ದಕ್ಷಿಣ ಭಾರತ ಸಿನಿಮಾ ರಂಗದ ಖ್ಯಾತ ನಟ ಅಲ್ಲು ಅರ್ಜುನ್ ಇತ್ತೀಚೆಗೆ ತಮ್ಮ ಪುಷ್ಪ 2 ಚಿತ್ರದ ಟ್ರೇಲರ್ ಬಿಡುಗಡೆಯಿಂದಾಗಿ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ಪುಷ್ಪ 1 ರಂತೆ ಆಕ್ಷನ್, ರೊಮ್ಯಾನ್ಸ್ ಮತ್ತು ಮನರಂಜನೆ ಇದೆ ಎಂದು ನಿರೀಕ್ಷಿಸಲಾಗಿದೆ. ದೇಶಾದ್ಯಂತ ಈ ಚಿತ್ರದ ಬಗ್ಗೆ ಉತ್ಸಾಹ ಇದ್ದರೂ, ಹರಿಯಾಣದಲ್ಲಿ ವಿಭಿನ್ನವಾದ ಚಿತ್ರಣ ಕಂಡುಬರುತ್ತಿದೆ.
ಚಿತ್ರದ ಬಗ್ಗೆ ಹರಿಯಾಣದಲ್ಲಿ ವಿವಾದವೊಂದು ಭುಗಿಲೆದ್ದಿದೆ. ಪುಷ್ಪ 2 ಚಿತ್ರದ ನಿರ್ಮಾಪಕರು ಮತ್ತು ನಟರ ಮೇಲೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ ಹೊರಿಸಲಾಗಿದೆ. ಈ ಚಿತ್ರದ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಹರಿಯಾಣದಲ್ಲಿ ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯ ಕೇಳಿಬರುತ್ತಿದೆ.
ಹಿಸಾರ್‌ನ ಜುಗ್ಲಾನ್ ಗ್ರಾಮದ ನಿವಾಸಿ ಕುಲ್ದೀಪ್ ಕುಮಾರ್ ಎಂಬುವರು ಪುಷ್ಪ 2 ಚಿತ್ರದ ವಿರುದ್ಧ ದೂರು ದಾಖಲಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಕ್ಕಾಗಿ ಅವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಹಣ ಗಳಿಸುವ ಸಲುವಾಗಿ ಒಂದು ಧರ್ಮವನ್ನು ಅವಮಾನಿಸಲು ಪ್ರಯತ್ನಿಸಲಾಗುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಇದರಿಂದ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತಿದೆ. ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪ 2 ಟ್ರೇಲರ್ 2:48 ನಿಮಿಷಗಳದ್ದಾಗಿದೆ. ಇದನ್ನು ಅದ್ಭುತವಾಗಿ ರಿಲೀಸ್ ಮಾಡಲಾಗಿದೆ. ಟ್ರೇಲರ್ ಆನೆಯ ಧ್ವನಿಯೊಂದಿಗೆ ಪ್ರಾರಂಭವಾಗುತ್ತದೆ. ನಂತರ ಹಲವಾರು ವಾಹನಗಳು ಕಾಣಿಸಿಕೊಳ್ಳುತ್ತವೆ. ಪುಷ್ಪನ ಪಾತ್ರದಲ್ಲಿ ಅಲ್ಲು ಅರ್ಜುನ್ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ರಕ್ತ ಚಂದನ ಮರಗಳನ್ನು ಸಹ ಟ್ರೇಲರ್‌ನಲ್ಲಿ ತೋರಿಸಲಾಗಿದೆ. ಇದರ ಆಧಾರದ ಮೇಲೆ ಚಿತ್ರದ ಕಥೆ ಮುಂದುವರಿಯುತ್ತದೆ.