ಅಭಿಷೇಕ್ ಬಚ್ಚನ್ ಜೀವನದಲ್ಲಿ ಐಶ್ವರ್ಯಾ 'ಮತ್ತೊಬ್ಬ ಮಹಿಳೆ' ಎಂದ ಕರಣ್ ಜೋಹರ್‌ಗೆ ನಟಿ ಪ್ರತಿಕ್ರಿಯಿಸಿದ್ದು ಹೀಗೆ

Published : Jul 18, 2023, 05:42 PM IST

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ಬಚ್ಚನ್ ಅವರ ಬಾಲಿವುಡ್‌ನ ಮೋಸ್ಟ್ ಪವರ್‌ಫುಲ್‌ ಕಪಲ್‌. ಆದರ ಜೊತೆಗೆ ವೈವಾಹಿಕ ಜೀವನದ ಬಗ್ಗೆ ವದಂತಿಗಳು ಇಂಟರ್‌ನೆಟ್‌ನಲ್ಲಿ ಹರಿದಾಡುತ್ತಲೇ ಇರುತ್ತವೆ.  ಆದರೆ ದಂಪತಿ ಈ ವದಂತಿಗೆ ಎಂದಿಗೂ ಗಮನ ಕೊಡಲಿಲ್ಲ. ಈಗ ಇವರ ಹಳೆಯ ವಿಡಿಯೋವೊಂದು ವೈರಲ್‌ ಆಗಿದೆ.

PREV
17
 ಅಭಿಷೇಕ್ ಬಚ್ಚನ್ ಜೀವನದಲ್ಲಿ ಐಶ್ವರ್ಯಾ 'ಮತ್ತೊಬ್ಬ ಮಹಿಳೆ' ಎಂದ ಕರಣ್ ಜೋಹರ್‌ಗೆ ನಟಿ ಪ್ರತಿಕ್ರಿಯಿಸಿದ್ದು ಹೀಗೆ

ಐಶ್ವರ್ಯಾ ರೈ ಮತ್ತು ಅವರ ಅತ್ತೆ ಜಯಾ ಬಚ್ಚನ್ ಅವರು ಸೌಹಾರ್ದ ಸಂಬಂಧ ಹಂಚಿಕೊಂಡಿಲ್ಲ ಎಂದು ಈ ಹಿಂದೆ ಕೆಲವು ವರದಿಗಳು ಹೇಳಿದ್ದವು. 

27

ಈಗ, ಕರಣ್ ಜೋಹರ್ ಅವರ ಚಾಟ್ ಶೋನಿಂದ ಅಭಿಷೇಕ್ ಮತ್ತು ಐಶ್ವರ್ಯಾ ಅವರ ಹಳೆಯ ಕ್ಲಿಪ್ ವೈರಲ್ ಆಗಿದ್ದು, ಜೂನಿಯರ್ ಬಚ್ಚನ್ ತಮ್ಮ ಮದುವೆಯ ಆರಂಭಿಕ ಹಂತದಲ್ಲಿ ಅವರ ಹೆಂಡತಿ ಮತ್ತು ಅವರ ತಾಯಿ ನಡುವಿನ ಸಮೀಕರಣವನ್ನು ಉದ್ದೇಶಿಸಿ ಮಾತನಾಡಿದ್ದಾರೆ. 

37

'ಅಭಿಷೇಕ್, ನಿಮ್ಮ ಜೀವನದಲ್ಲಿ ಯಾವುದೇ ಸಮಯದಲ್ಲಿ ನೀವು ಮೂರು ಹೆಂಗಸರ ನಡುವೆ ಹಂಚಿ ಹೋಗಿದ್ದೀರೆಂದು ಅನಿಸುತ್ತದೆಯೇ? ಏಕೆಂದರೆ ನೀವು ನಿಜವಾಗಿಯೂ ಜಯಾ ಅಂಟಿಯ ಕಣ್ಣು, ಶ್ವೇತಾ ಅವರ ಜೀವನ ಮತ್ತು ಈಗ ನಿಮಗೆ ಇನ್ನೊಬ್ಬ ಮಹಿಳೆ ಇದ್ದಾರೆ. ನೀವು ಇವರ ಮದ್ಯೆ ಓದಾಡಬೇಕೆಂದು ಅನಿಸಿದೆಯೇ?' ಎಂದು ಕರಣ್ ಅಭಿಷೇಕ್‌ನನ್ನು ಕೇಳಿದರು.

47

ಕರಣ್‌ ಜೋಹರ್‌ ಅವರ ಈ ಪ್ರಶ್ನೆ ಐಶ್ವರ್ಯಾ ಅವರಿಗೆ ಇಷ್ಟವಾಗಲಿಲ್ಲ.  ಹೆಂಡತಿಯನ್ನು ಇತರ ಮಹಿಳೆ ಎಂದು ಕರೆಯೋದು ನಿಮಗೆ ಮಾತ್ರ ಸಾಧ್ಯವೆಂದು ಹೇಳಿದರು. 

57

ವೀಡಿಯೊಗೆ ಪ್ರತಿಕ್ರಿಯಿಸಿದ ಅನೇಕ ನೆಟಿಜನ್‌ಗಳು ಐಶ್ವರ್ಯಾ ಅವರು ಉತ್ತರ ನೀಡಿದ ರೀತಿಗೆ  ನಟಿಯನ್ನು ಹೊಗಳಿದ್ದಾರೆ, 'ಐಶ್ವರ್ಯಾ ಹೇಳಿದ್ದನ್ನು ನಾನು ಪ್ರೀತಿಸುತ್ತೇನೆ' ಎಂದು ಜನ ಬರೆದಿದ್ದಾರೆ.

67

ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ  ಸ್ವಲ್ಪ ಸಮಯದವರೆಗೆ ಡೇಟಿಂಗ್ ಮಾಡಿದರು. 2007ರಲ್ಲಿ, ದಂಪತಿ ಮುಂಬೈನಲ್ಲಿ ಏಪ್ರಿಲ್ 20 ರಂದು ವಿವಾಹವಾದರು. ಅವರು ನವೆಂಬರ್ 2011 ರಲ್ಲಿ ಮಗಳು ಆರಾಧ್ಯ ಬಚ್ಚನ್‌ಗೆ ಪೋಷಕರಾದರು.

77

 ಧೂಮ್ 2 (2006), ಗುರು (2007) ಮತ್ತು ರಾವನ್ (2010) ನಂತಹ ಅನೇಕ ಚಲನಚಿತ್ರಗಳಲ್ಲಿ ಅಭಿಷೇಕ್ ಮತ್ತು ಐಶ್ವರ್ಯಾ ಒಟ್ಟಿಗೆ ನಟಿಸಿದ್ದಾರೆ. 

Read more Photos on
click me!

Recommended Stories