ತಮ್ಮನನ್ನೇ ಆರೆಸ್ಟ್ ಮಾಡಿ ಎಂದು ಪೊಲೀಸಿಗೆ ಕಾಲ್‌ ಮಾಡಿದ್ದ ಏಕ್ತಾ ಕಪೂರ್!

Suvarna News   | Asianet News
Published : Aug 06, 2021, 04:38 PM IST

ಕಪಿಲ್ ಶರ್ಮಾ ಶೋನಲ್ಲಿ ಸೆಲೆಬ್ರಿಟಿಗಳು ಸಿನಿಮಾ ಪ್ರಚಾರಕ್ಕೆ ಭೇಟಿ ನೀಡಿದಾಗ, ತಮಗೆ ಸಂಬಂಧಿಸಿದ ರಹಸ್ಯಗಳನ್ನು ಮತ್ತು ಯಾರಿಗೂ ತಿಳಿಯದ ಅನೇಕ ವಿಷಯಗಳನ್ನು ಬಹಿರಂಗ ಪಡಿಸುತ್ತಾರೆ. ಅನೇಕ ಸೆಲೆಬ್ರಿಟಿಗಳು ಕಾರ್ಯಕ್ರಮದಲ್ಲಿ ಕೆಲವು ಇಂಟರೆಸ್ಟಿಂಗ್‌ ತಪ್ಪುಗಳನ್ನು ಸಹ ಒಪ್ಪಿಕೊಂಡಿದ್ದಾರೆ. ಅದೇ ರೀತಿ ಏಕ್ತಾ ಕಪೂರ್ ಕೂಡ ತಮ್ಮ ಕುಟುಂಬದ ಬಗ್ಗೆ ಕೆಲವು ರಹಸ್ಯಗಳನ್ನು ಕಾರ್ಯಕ್ರಮದಲ್ಲಿ ಹೇಳಿದರು. ಅವರು ಒಮ್ಮೆ ಸಹೋದರ ತುಷಾರ್‌ ಕಪೂರ್‌ ಅವರನ್ನು ಬಂಧಿಸಲು ಪೊಲೀಸರಿಗೆ ಕಾಲ್‌ ಮಾಡಿದ್ದರಂತೆ. ಇಲ್ಲಿದೆ ವಿವರ.

PREV
18
ತಮ್ಮನನ್ನೇ ಆರೆಸ್ಟ್ ಮಾಡಿ ಎಂದು ಪೊಲೀಸಿಗೆ ಕಾಲ್‌ ಮಾಡಿದ್ದ ಏಕ್ತಾ ಕಪೂರ್!

ಒಮ್ಮೆ ಏಕ್ತಾ ಕಪೂರ್‌ ಅವರನ್ನು ಸಹೋದರ  ತುಷಾರ್ ಕಪೂರ್‌ನೊಂದಿಗೆ ಕಪಿಲ್‌ ಶರ್ಮ ಶೋಗೆ ಆಹ್ವಾನಿಸಲಾಗಿತ್ತು.

28

ಗೆಸ್ಟ್‌ ಆಗಿದ್ದ ಏಕ್ತಾ ಕಪೂರ್ ಮತ್ತು ತುಷಾರ್ ಕಪೂರ್ ತಮ್ಮ ಕುಟುಂಬದ ಕೆಲವು ಮಾಹಿತಿಯನ್ನು ಹಂಚಿಕೊಂಡರು.   

38

ಏಕ್ತಾ ತುಷಾರ್‌ ಜೊತೆಗಿನ ತಮ್ಮ ಇಕ್ವೆಷನ್‌ ಬಗ್ಗೆ ಮಾತನಾಡಿದ್ದರು.

48

ಒಂದು ಘಟನೆಯನ್ನು ನೆನಪಿಸಿಕೊಂಡು, ರಜೆಯಲ್ಲಿ ಇಬ್ಬರೂ ಹೇಗೆ ಜಗಳವಾಡಿದರು ಮತ್ತು ತುಷಾರ್ ಹೊಡೆದು ಏಕ್ತಾರ ಮೂಗನ್ನು ಒಡೆದಿದ್ದರು, ಎಂಬ ಹಾರಿಬಲ್ ಸುದ್ದಿಯೊಂದನ್ನು ಹಂಚಿ ಕೊಂಡಿದ್ದರು. 

58

ಇತರ ಎಲ್ಲ ಒಡಹುಟ್ಟಿದವರಂತೆ, ತುಷಾರ್ ಮತ್ತು ನಾನು ತುಂಬಾ ಜಗಳವಾಡುತ್ತೇವೆ. ಒಮ್ಮೆ ನಾವು ತಿರುಪತಿಗೆ ಕುಟುಂಬ ಪ್ರವಾಸಕ್ಕೆ ಹೋದಾಗ, ನಾವಿಬ್ಬರೂ ಜಗಳವಾಡಿದೆವು. ಆಗ ತುಷಾರ್ ನನ್ನ ಮೂಗಿಗೆ ಹೊಡೆದ. ನಂತರ, ನಾನು ಪೊಲೀಸರಿಗೆ ಕಾಲ್‌ ಮಾಡಿದ್ದೆ,' ಎಂದು ಏಕ್ತಾ ಬಹಿರಂಗ ಪಡಿಸಿದರು.

68

ನಾವಿಬ್ಬರು ಶಾಲೆಗೆ ಹೋಗುವಾಗ,ತುಂಬಾ ಜಗಳವಾಡುತ್ತಿದ್ದೆವು. ನಾವು ಪರಸ್ಪರ ಒಬ್ಬರ ಕಾಲರ್‌ ಬಟನ್‌ಗಳನ್ನು ಹರಿದು ಹಾಕುತ್ತಿದ್ದೆವು. ಅಂತಹ ಸಂದರ್ಭಗಳಲ್ಲಿ, ಬಟ್ಟೆ ಬದಲಿಸಲು ಮನೆಗೆ ಹಿಂತಿರುಗಬೇಕಾಗುತ್ತಿತ್ತು. ನಾವು ಶಾಲೆಗೆ ತಡವಾಗಿ ತಲುಪುತ್ತಿದ್ದೆವು' ಎಂದು ತುಷಾರ್‌ ಸಹ ಅವರಿಬ್ಬರ ಜಗಳದ ಬಗ್ಗೆ ವಿಷಯ ಹಂಚಿಕೊಂಡರು.

78

'ದಿ ಡೈಲಿ ಸೋಪ್ ಕ್ವೀನ್ ಆಫ್ ಇಂಡಿಯಾ' ಎಂದೇ ಫೇಮಸ್‌ ಆಗಿರುವ  ಏಕ್ತಾ ಕಪೂರ್ ಭಾರತದಲ್ಲಿ ಟಿವಿ ಶೋಗಳ ಡೈನಾಮಿಕ್ಸ್ ಬದಲಿಸಿದ್ದಾರೆ. ಸಿರಿಯಲ್‌ಗಳ ಜೊತಗೆ ಏಕ್ತಾ ಹಲವು ಸಿನಿಮಾಗಳನ್ನು ನಿರ್ಮಿಸಿದ್ದಾರೆ. 

88

ಅಷ್ಟೇ ಅಲ್ಲ, ಅವರು ಬಾಲಿವುಡ್ ಮತ್ತು ಟಿವಿಯಲ್ಲಿ ಅನೇಕ ಹೊಸ ನಟ -ನಟಿಯರನ್ನು ಲಾಂಚ್‌ ಮಾಡಿದ್ದಾರೆ.

click me!

Recommended Stories