'ನನಗೆ ನೆನಪಿರುವಂತೆ ಶಾರುಖ್‌ಗೆ ಆಗಿನ್ನೂ ಮುಂಬೈನಲ್ಲಿ ಮನೆ ಇರಲಿಲ್ಲ. ಅವರು ದೆಹಲಿಯಿಂದ ಬಂದಿದ್ದರು. ಅಡುಗೆ ಮಾಡಲೂ ಯಾರೂ ಇರಲಿಲ್ಲ. ಎಲ್ಲಿ ವಾಸಮಾಡುತ್ತಿದ್ದರೋ ಗೊತ್ತಿಲ್ಲ. ಅವರು ಯೂನಿಟ್‌ನ ಆಹಾರವನ್ನೇ ತಿನ್ನುತ್ತಿದ್ದರು, ಯೂನಿಟ್‌ನಲ್ಲಿ ಚಹಾ ಕುಡಿಯುವುದಲ್ಲದೇ ಎಲ್ಲರ ಜೊತೆಯೂ ಸಲುಗೆಯಿಂದ ಬೆರೆಯುತ್ತಿದ್ದರು,' ಎಂದು ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ಜೂಹಿ ಚಾವ್ಲಾ ಹೇಳಿದ್ದಾರೆ.