ಕರೀನಾ ಕಪೂರ್ ತಾಯಿ ಬಬಿತಾಗೆ ಮಗಳ ಕೆರಿಯರ್‌ಗಿಂತ ಹಟವೇ ಮುಖ್ಯವಾಗಿತ್ತು!
First Published | Jan 11, 2021, 4:18 PM ISTಬಾಲಿವುಡ್‌ನ ಗ್ರೀಕ್ ಗಾಡ್ ಹೃತಿಕ್ ರೋಷನ್‌ಗೆ 47ರ ಸಂಭ್ರಮ. ಜನವರಿ 10, 1974ರಂದು ಮುಂಬೈನಲ್ಲಿ ಜನಿಸಿದ ಹೃತಿಕ್ ರೋಷನ್ ತಂದೆ ರಾಕೇಶ್ ರೋಶನ್ ನಿರ್ದೇಶನದ 'ಕಹೋ ನಾ ಪ್ಯಾರ್ ಹೈ' ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಈ ಚಿತ್ರದಲ್ಲಿ ಅಮಿಶಾ ಪಟೇಲ್ ಹೃತಿಕ್‌ರಿಗೆ ನಾಯಕಿಯಾಗಿದ್ದಾರೆ. ಸೂಪರ್ ಹಿಟ್ ಆದ ಈ ಸಿನಿಮಾದಿಂದ ರಾತ್ರೋರಾತ್ರಿ ಅಮಿಶಾ ಪಟೇಲ್ ಮತ್ತು ಹೃತಿಕ್ ಸೂಪರ್ ಸ್ಟಾರ್ ಆಗಿದ್ದರು. ಕರೀನಾ ಕಪೂರ್ ತಾಯಿ ಬಬಿತಾ ಹಟ ಹಿಡಿಯದಿದ್ದರೆ, ಈ ಸೂಪರ್‌ಹಿಟ್ ಚಿತ್ರದ ನಾಯಕಿ ಅಮಿಶಾ ಆಗಿರುತ್ತಿರಲ್ಲಿಲ್ಲ. ಏಕೆಂದರೆ ಮೊದಲು ಕರೀನಾ ಕಪೂರ್ ಈ ಸಿನಿಮಾದ ಹಿರೋಯಿನ್ ಆಗಿ ಆಯ್ಕೆಯಾಗಿದ್ದರು. ಅಷ್ಟಕ್ಕೂ ಆಗಿದ್ದೇನು?