್ರದರ್ಶನಗೊಳ್ಳಲಿದೆ. ಗೌರಿ ಖಾನ್ ಈ ಹೆಸರಿಡದ ಬಾಲಿವುಡ್ ಸರಣಿಯನ್ನು ನಿರ್ಮಿಸಿದ್ದಾರೆ. 

ಲಾರಿಸ್ಸಾ ಬೋನೆಸಿ ಯಾರು?

ಬಾಲಿವುಡ್ ಹಿರಿಯ ನಟ ಶಾರುಖ್ ಖಾನ್ ಪುತ್ರನ ಜೊತೆ ಸುತ್ತಿದ ಕಾರಣಕ್ಕೆ ಲಾರಿಸ್ಸಾ ಬೋನೆಸಿ ಯಾರು ಎಂಬ ಕುತೂಹಲ ಅನೇಕರನ್ನು ಕಾಡಿದೆ. ಅಂದಹಾಗೆ ಲಾರಿಸ್ಸಾ ಮೂಲತಃ ಬ್ರೆಜಿಲ್‌ ಯುವತಿ. ಲಾರಿಸ್ಸಾ ಮಾರ್ಚ್28, 1990 ರಂದು ಬ್ರೆಜಿಲ್‌ನಲ್ಲಿ ಜನಿಸಿದರು ಮತ್ತು ಭಾರತೀಯ ಮನರಂಜನಾ ಉದ್ಯಮಕ್ಕೆ ಅವರೇನು ಹೊಸಬರಲ್ಲ. ಅವರು ಗುರು ರಾಂಧವ ಅವರ 'ಸೂರ್ಮಾ ಸೂರ್ಮಾ' ಸೇರಿದಂತೆ ಹಲವು ಮ್ಯೂಸಿಕ್ ವೀಡಿಯೊಗಳಲ್ಲಿ ಮತ್ತು 'ಪೆಂಟ್‌ಹೌಸ್' ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಆರ್ಯನ್ ಮತ್ತು ಲಾರಿಸ್ಸಾ ನಡುವಿನ ವಯಸ್ಸಿನ ವ್ಯತ್ಯಾಸವನ್ನು ಕೆಲವು ರೆಡ್ಡಿಟ್ ಬಳಕೆದಾರರು ಗಮನಿಸಿದ್ದು, ಆಕೆ ಆರ್ಯನ್‌ಗಿಂದ ಏಳು ವರ್ಷ ದೊಡ್ಡವಳು. ಎಂದು ಹೇಳಿದ್ದಾರೆ. ಆದರೂ ಆರ್ಯನ್ ಖಾನ್ ಅಥವಾ ಲಾರಿಸ್ಸಾ ಬೋನೆಸಿ ಇಬ್ಬರೂ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವದಂತಿಗಳಿಗೆ ಪ್ರತಿಕ್ರಿಯಿಸಿಲ್ಲ.

Latest Videos

click me!