ದಿಲೀಪ್ ಕುಮಾರ್ ಆಗಿದ್ದ ಎ.ಆರ್ ರೆಹಮಾನ್ ಧರ್ಮ ಬದಲಿಸಿದ್ದೇಕೆ?

First Published | Nov 22, 2024, 12:37 PM IST

ದಿಲೀಪ್ ಕುಮಾರ್ ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ಎ.ಆರ್. ರೆಹಮಾನ್ ಎಂದು ಬದಲಾಗುವುದರ ಹಿಂದಿನ ಕಾರಣ ಹಾಗೂ ಪ್ರೇರಣೆ ಏನು ಎಂಬುದನ್ನು ಇಲ್ಲಿ ತಿಳಿಯೋಣ

ಎ.ಆರ್. ರೆಹಮಾನ್, ಸೈರಾ ಬಾನು

ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಸುಮಾರು 30 ವರ್ಷಗಳ ದಾಂಪತ್ಯದ ನಂತರ  ಇತ್ತೀಚೆಗ ವಿಚ್ಛೇದನ ಘೋಷಣೆ ಮಾಡಿದ್ದು, ಅಭಿಮಾನಿಗಳನ್ನು ಅಚ್ಚರಿಗೆ ದೂಡಿತ್ತು ಈ ವಿಚ್ಚೇದನದ ಸುದ್ದಿಯಿಂದಾಗಿ ಎ.ಆರ್‌ ರೆಹಮಾನ್‌ ಅವರ ವೈಯಕ್ತಿನ ಬದುಕಿನ ಹಲವು ವಿಚಾರಗಳು ಮುನ್ನೆಲೆಗೆ ಬರುತ್ತಿವೆ. 

ಹಿಂದೂವಾಗಿ ಜನಿಸಿದ್ದ ಎ.ಆರ್. ರೆಹಮಾನ್  ತಂದೆಯ ಮರಣದ ನಂತರ 1980ರಲ್ಲಿ ಇಸ್ಲಾಂಗೆ ಮತಾಂತರಗೊಂಡರು. ಅವರ ಮೂಲ ಹೆಸರು ದಿಲೀಪ್ ಕುಮಾರ್. ತಮ್ಮ ಹೆಸರನ್ನು ಬದಲಾಯಿಸಬೇಕೆಂಬ ಹಂಬಲ ಅವರಿಗಿತ್ತು. ಹೀಗಾಗಿ ರೆಹಮಾನ್' ಎಂಬ ಹೆಸರಿನೊಂದಿಗೆ ಆಳವಾದ ಸಂಬಂಧವನ್ನು ಅವರು ಕಂಡುಕೊಂಡರು. ತಂದೆಯ ಮರಣದ ನಂತರ ಕುಟುಂಬದೊಂದಿಗೆ ಇಸ್ಲಾಂಗೆ ಮತಾಂತರಗೊಂಡ ನಂತರ, ಬಹುಕಾಲದ ಆಸೆಯಾಗಿದ್ದ ರೆಹಮಾನ್' ಎಂಬ ಹೆಸರನ್ನು ಬಳಸಲು ನಿರ್ಧರಿಸಿದರು.

Tap to resize

ತಮ್ಮ ತಂಗಿಯ ಮದುವೆಗೆ ಜ್ಯೋತಿಷ್ಯ ನೋಡುವಾಗ, ಒಬ್ಬ ಹಿಂದೂ ಜ್ಯೋತಿಷಿ ತನಗೆ ಅಬ್ದುಲ್ ರೆಹಮಾನ್ ಮತ್ತು ಅಬ್ದುಲ್ ರಹೀಮ್ ಎಂಬ ಹೆಸರುಗಳನ್ನು ಸೂಚಿಸಿದ್ದಾಗಿ ರೆಹಮಾನ್ ನೆನಪಿಸಿಕೊಂಡರು. ಅದರಲ್ಲಿ ರೆಹಮಾನ್ ಎಂಬ ಹೆಸರನ್ನು ಆಯ್ಕೆ ಮಾಡಿಕೊಂಡರು, ಮತ್ತು ತಾಯಿಯ  ಮನದಿಚ್ಚೆಯಂತೆ, 'ಅಲ್ಲಾ ರಕ್ಕಾ ಎಂಬುದನ್ನು ಸೇರಿಸಿ ಎ.ಆರ್. ರೆಹಮಾನ್ ಎಂದು ಹೆಸರು ಬದಲಾಯಿಸಿಕೊಂಡರು ಎಂಬ ಮಾಹಿತಿ ಇದೆ. 

'ದೇವರಿಂದ ರಕ್ಷಿಸಲ್ಪಟ್ಟವರು' ಎಂಬ ಅರ್ಥವನ್ನು ಹೊಂದಿರುವ ಎ.ಆರ್. ರೆಹಮಾನ್ ಎಂಬ ಹೆಸರು ಇಂದು ಸಂಗೀತ ಲೋಕದಲ್ಲಿ ಅನುಪಮ ಸ್ಥಾನ ಪಡೆದಿದೆ. ಈ ಹೆಸರು ಬದಲಾವಣೆ ರೆಹಮಾನ್ ಅವರ ಆಧ್ಯಾತ್ಮಿಕ ಪಯಣವನ್ನು ಸೂಚಿಸುವುದು ಮಾತ್ರವಲ್ಲದೆ, ಜಾಗತಿಕ ಖ್ಯಾತಿಗೆ ಅವರ ಏಳಿಗೆಯ ಆರಂಭವನ್ನೂ ಸೂಚಿಸುತ್ತದೆ, ಇದು ಅವರನ್ನು ವಿಶ್ವದ ಅತ್ಯಂತ ಪ್ರಸಿದ್ಧ ಸಂಗೀತಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ.

.29 ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ ರೆಹಮಾನ್ ಸಾಯಿರಾ ದಂಪತಿಗೆ ಮೂರು ಮಕ್ಕಳಿದ್ದಾರೆ. ಇಬ್ಬರು ತಮ್ಮ ವಕೀಲರಾದ ವಂದನಾ ಶಾ ಅವರು ಬಿಡುಗಡೆ ಮಾಡಿದ ಜಂಟಿ ಹೇಳಿಕೆಯ ಮೂಲಕ ತಾವು ಪ್ರತ್ಯೇಕಗೊಂಡಿರುವ ವಿಚಾರ ತಿಳಿಸಿದರು. ಆದರೆ ರೆಹಮಾನ್ ಅವರು ಸೂಫಿ ಸಂತರೊಬ್ಬರಿಂದ ಪ್ರಭಾವಕ್ಕೊಳಗಾಗಿ ಮತಾಂತರಗೊಂಡರು ಎಂಬ ಮಾಹಿತಿ ಇದೆ. ತಮ್ಮ ತಂದೆಯನ್ನು ಕೊನೆಯ ದಿನಗಳಲ್ಲಿ ಆರೈಕೆ ಮಾಡಿದ್ದ  ಸೂಫಿ ಸಂತರೊಬ್ಬರ ಪ್ರಭಾವಕ್ಕೆ ಒಳಗಾಗಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರು. ಈ ನಂಬಿಕೆಯ ಬದಲಾವಣೆ ಮನಸ್ಸಿಗೆ ಶಾಂತಿ ನೀಡಿತ್ತು. ಆದರೂ ತಾವು ತಮ್ಮ ನಂಬಿಕೆಯನ್ನು ಬೇರೆಯವರ ಮೇಲೆ ಹೇರಲು ಇಷ್ಟಪಡುವುದಿಲ್ಲ ಎಂದು ಹೇಳಿಕೊಂಡಿದ್ದಾರೆ ರೆಹಮಾನ್‌

Latest Videos

click me!