ಬರೋಬ್ಬರಿ 700 ಕೋಟಿ ಗಳಿಸಿದ ಜವಾನ್‌; ಅತಿ ಹೆಚ್ಚು ಪಡೆದಿದ್ದು ಶಾರೂಕ್‌, ನಯನತಾರಾ, ವಿಜಯ್ ಸೇತುಪತಿ ಅಲ್ಲ!

Published : Sep 20, 2023, 02:56 PM IST

ಜವಾನ್ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಚಿತ್ರವು ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಭರ್ಜರಿ ಗಳಿಕೆಯನ್ನು ಮಾಡ್ತಿದೆ.  ಆದ್ರೆ ಸಿನಿಮಾದಿಂದ ಅತಿ ಹೆಚ್ಚು ಹಣ ಗಳಿಸಿದ್ದು ಯಾರು ನಿಮ್ಗೊತ್ತಾ?

PREV
17
ಬರೋಬ್ಬರಿ 700 ಕೋಟಿ ಗಳಿಸಿದ ಜವಾನ್‌; ಅತಿ ಹೆಚ್ಚು ಪಡೆದಿದ್ದು ಶಾರೂಕ್‌, ನಯನತಾರಾ, ವಿಜಯ್ ಸೇತುಪತಿ ಅಲ್ಲ!

ಶಾರೂಕ್‌ ಖಾನ್, ನಯನತಾರಾ ಮತ್ತು ವಿಜಯ್ ಸೇತುಪತಿ ಅಭಿನಯದ ಆಕ್ಷನ್ ಥ್ರಿಲ್ಲರ್ ಜವಾನ್ ಬಾಕ್ಸ್ ಆಫೀಸ್‌ನ ಎಲ್ಲಾ ದಾಖಲೆಗಳನ್ನು ಹಿಂದಿಕ್ಕಿ ಮುನ್ನುಗ್ಗುತ್ತಿದೆ. ಚಿತ್ರವು ಕೇವಲ ಭಾರತದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಭರ್ಜರಿ ಗಳಿಕೆಯನ್ನು ಮಾಡ್ತಿದೆ. ಇಲ್ಲಿಯವರೆಗೆ ಹಿಂದಿ ಆವೃತ್ತಿಗೆ 434 ಕೋಟಿ ರೂ. ಗಳಿಸಿದೆ. ಈ ಮೂಲಕ ಜವಾನ್ ಚಿತ್ರ, ಕೆಜಿಎಫ್ 2ನ ಹಿಂದಿ ನೆಟ್ ಕಲೆಕ್ಷನ್‌ನ್ನು ಸಹ ಮೀರಿಸಿದೆ. ಈ ಮೂಲಕ ಸದ್ಯ ಹಿಂದಿ ಭಾಷೆಯಲ್ಲಿ ನಾಲ್ಕನೇ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವೆಂದು ಗುರುತಿಸಿಕೊಂಡಿದೆ.

27

ಪಠಾಣ್, ಬಾಹುಬಲಿ 2,  ಗದರ್ 2 ನಂತರ ಕೆಜಿಎಫ್ 2 ಮತ್ತು ಆರ್‌ಆರ್‌ಆರ್ ನಂತರ ಹಿಂದಿ ಭಾಷೆಯಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಭಾರತೀಯ ಚಲನಚಿತ್ರವೆಂಬ ಹೆಗ್ಗಳಿಕೆಗೆ ಜವಾನ್ ಪಾತ್ರವಾಗಿದೆ. ಭಾರತದಲ್ಲಿ ನಾಲ್ಕನೇ ಅತಿ ಹೆಚ್ಚು ಗಳಿಕೆಯ ಭಾರತೀಯ ಚಲನಚಿತ್ರವಾಗಿದೆ. ಜವಾನ್ ಚಿತ್ರವನ್ನು ಅಟ್ಲಿ ನಿರ್ದೇಶಿಸಿದ್ದಾರೆ ಮತ್ತು ಇದು ನಿರ್ದೇಶಕರಾಗಿ ಅವರ ಐದನೇ ಚಿತ್ರವಾಗಿದೆ. 

37

ಶಾರೂಕ್‌ ಖಾನ್ ಮತ್ತು ನಯನತಾರಾ ಅಭಿನಯದ ಜವಾನ್ ಚಿತ್ರವು 75 ಕೋಟಿ ರೂಪಾಯಿಗಳ ದಾಖಲೆಯ ಓಪನಿಂಗ್ ಪಡೆದುಕೊಂಡಿತ್ತು. ಸದ್ಯ ಚಿತ್ರವು ದಿನದಿಂದ ದಿನಕ್ಕೆ ಹೊಸ ದಾಖಲೆಗಳನ್ನು ನಿರ್ಮಿಸುತ್ತಿದೆ. ಚಿತ್ರವು ಮೊದಲ ವಾರದಲ್ಲಿ 388.08 ಕೋಟಿ ಗಳಿಸಿದೆ ಮತ್ತು ಇದುವರೆಗೆ ವಿಶ್ವದಾದ್ಯಂತ 700 ಕೋಟಿ ರೂಪಾಯಿ ಗಳಿಸಿದೆ. ಆದರೆ ಚಿತ್ರದಿಂದ ಅತ್ಯಧಿಕ ಲಾಭ ಗಳಿಸುತ್ತಿರುವವರು ಯಾರು ನಿಮ್ಗೆ ಗೊತ್ತಿದ್ಯಾ?

47

ಜವಾನ್‌ ಚಿತ್ರಕ್ಕಾಗಿ ಶಾರೂಕ್‌ ಖಾನ್‌, ನಾಯಕಿಯಾಗಿ ನಟಿಸಿರುವ ನಯನತಾರಾ, ವಿಲನ್ ಆಗಿ ನಟಿಸಿದ ವಿಜಯ್ ಸೇತುಪತಿ ಹೈಯೆಸ್ಟ್ ಸಂಭಾವನೆ ಪಡೆದಿದ್ದಾರೆ. ಅಷ್ಟೇ ಯಾಕೆ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಸಹ ಬರೋಬ್ಬರಿ 10 ಕೋಟಿ ಸಂಭಾವನೆ ಪಡೆದಿದ್ದಾರೆ ಎಂಬ ಸುದ್ದಿಯಿದೆ. ಆದರೆ ಚಿತ್ರದಿಂದ ಅತ್ಯಧಿಕ ಲಾಭ ಗಳಿಸಿರೋದು ಶಾರೂಕ್‌, ನಯನ್‌, ವಿಜಯ್‌ ಸೇತುಪತಿ, ನಿರ್ದೇಶಕ ಅಟ್ಲಿ ಇವರು ಯಾರೂ ಅಲ್ಲ ಅಂದ್ರೆ ನೀವ್‌ ನಂಬ್ತೀರಾ.

57

ಶಾರೂಕ್ ಖಾನ್, ನಯನತಾರಾ, ವಿಜಯ್ ಸೇತುಪತಿ ಮತ್ತು ಅಟ್ಲಿ ಜವಾನ್ ಚಿತ್ರಕ್ಕಾಗಿ ಶ್ರಮಿಸಿದ್ದಾರೆ. ಈ ಚಿತ್ರದ ಯಶಸ್ಸು ಇದಕ್ಕೆ ಸಾಕ್ಷಿಯಾಗಿದೆ. ನಟರು ಅಟ್ಲಿ ಅವರ ಶ್ರಮಕ್ಕಾಗಿ ಎಲ್ಲರೂ ಹೊಗಳುತ್ತಿದ್ದಾರೆ. ಆದರೆ ಚಿತ್ರದಿಂದ ಹೈಯೆಸ್ಟ್ ಗಳಿಕೆ ಮಾಡಿದವರು ಇವರು ಯಾರೂ ಅಲ್ಲ. ಬದಲಿಗೆ ಪ್ರೊಡ್ಯೂಸರ್ ಗೌರಿ ಖಾನ್‌.

67

ಹೌದು ಜವಾನ್ ಚಿತ್ರದ ಪ್ರೊಡ್ಯೂಸರ್‌, ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್. ಹೀಗಾಗಿ ಚಿತ್ರದ ಎಲ್ಲಾ ಲಾಭವೂ ಅವಳಿಗೆ ಹೋಗುತ್ತಿದೆ ಎಂದು ವರದಿಯೊಂದು ತಿಳಿಸಿದೆ. ಗೌರಿ ಖಾನ್ ಈ ಚಿತ್ರದ ನಿರ್ಮಾಪಕಿ ಮತ್ತು ಅದಕ್ಕಾಗಿಯೇ ಅವರು ಈ ಚಿತ್ರದ ಯಶಸ್ಸಿನಿಂದ ಗರಿಷ್ಠ ಲಾಭವನ್ನು ಪಡೆಯುತ್ತಿದ್ದಾರೆ. 

77

ಜವಾನ್ ಸಿನಿಮಾವನ್ನು 300 ಕೋಟಿ ರೂಪಾಯಿಗಳ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಮತ್ತು ಕೇವಲ 4 ದಿನಗಳಲ್ಲಿ ಅದರ ವೆಚ್ಚವನ್ನು ಮರುಪಡೆಯಲು ಯಶಸ್ವಿಯಾಗಿದೆ. ಶಾರುಖ್ ಖಾನ್, ನಯನತಾರಾ, ವಿಜಯ್ ಸೇತುಪತಿ, ಜವಾನ್ ಜೊತೆಗೆ ದೀಪಿಕಾ ಪಡುಕೋಣೆ, ಪ್ರಿಯಾಮಣಿ, ಸನ್ಯಾ ಮಲ್ಹೋತ್ರಾ, ಪ್ರಿಯಾ ಮಣಿ, ರಿದ್ಧಿ ಡೋಗ್ರಾ, ಸಂಚಿತಾ ಬ್ಯಾನರ್ಜಿ, ಸಂಜಯ್ ದತ್ ಸೇರಿದಂತೆ ಅನೇಕ ದೊಡ್ಡ ಮತ್ತು ಪ್ರತಿಭಾವಂತ ನಟರು ಈ ಬ್ಲಾಕ್‌ಬಸ್ಟರ್ ಚಿತ್ರದಲ್ಲಿ ಅಭಿನಯಿಸಿದ್ದಾರೆ.

Read more Photos on
click me!

Recommended Stories