ಅಪ್ಪ ಆಸ್ಪತ್ರೆಯಲ್ಲಿ, ಈಜುಕೊಳದಲ್ಲಿ ಪತಿ ಜೊತೆ ವಿಹರಿಸಿದ ಸೋನಾಕ್ಷಿ ಸಿನ್ಹಾ

First Published | Jul 2, 2024, 7:01 PM IST

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಪತಿ ಜಹೀರ್ ಇಕ್ಬಾಲ್ ಜೊತೆ ಈಜುಕೊಳದಲ್ಲಿ ವಿಹರಿಸಿದ್ದಾರೆ.

ಜೂನ್ 23ರಂದು ಗೆಳೆಯ ಜಹೀರ್ ಜೊತೆ ಸೋನಾಕ್ಷಿ ಸಿನ್ಹಾ ಮದುವೆ ನಡೆದಿತ್ತು. ಏಳು ವರ್ಷದಿಂದ ಪ್ರೀತಿಯಲ್ಲಿದ್ದ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಮದುವೆ ಬಂಧನದಲ್ಲಿ ಬಂಧಿಯಾಗಿದ್ದಾರೆ. 

ಇದೀಗ ನವಜೋಡಿ ಹೋಟೆಲ್‌ ಟೆರೇಸ್ ಮೇಲ್ಭಾಗದ ಈಜುಕೊಳದಲ್ಲಿ ಈಜಾಡಿದ್ದಾರೆ. ಇದೀಗ ಈಜುಕೊಳದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

Tap to resize

ಒಂದು ಫೋಟೋದಲ್ಲಿ ಸೋನಾಕ್ಷಿ ಸಿನ್ಹಾ ಕೈಯಲ್ಲಿ ಜ್ಯೂಸ್ ಹಿಡಿದುಕೊಂಡು, ಮತ್ತೊಂದು ಕೈಯನ್ನು ಪತಿಯ ಹೆಗಲ ಮೇಲಿರಿಸಿರೋದನ್ನು ಕಾಣಬಹುದು. ಇತ್ತ ಜಹೀರ್ ಫೋಟೋಗೆ ಪೋಸ್ ನೀಡಿದ್ದಾರೆ. ಮಗದೊಂದು ಫೋಟೋ ಜೋಡಿ ಸೂರ್ಯಾಸ್ತದ ಸೊಬಗನ್ನು ಆನಂದಿಸುತ್ತಿದ್ದಾರೆ.

ಸೋನಾಕ್ಷಿ ತಂದೆ ಶತ್ರುಘ್ನ ಸಿನ್ಹಾ ಅನಾರೋಗ್ಯ ಹಿನ್ನೆಲೆ ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಮದುವೆ ಬಳಿಕ ಸೋನಾಕ್ಷಿ ತಂದೆಯ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇನ್ನು ಗಂಡನ ಜೊತೆಗಿನ ಈಜುಕೊಳದಲ್ಲಿಯ ಫೋಟೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು, ತಂದೆ ಆಸ್ಪತ್ರೆಯಲ್ಲಿರುವಾಗ ಇದು ಬೇಕಿತ್ತಾ? ಈ ಸಮಯದಲ್ಲಿ ಫೋಟೋ ರಿವೀಲ್ ಮಾಡುವ ಅವಶ್ಯಕತೆ ಇತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.

ಸೋನಾಕ್ಷಿ ಸಿನ್ಹಾಗೆ ಪಾರ್ಟಿಯೊಂದರಲ್ಲಿ ಸಲ್ಮಾನ್ ಖಾನ್ ಮೂಲಕ ಜಹೀರ್ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಬದಲಾಗಿತ್ತು. ನಂತರ ಸೋನಾಕ್ಷಿ ಹಾಗೂ ಜಹೀರ್ ಜೊತೆಯಾಗಿ ಸಿನಿಮಾದಲ್ಲಿಯೂ ನಟಿಸಿದ್ದಾರೆ.

ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾದ ನಂತರ ಏಳು ವರ್ಷ ಇಬ್ಬರು ಜೊತೆಯಲ್ಲಿ ಸುತ್ತಾಡುತ್ತಿದ್ದರು. ಎಲ್ಲರಂತೆ ನಾವು ಗುಡ್ ಫ್ರೆಂಡ್ಸ್ ಅಂತಾನೇ ಇಬ್ಬರೂ ಹೇಳಿಕೊಂಡ ತಿರುಗಾಡುತ್ತಿದ್ದರು.

Latest Videos

click me!