ಪ್ರಗತಿ-ರಿಷಬ್ ಶೆಟ್ಟಿ ಪ್ರೀತಿಗೆ ದಶಕದ ಸಂಭ್ರಮ…. ಬಿಂಬಕ್ಕೆ ಪ್ರತಿಬಿಂಬವಾದ ಪತ್ನಿಗೆ ಶೆಟ್ರ ಸ್ಪೆಷಲ್ ವಿಶ್

Published : Jan 23, 2026, 04:59 PM IST

Pragathi and Rishab Shetty: ಸ್ಯಾಂಡಲ್’ವುಡ್ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ಪ್ರೀತಿಗೆ ಹತ್ತು ವರ್ಷಗಳು ತುಂಬಿದ್ದು, ಈ ಸಂಭ್ರಮದಲ್ಲಿ ರಿಷಭ್ ತನ್ನ ಮನದೊಡತಿಗೆ ವಿಶೇಷ ವಿಡಿಯೋ ಮೂಲಕ ದಶಕದ ಸಂಭ್ರಮ ಶುಭಾಶಯ ತಿಳಿಸಿದ್ದಾರೆ. 

PREV
16
ಪ್ರಗತಿ-ರಿಷಬ್ ಶೆಟ್ಟಿ

ಕಾಂತಾರ ಸಿನಿಮಾ ಮೂಲಕ ದೇಶ, ಪ್ರಪಂಚದೆಲ್ಲೆದೆ ಜನಪ್ರಿಯತೆ ಪಡಿದಿರುವ ನಟ, ನಿರ್ದೇಶಕ ರಿಷಬ್ ಶೆಟ್ಟಿ, ಇದೀಗ ಕೊನೆ ಕಾಣದ ಸೇತುವೆಯಂತೆ ನೋವಿನಲ್ಲೂ, ನಲಿವಿನಲ್ಲೂ ಬೆನ್ನೆಲುಬಾಗಿ ನಿಂತಿರುವ ಪ್ರೀತಿಯ ಪತ್ನಿ ಪ್ರಗತಿ ಶೆಟ್ಟಿಗೆ ವಿಶೇಷ ವಿಡಿಯೋ ಮೂಲಕ ಹತ್ತು ವರ್ಷದ ಪ್ರೀತಿಯ ಶುಭಾಶಯಗಳನ್ನು ತಿಳಿಸಿದ್ದಾರೆ.

26
ಪ್ರೀತಿಗೆ ದಶಕದ ಸಂಭ್ರಮ

ಸೋಶಿಯಲ್ ಮೀಡಿಯಾದಲ್ಲಿ ರಿಷಬ್, ಪತ್ನಿ ಪ್ರಗತಿ ಶೆಟ್ಟಿ ಜೊತೆಗಿನ ಹಳೆಯ ಮಧುರ ಕ್ಷಣಗಳ ಫೋಟೊಗಳನ್ನು ವಿಡಿಯೋ ಮಾಡಿ ಹಂಚಿಕೊಂಡಿದ್ದು, ಪ್ರಗತಿ ಬರುವ ಮೊದಲು, ಒಂದು ರೀತಿ, ಪ್ರಗತಿ ನನ್ನ ಜೀವನಕ್ಕೆ ಎಂಟ್ರಿ ಕೊಟ್ಟ ಮೇಲೆ ಇನ್ನೊಂದು ರೀತಿ ಎಂದು ಹೇಳುತ್ತಾ ಮುದ್ದಾ ವಿಡಿಯೋ ಮಾಡಿ, ಪತ್ನಿಗೆ ಪ್ರೀತಿಯಿಂದ ಶುಭಾಶಯ ತಿಳಿಸಿದ್ದಾರೆ.

36
ರಿಷಬ್ ಶೆಟ್ಟಿ ಸಾಲುಗಳು ಹೀಗಿವೆ

ಪ್ರೀತಿಗೆ ಪ್ರೀತಿಯಾಗಿ

ನಗುವಿಗೆ ನಗುವಾಗಿ

ಬಿಂಬಕ್ಕೆ ಪ್ರತಿಬಿಂಬವಾಗಿ

ಕೊನೆ ಕಾಣದ ಸೇತುವೆಯಂತೆ ಸದಾ ನನಗಾಗಿ ನಿಂತ ಪ್ರೀತಿಗೆ ದಶಕದ ಸಂವತ್ಸರ…

A decade of love. Countless smiles. Endless support. Always together. From laughter to dreams, life with you is a gift. ಎಂದು ರಿಷಬ್ ಬರೆದುಕೊಂಡಿದ್ದಾರೆ.

46
ಶೆಟ್ರ ಲವ್ ಸ್ಟೋರಿ ಸೂಪರ್ ಆಗಿದೆ

ಪ್ರಗತಿ ಶೆಟ್ಟಿ ಮೊದಲ ಬಾರಿ ರಿಷಬ್ ಅವರನ್ನು ಭೇಟಿಯಾದಾಗ ಅವರ ಹೆಸರು ಏನು? ಅವರು ಯಾರು ಅಂತಾನೇ ಗೊತ್ತಿರಲಿಲ್ಲವಂತೆ. 'ಉಳಿದವರು ಕಂಡಂತೆ' ಸಿನಿಮಾ ಬಳಿಕ, ಪ್ರಗತಿ ರಕ್ಷಿತ್ ಶೆಟ್ಟಿ ಅಭಿಮಾನಿಯಾಗಿದ್ದರು, ಹಾಗಾಗಿ ಸ್ನೇಹಿತರ ಜೊತೆ ರಿಕ್ಕಿ ಸಿನಿಮಾ ನೋಡೋದಕ್ಕೆ ಹೋಗಿದ್ದರಂತೆ. ಆ ಸಂದರ್ಭದಲ್ಲಿ ಥಿಯೇಟರ್ ಗೆ ಚಿತ್ರತಂಡ ವಿಸಿಟ್ ಮಾಡಿತ್ತು. ಅಲ್ಲಿ ಪ್ರಗತಿಗೆ ರಿಷಬ್ ರಿಕ್ಕಿ ಸಿನಿಮಾದ ನಿರ್ದೇಶಕರು ಅನ್ನೋದು ಗೊತ್ತಾಗಿದೆ. ಎಲ್ಲರೂ ಸೆಲ್ಫಿ ತೆಗೆಯುವಂತೆ ತಾವು ಹೋಗಿ ಫೋಟೊ ತೆಗೆಸಿಕೊಂಡಿದ್ದರು.

56
ಪರಿಚಯ, ಪ್ರೀತಿ ಒಂದೇ ವರ್ಷದಲ್ಲಿ ಮದುವೆ

ಈ ಸಂದರ್ಭದಲ್ಲಿ ರಿಷಬ್ ಶೆಟ್ಟಿ ಕೂಡ ಕುಂದಾಪುರದವರು ಅನ್ನೋದು ಗೊತ್ತಾಗಿ, ಕರಾವಳಿ ಜನ ಸಿನಿಮಾದಲ್ಲಿ ಇರೋದು ಖುಷಿ ಕೊಟ್ಟಿದೆ ಎಂದು ರಿಷಬ್’ಗೆ ಪ್ರಗತಿ ಹೇಳಿದ್ದರಂತೆ. ರಿಷಬ್ ಶೆಟ್ಟಿ ಥ್ಯಾಂಕ್ಸ್ ಹೇಳಿ ಹೊರಟಿದ್ದಾರೆ. ಬಳಿಕ ಫೇಸ್‌ಬುಕ್‌ನಲ್ಲಿ ಪ್ರಗತಿಯವರನ್ನು ಹುಡುಕಿ ಶೆಟ್ಟಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು ರಿಷಬ್. ಬಳಿಕ ಆ ಪರಿಚಯ ಪ್ರೀತಿಗೆ ತಿರುಗಿತ್ತು. ಇದಾದ ನಂತರ ಒಂದೇ ವರ್ಷದಲ್ಲಿ ಪ್ರಪೋಸ್ ಮಾಡಿ, ಮನೆಯವರನ್ನು ಒಪ್ಪಿಸಿ ಆ ವರ್ಷವೇ ಮದುವೆ ಆಗಿದ್ದರು ಈ ಜೋಡಿ.

66
ಇಬ್ಬರು ಮುದ್ದಿನ ಮಕ್ಕಳ ಪೋಷಕರು

ಇದೀಗ ತಮ್ಮ ಹತ್ತನೇ ವರ್ಷದ ಪ್ರೀತಿಯನ್ನು ಸೆಲೆಬ್ರೇಟ್ ಮಾಡುತ್ತಿರುವ ಈ ಜೋಡಿ, ಮೇಡ್ ಫಾರ್ ಈಚ್ ಅದರ್ ಅಂತ ಹೇಳಬಹುದು. ಪತಿಗೆ ಸದಾ ಬೆನ್ನೆಲುವಾಗಿ ನಿಲ್ಲುವ ಪ್ರಗತಿ ರಿಷಭ್ ಶೆಟ್ಟಿ ಸಿನಿಮಾಗಳಲ್ಲಿ ಪ್ರಗತಿ ಕಾಸ್ಟ್ಯೂಮ್ ಡಿಸೈನರ್ ಆಗಿ ಸದಾ ಜೊತೆಯಲ್ಲಿಯೇ ಇರುತ್ತಾರೆ. ಈ ಜೋಡಿಗೆ ರಣ್ವಿತ್ ಮತ್ತು ರಾದ್ಯಾ ಎನ್ನುವ ಇಬ್ಬರು ಪುಟಾಣಿ ಮಕ್ಕಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories