ಕಿಯಾರಾ ಅಡ್ವಾಣಿ ತಮ್ಮ ಹೆಸರು ಬದಲಾಯಿಸಿಕೊಂಡ ಹಿಂದಿನ ಕಾರಣವೇನು ಗೊತ್ತಾ?

Published : Feb 04, 2023, 03:29 PM IST

ಈ ದಿನಗಳಲ್ಲಿ ಬಾಲಿವುಡ್‌ ನಟಿ ಕಿಯಾರಾ ಅಡ್ವಾಣಿಯ (Kiara Advani) ಪರ್ಸನಲ್‌ ಲೈಫ್‌ ಚರ್ಚೆಯಲ್ಲಿದೆ. ಕಿಯಾರಾ ತಮ್ಮ ಬಹುಕಾಲದ ಬಾಯ್‌ಫ್ರೆಂಡ್‌ ನಟ ಸಿದ್ಧಾರ್ಥ್‌ ಮಲ್ಹೋತ್ರಾ (Siddharth Malhotra) ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಈ ನಡುವೆ ಕಿಯಾರಾಗೆ ಸಂಬಂಧಿಸಿದ ಹಲವು ಇಂಟರೆಸ್ಟಿಂಗ್‌ ವಿಷಯಗಳು ಸದ್ದು ಮಾಡುತ್ತಿವೆ. ಈ ನಟಿ ತಮ್ಮ ಹೆಸರನ್ನು ಆಲಿಯಾ ಅಡ್ವಾಣಿಯಿಂದ ಕಿಯಾರಾ ಅಡ್ವಾಣಿ ಎಂದು ಬದಲಾಯಿಸಿಕೊಂಡರು. ಇದರ ಹಿಂದಿನ  ಕಾರಣವೇನು ಗೊತ್ತಾ?

PREV
18
ಕಿಯಾರಾ ಅಡ್ವಾಣಿ  ತಮ್ಮ ಹೆಸರು ಬದಲಾಯಿಸಿಕೊಂಡ ಹಿಂದಿನ  ಕಾರಣವೇನು ಗೊತ್ತಾ?

ಬಾಲಿವುಡ್‌ಗೆ ಪಾದಾರ್ಪಣೆ ಮಾಡುವ ಮೊದಲು ಈ ನಟಿ ತಮ್ಮ ಹೆಸರನ್ನು ಆಲಿಯಾ ಅಡ್ವಾಣಿಯಿಂದ ಕಿಯಾರಾ ಅಡ್ವಾಣಿ ಎಂದು ಬದಲಾಯಿಸಿಕೊಂಡರು. 

28

ವರದಿಯ ಪ್ರಕಾರ, ಇದಕ್ಕೆ ಕಾರಣ ಸಲ್ಮಾನ್ ಖಾನ್. ವಾಸ್ತವವಾಗಿ ಆಲಿಯಾ ಭಟ್ ಅವರೊಂದಿಗೆ ಇವರ ಹೆಸರು ಘರ್ಷಣೆಯಾಗುವುದರಿಂದ ಬೇರೆ ಸ್ಕ್ರೀನ್ ಹೆಸರನ್ನು ಆಯ್ಕೆ ಮಾಡಲು ಸಲ್ಮಾನ್‌ ಕೇಳಿಕೊಂಡರು. 
 

38

ಸಂದರ್ಶನವೊಂದರಲ್ಲಿ, ಕಿಯಾರಾ ಎಂಬ ಹೆಸರು ಅಂಜಾನಾ ಅಂಜನಿಯಲ್ಲಿ ಪ್ರಿಯಾಂಕಾ ಚೋಪ್ರಾ ಅವರ ಹೆಸರಿನಿಂದ ಪ್ರೇರಿತವಾಗಿದೆ ಎಂದು ಕಿಯಾರಾ  ಬಹಿರಂಗಪಡಿಸಿದರು.


 

48

'2014 ರಲ್ಲಿ ನನ್ನ ಚೊಚ್ಚಲ ಪ್ರವೇಶದಿಂದ ನನ್ನ ಹೆಸರು ಕಿಯಾರಾ. ಈಗಾಗಗಲೇ ಸ್ಥಾಪಿತ ಸೂಪರ್‌ಸ್ಟಾರ್ ಆಲಿಯಾ ಭಟ್‌ನೊಂದಿಗೆ ಪ್ರೇಕ್ಷಕರನ್ನು ಗೊಂದಲಗೊಳಿಸಲು ಬಯಸಲಿಲ್ಲ. ನಮ್ಮದೇ ಆದ ಗುರುತನ್ನು ಹೊಂದಿರುವುದು. ಇದು ಸರಿಯಾದ ಕೆಲಸ ಎಂದು ಭಾವಿಸಿದೆ. ಎರಡು ಅಲಿಯಾರು ಏಕೆ?' ಎಂದು 2019 ರಲ್ಲಿ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಕಬೀರ್‌ ಸಿಂಗ್‌ ನಟಿ ಹೇಳಿದ್ದಾರೆ.

58

'ಕಿಯಾರಾ ಎಂಬ ಹೆಸರು ಪ್ರಿಯಾಂಕಾ ಚೋಪ್ರಾ ಅವರ ಚಲನಚಿತ್ರ ಅಂಜನಾ ಅಂಜನಿಯಿಂದ ಸ್ಫೂರ್ತಿ ಪಡೆದಿದೆ, ಅಲ್ಲಿ ಅವರು 'ಹಾಯ್, ನಾನು ಕಿಯಾರಾ' ಎಂದು ಪರಿಚಯಿಸಿಕೊಳ್ಳುತ್ತಾರೆ. ಎಂತಹ ಸುಂದರವಾದ ಹೆಸರು, ನನಗೆ ಮಗಳಿದ್ದರೆ, ನಾನು ಅವಳನ್ನು ಕಿಯಾರಾ ಎಂದು ಕರೆಯುತ್ತೇನೆ ಎಂದು ನಾನು ಯೋಚಿಸಿದೆ. ಆದರೆ ಅದಕ್ಕೂ ಮೊದಲು ನನಗೆ ನನಗಾಗಿ ಒಂದು ಹೆಸರು ಬೇಕಿತ್ತು. ಹಾಗಾಗಿ ನಾನು ಅದನ್ನು ತೆಗೆದುಕೊಂಡೆ' ಎಂದು  ತಮ್ಮ ಪರದೆಯ ಹೆಸರನ್ನು ಆಯ್ಕೆಮಾಡುವುದರ ಹಿಂದೆ ಪ್ರಿಯಾಂಕಾ ಚೋಪ್ರಾರ ಪಾತ್ರವೂ ಇದೆ ಎಂಬ ವಿಷಯ  ಹಂಚಿಕೊಂಡಿದ್ದಾರೆ.

68

ಕಿಯಾರಾ ಅವರ ಚೊಚ್ಚಲ ಬಾಲಿವುಡ್ ಚಿತ್ರ ಫಗ್ಲಿ ಶೀರ್ಷಿಕೆ ಗೀತೆಯಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಾಗ  ಸಲ್ಮಾನ್ ಖಾನ್ ಅವರು ಹೆಸರು ಬದಲಾಗಬೇಕೆಂದು ಸೂಚಿಸಿದ್ದರೆಂದು ಸಂದರ್ಶನದಲ್ಲಿ ಕಿಯಾರಾ ಬಹಿರಂಗಪಡಿಸಿದ್ದರು. 

78

ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ದಂಪತಿ ಫೆಬ್ರವರಿ 6 ರಂದು ರಾಜಸ್ಥಾನದ ಜೈಸಲ್ಮೇರ್‌ನಲ್ಲಿರುವ ಸೂರ್ಯಗಢ ಅರಮನೆಯಲ್ಲಿ ವಿವಾಹವಾಗಲಿದ್ದಾರೆ.

88

ಕಿಯಾರಾ ಮತ್ತು ಸಿದ್ಧಾರ್ಥ್ ಈ ವರೆಗೂ ತಮ್ಮ ಮದುವೆಯನ್ನು ಅಧಿಕೃತವಾಗಿ ದೃಢೀಕರಿಸದಿದ್ದರೂ, ಸಿದ್ಧತೆಗಳು ಭರದಿಂದ ಸಾಗುತ್ತಿವೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಜೋಡಿ ಜೈಸಲ್ಮೇರ್ ತಲುಪಿದ್ದು, ಹಲವು ಸಿನಿ ಗಣ್ಯರೂ ಮದುವೆಯಲ್ಲಿ ಪಾಲ್ಗೊಳ್ಳಲ್ಲಿದ್ದಾರೆ. 

 

Read more Photos on
click me!

Recommended Stories