ಎಷ್ಟೇ ಬೇಡ್ಕೊಂಡ್ರು ಸಿನಿಮಾ ಮಾಡಲ್ಲ ಅಂತ ಮರ ಹತ್ತಿ ಕೂತ ಮಹೇಶ್ ಬಾಬು: ಏನಿದು ಫನ್ನಿ ಘಟನೆ!

Published : May 15, 2025, 06:01 PM IST

ಸೂಪರ್ ಸ್ಟಾರ್ ಮಹೇಶ್ ಬಾಬು ಮರ ಹತ್ತಿದ್ರಂತೆ! ಸಿನಿಮಾ ಮಾಡಲ್ಲ ಅಂತ ಡೈರೆಕ್ಟರ್ ಮುಖಕ್ಕೆ ಹೇಳಿ ಮರ ಹತ್ತಿ ಕೂತ್ಬಿಟ್ರಂತೆ. ಡೈರೆಕ್ಟರ್ ಎಷ್ಟು ಬೇಡ್ಕೊಂಡ್ರು ಕೇಳಿಲ್ಲವಂತೆ. ಈ ಘಟನೆ ನೆನಪಿಸಿಕೊಂಡ ನಿರ್ದೇಶಕರು ಯಾರು? ಮಹೇಶ್ ಬಾಬು ಯಾಕೆ ಮರ ಹತ್ತಿದ್ರು?

PREV
16
ಎಷ್ಟೇ ಬೇಡ್ಕೊಂಡ್ರು ಸಿನಿಮಾ ಮಾಡಲ್ಲ ಅಂತ ಮರ ಹತ್ತಿ ಕೂತ ಮಹೇಶ್ ಬಾಬು: ಏನಿದು ಫನ್ನಿ ಘಟನೆ!

ಸೂಪರ್ ಸ್ಟಾರ್ ಮಹೇಶ್ ಬಾಬು.. ಶೀಘ್ರದಲ್ಲೇ ರಾಜಮೌಳಿ ಸಿನಿಮಾ ಮಾಡಿ ಗ್ಲೋಬಲ್ ಸ್ಟಾರ್ ಆಗ್ತಾರಂತೆ. ರಾಜಮೌಳಿ, ಮಹೇಶ್ ಬಾಬು ಸಿನಿಮಾಗಾಗಿ ಇಡೀ ಭಾರತ ಕಾಯ್ತಿದೆ. ಈ ಸಿನಿಮಾ ಶೂಟಿಂಗ್ ಶುರುವಾಗಿದ್ದು, ಭರದಿಂದ ಸಾಗ್ತಿದೆ. ಬಿಸಿಲಿನ ತಾಪ ಹೆಚ್ಚಿರೋದ್ರಿಂದ ಸಿನಿಮಾ ಶೂಟಿಂಗ್‌ಗೆ ಬ್ರೇಕ್ ಕೊಟ್ಟಿದ್ದಾರಂತೆ. ಮಹೇಶ್ ಬಾಬು ಸಮ್ಮರ್ ವೆಕೇಶನ್‌ಗೆ ಫಾರಿನ್ ಹೋಗಿದ್ದಾರಂತೆ.

26

ಮಹೇಶ್ ಬಾಬು ಮರ ಹತ್ತಿದ್ರಂತೆ. ಸಿನಿಮಾ ಮಾಡಲ್ಲ ಅಂತ ಹೇಳಿ ಮರ ಹತ್ತಿ ಕೂತ್ಬಿಟ್ರಂತೆ. ಎಷ್ಟು ಜನ ಬೇಡ್ಕೊಂಡ್ರು ಕೆಳಗೆ ಬರಲಿಲ್ಲವಂತೆ. ಈ ವಿಷ್ಯವನ್ನು ದಿವಂಗತ ನಿರ್ದೇಶಕ ಕೋಡಿ ರಾಮಕೃಷ್ಣ ಒಂದು ಸಂದರ್ಶನದಲ್ಲಿ ಹೇಳಿದ್ರು. ಮಹೇಶ್ ಬಾಬು ಮರ ಹತ್ತಿದ್ದು ಯಾವಾಗ ಅಂತ ಗೊತ್ತಾ?

36

ಮಹೇಶ್ ಬಾಬು ಹೀರೋ ಆಗೋ ಮೊದಲು ಬಾಲನಟನಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. 1983ರಲ್ಲಿ ಕೃಷ್ಣ ಜೊತೆ ಕೋಡಿ ರಾಮಕೃಷ್ಣ ಪೋರಾಟಂ ಸಿನಿಮಾ ಮಾಡಿದ್ರು. ಈ ಸಿನಿಮಾದಲ್ಲಿ ಕೃಷ್ಣ ಅವರ ತಮ್ಮನ ಪಾತ್ರಕ್ಕೆ ಸಾಕಷ್ಟು ಜನರನ್ನು ಆಯ್ಕೆ ಮಾಡಲು ಪ್ರಯತ್ನಿಸಿದ್ರಂತೆ.

46

ಶೂಟಿಂಗ್‌ನಲ್ಲಿ ಮಹೇಶ್‌ರನ್ನು ನೋಡಿದ ಕೋಡಿ ರಾಮಕೃಷ್ಣ, ಕೃಷ್ಣ ಅವರ ಬಳಿ, "ನಿಮ್ಮ ತಮ್ಮನ ಪಾತ್ರಕ್ಕೆ ನಿಮ್ಮ ಮಗನನ್ನೇ ತಗೊಳ್ಳೋಣ" ಅಂದ್ರಂತೆ. ಕೃಷ್ಣ, "ಸರಿ, ಆದ್ರೆ ಅವನು ಮಾಡ್ತಾನೋ ಇಲ್ವೋ" ಅಂದ್ರಂತೆ. ಕೋಡಿ ರಾಮಕೃಷ್ಣ, "ನಾನು ಒಪ್ಪಿಸ್ತೀನಿ" ಅಂತ ಮಹೇಶ್ ಬಾಬು ಹತ್ರ ಹೋದ್ರಂತೆ.

56

"ಮಗನೇ, ನಿನಗೆ ಸಿನಿಮಾದಲ್ಲಿ ನಟಿಸೋದು ಇಷ್ಟಾನಾ?" ಅಂತ ಕೋಡಿ ರಾಮಕೃಷ್ಣ ಕೇಳಿದ್ರಂತೆ. ಮಹೇಶ್, "ಇಲ್ಲ, ನಮ್ಮಪ್ಪ ಎಷ್ಟು ಕಷ್ಟಪಡ್ತಾರೆ ಅಂತ ನೋಡಿದ್ದೀನಿ. ನನಗೆ ನಟನೆ ಇಷ್ಟ ಇಲ್ಲ" ಅಂದ್ರಂತೆ.

66

ಕೋಡಿ ರಾಮಕೃಷ್ಣ ಪದೇ ಪದೇ ಕೇಳಿದಾಗ ಮಹೇಶ್ ಬಾಬು, "ನಾನು ನಟಿಸಲ್ಲ" ಅಂತ ಮರ ಹತ್ತಿ ಕೂತ್ಬಿಟ್ರಂತೆ. ಎಷ್ಟು ಜನ ಬೇಡ್ಕೊಂಡ್ರು ಕೆಳಗೆ ಬರಲಿಲ್ಲವಂತೆ. ಕೊನೆಗೆ ಕೋಡಿ ರಾಮಕೃಷ್ಣ ಮಹೇಶ್ ಬಾಬುನ ಒಪ್ಪಿಸಿ ಸಿನಿಮಾದಲ್ಲಿ ನಟಿಸುವಂತೆ ಮಾಡಿದ್ರಂತೆ.

Read more Photos on
click me!

Recommended Stories