Jr NTR ಚಿತ್ರದಲ್ಲಿ ಅಲ್ಲು ಅರ್ಹಾ, 20 ಲಕ್ಷ ಸಂಭಾವನೆಗೆ ಒಪ್ಪಿಗೆ ಕೊಟ್ಟ ಅಲ್ಲು ಅರ್ಜುನ್?

ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ ಸೂಪರ್ ಹಿಟ್ ಆದ ಬಳಿಕ ನಟ ಜ್ಯೂ ಎನ್ ಟಿ ಆರ್ ಈಗ 'ದೇವರ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಚಿತ್ರದ ಪೋಸ್ಟರ್ ಕೂಡ ರಿಲೀಸ್ ಆಗಿದ್ದು, ಈ ಸಿನೆಮಾದಲ್ಲಿ ಸ್ಟಾರ್ ನಟರ ದಂಡೇ ಇದೆ ಎನ್ನಲಾಗಿದೆ.  

ವಿಶೇಷವೆಂದರೆ  ಜ್ಯೂ ಎನ್ ಟಿ ಆರ್ ಅವರ  'ದೇವರ'  ಸಿನೆಮಾದಲ್ಲಿ ತೆಲುಗಿನ ಮತ್ತೊಬ್ಬ ಸ್ಟಾರ್ ನಟ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ ನಟಿಸುತ್ತಿದ್ದಾರೆ ಎಂದು ಸುದ್ದಿ ಹಬ್ಬಿದೆ.

ಸ್ಟಾರ್ ನಟರ ದಂಡೇ ಇರುವ ದೇವರ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ನಟಿ ಜಾನ್ವಿ ಜ್ಯೂ ಎನ್ ಟಿ ಆರ್‌ಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


ಈ ಚಿತ್ರದಲ್ಲಿ ಬಾಲಿವುಡ್ ನಟ ಸೈಫ್ ಅಲಿ ಖಾನ್ ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಈ ಸಿನೆಮಾದಲ್ಲಿ ನಟ ಸೈಫ್ ಅಲಿ ಖಾನ್ ಗೆ ಕನ್ನಡದ ನಟಿ ಚೈತ್ರಾ ರೈ ಅವರು ಪತ್ನಿಯಾಗಿ ಅಭಿನಯಿಸುತ್ತಿದ್ದಾರೆ.

ದೇವರ ಚಿತ್ರದಲ್ಲಿ ಜ್ಯೂ ಎನ್ ಟಿ ಆರ್‌  ಎರಡು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಇವರಿಗೆ ಮಗಳ ಪಾತ್ರದಲ್ಲಿ ಅಲ್ಲು ಅರ್ಜುನ್ ಅವರ ಪುತ್ರಿ ಅಲ್ಲು ಅರ್ಹಾ  ನಟಿಸುತ್ತಿದ್ದಾರೆ ಎನ್ನಲಾಗಿದೆ.

ಅರ್ಜುನ್  ಪುತ್ರಿ ಅಲ್ಲು ಅರ್ಹಾ ಅವರಿಗೆ ನಟನೆ ಕಮ್ಮಿ ಇದ್ದು,  2-3 ದಿನಗಳ ಕಾಲ ನಡೆಯಲಿರುವ ಚಿತ್ರೀಕರಣಕ್ಕೆ 20 ಲಕ್ಷ ಸಂಭಾವನೆ ತೆಗೆದುಕೊಳ್ಳಲಾಗಿದೆ ಎಂದು ಸುದ್ದಿ ಹಬ್ಬಿದೆ. 

ಕೊರಟಾಲ ಶಿವ ನಿರ್ದೇಶನದಲ್ಲಿ ತಯಾರಾಗುತ್ತಿರುವ ಈ ಚಿತ್ರದಲ್ಲಿ ಜಾನ್ವಿ ಕಪೂರ್  ಕೂಡ ನಟಿಸುತ್ತಿದ್ದಾರೆ. ಜಾನ್ವಿ ಕಪೂರ್ ಅವರ ಬಾಲ್ಯ ಜೀವನದ ಪಾತ್ರದಲ್ಲಿ ಅಲ್ಲು ಅರ್ಹಾ ನಟಿಸುತ್ತಿದ್ದಾರೆ ಎನ್ನಲಾಗಿದೆ.

ಈ ಹಿಂದೆ ನಟಿ ಸಮಂತಾ ನಟನೆಯ 'ಶಾಕುಂತಲಂ' ಸಿನಿಮಾಗೂ ಅಲ್ಲು ಅರ್ಹಾ ದುಬಾರಿ ಸಂಭಾವನೆ ಪಡೆದಿದ್ದರು ಎಂದು ಸುದ್ದಿ ಹಬ್ಬಿತ್ತು. 

ಶಾಕುಂತಲಂ ಚಿತ್ರದಲ್ಲಿನ ನಟನೆಗೆ ಅರ್ಹಾಗಳಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿತ್ತು. ಈಗ ಅರ್ಹಾ ತನ್ನ ಎರಡನೇ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆದರೆ ದೇವರ ದಲ್ಲಿ ಅಲ್ಲು ಅರ್ಹಾ ನಟಿಸುತ್ತಿರುವ ಬಗ್ಗೆ ಚಿತ್ರತಂಡದಿಂದ ಆಗಲಿ, ಅಲ್ಲು ಕುಟುಂಬದಿಂದಾಗಲಿ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Latest Videos

click me!