Border 2 ಚಿತ್ರದ ಮೂಲಕ ಸಿನಿರಸಿಕರ ಮನ ಗೆದ್ದ Medha Rana ಯಾರು? ಬೆಂಗಳೂರಿನ ಜೊತೆ ಇದೆ ನಂಟು!

Published : Jan 24, 2026, 11:17 AM IST

Medha Rana: 'ಬಾರ್ಡರ್ 2' ಚಿತ್ರದಲ್ಲಿ ವರುಣ್ ಧವನ್ ಗೆ ನಾಯಕಿಯಾದ ಆ ಬೆಡಗಿ ಯಾರು ಎಂದು ತಿಳಿದುಕೊಳ್ಳಲು ಕುತೂಹಲವಿದೆಯೇ? ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಈಗಾಗಲೇ ತಮ್ಮ ಸೌಂದರ್ಯದಿಂದ ಗೆದ್ದಿರುವ ಮೇಧಾ ರಾಣಾ ಯಾರು ನೋಡೋಣ.

PREV
16
ಮೇಧಾ ರಾಣ

"ಬಾರ್ಡರ್ 2" ಚಿತ್ರದ ಮೂಲಕ ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ನಟಿ ಮೇಧಾ ರಾಣ, ಈಗಾಗಲೇ ತಮ್ಮ ಸೌಂದರ್ಯ ಮತ್ತು ಪಾತ್ರದ ಮೂಲಕ ಸುದ್ದಿ ಮಾಡಿದ್ದಾರೆ. 26 ವರ್ಷ ವಯಸ್ಸಿನ ಮೇಧಾ ಬಾಲಿವುಡ್ ಗೆ ಎಂಟ್ರಿ ಕೊಡುವ ಮೂಲಕ ಭರವಸೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.

26
ಮೇಧಾ ರಾಣಾ ಸಿನಿಮಾ ಹಿನ್ನೆಲೆಯಿಂದ ಬಂದವರಲ್ಲ

ಡಿಸೆಂಬರ್ 25, 1999 ರಂದು ಜನಿಸಿದ ಮೇಧಾ ಸಾರ್ವಜನಿಕ ವಲಯದೊಂದಿಗೆ ಆಳವಾದ ಸಂಬಂಧ ಹೊಂದಿರುವ ಕುಟುಂಬದಲ್ಲಿ ಬೆಳೆದರು. ಅವರ ತಂದೆ ಸುನಿಲ್ ರಾಣಾ ಸರ್ಕಾರಿ ಉದ್ಯೋಗಿ. ಅವರ ತಾಯಿ ರಿತು ರಾಣಾ ಸ್ಕಿಲ್ಸ್ ಅಕಾಡೆಮಿಯ ಸಹ-ಸಂಸ್ಥಾಪಕಿ ಮತ್ತು ಅವರಿಗೆ ಪ್ರಿಯಾಂಕಾ ರಾಣಾ ಎಂಬ ಸಹೋದರಿ ಕೂಡ ಇದ್ದಾರೆ.

36
ನಟನೆಗೆ ಎಂಟ್ರಿ ಕೊಟ್ಟದ್ದು ಹೇಗೆ?

ಮೇಧಾ ಚಂಡೀಗಢದ ಕಾರ್ಮೆಲ್ ಕಾನ್ವೆಂಟ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು, ನಂತರ ಬೆಂಗಳೂರಿನ ಆರ್ಮಿ ಪಬ್ಲಿಕ್ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ಬಳಿಕ ಬೆಂಗಳೂರಿನ ಕ್ರೈಸ್ಟ್ ವಿಶ್ವವಿದ್ಯಾಲಯದಿಂದ ಬ್ಯುಸಿನೆಸ್ ಅಡ್ಮಿನಿಸ್ಟ್ರೇಟಿವ್ ಪದವಿ ಪಡೆದರು. ನಂತರ ಅವರು ನಟನೆ ಮತ್ತು ಮಾಡೆಲಿಂಗ್ ಜಗತ್ತಿಗೆ ಪ್ರವೇಶಿಸಿದರು.

46
ಮಿಲಿಟರಿ ಕುಟುಂಬಕ್ಕೆ ಸೇರಿದ ಮೇಧಾ

ಮೇಧಾ ಸೇವೆಯ ಪರಂಪರೆಯನ್ನು ಹೊಂದಿರುವ ಕುಟುಂಬದಿಂದ ಬಂದವರು, ಇವರ ಮೂರು ತಲೆಮಾರುಗಳ ಪುರುಷರು ಸಶಸ್ತ್ರ ಪಡೆಗಳಲ್ಲಿ ಧೈರ್ಯ ಮತ್ತು ಹೆಮ್ಮೆಯಿಂದ ಸೇವೆ ಸಲ್ಲಿಸಿದ್ದಾರೆ ಮತ್ತು ಮಹಿಳೆಯರು ತಮ್ಮ ಕುಟುಂಬಗಳನ್ನು ಪ್ರೀತಿ ಮತ್ತು ಧೈರ್ಯದಿಂದ ಬೆಂಬಲಿಸಿದ್ದಾರೆ. ಇವರ ಕುಟುಂಬದ ಹೆಚ್ಚಿನ ಸದಸ್ಯರು ರಾಷ್ಟ್ರಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

56
OTT ಗೆ ಎಂಟ್ರಿ ಕೊಟ್ಟಿದ್ದ ಮೇಧಾ

‘ಬಾರ್ಡರ್ 2’ ನಟಿ 2022 ರಲ್ಲಿ ಅರ್ಜುನ್ ರಾಂಪಾಲ್ ಜೊತೆಗೆ ‘ಲಂಡನ್ ಫೈಲ್ಸ್’ ಎಂಬ ವೆಬ್ ಸೀರೀಸ್ ಮೂಲಕ ನಟನೆಗೆ ಡೆಬ್ಯೂ ಮಾಡಿದ್ದರು. ನಂತರ ಅವರು ನೆಟ್‌ಫ್ಲಿಕ್ಸ್ ಸೀರೀಸ್ ‘ಫ್ರೈಡೇ ನೈಟ್ ಪ್ಲಾನ್ಸ್‌’ನಲ್ಲಿ ಬಾಬುಲ್ ಖಾನ್ ಜೊತೆಗೆ ನಟಿಸಿದರು.

66
ಬಾರ್ಡರ್ 2 ಚಿತ್ರ

ಬಾರ್ಡರ್ 2 ಚಿತ್ರವನ್ನು ಅನುರಾಗ್ ಸಿಂಗ್ ನಿರ್ದೇಶಿಸಿದ್ದಾರೆ ಮತ್ತು ಇದು 1971 ರ ಇಂಡೋ-ಪಾಕಿಸ್ತಾನ ಯುದ್ಧದ ಘಟನೆಗಳಿಂದ ಪ್ರೇರಿತವಾಗಿದೆ. ಈ ಚಿತ್ರದಲ್ಲಿ ಸನ್ನಿ ಡಿಯೋಲ್, ವರುಣ್ ಧವನ್, ದಿಲ್ಜಿತ್ ದೋಸಾಂಜ್, ಮೋನಾ ಸಿಂಗ್, ಸೋನಮ್ ಬಜ್ವಾ ಮತ್ತು ಅಹಾನ್ ಶೆಟ್ಟಿ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories