ದಕ್ಷಿಣದ ಈ ಟಾಪ್‌ ನಟಿ ಕ್ರಿಶ್ಚಿಯನ್‌ ಧರ್ಮ ತೊರೆದು ಹಿಂದೂ ಆಗಿ ಬದಲಾದ ಹಿಂದಿನ ಕಾರಣ ಇದಾ?

First Published | Sep 10, 2023, 4:11 PM IST

ಸೌತ್‌ ಲೇಡಿ ಸೂಪರ್‌ಸ್ಟಾರ್‌  ನಯನಾತಾರ (Nayanthara) ಅವರು ಈ ದಿನಗಳಲ್ಲಿ ಶಾರುಖ್‌ಖಾನ್‌ ಅವರ ಜೊತೆಯ  ಜವಾನ್‌ ಸಿನಿಮಾದ ಕಾರಣ ಸುದ್ದಿಯಲ್ಲಿದ್ದಾರೆ. ಕ್ರಿಶ್ಚಿಯನ್‌ ಕುಟುಂಬದಲ್ಲಿ ಜನಿಸದ ಇವರು ಹಿಂದೂ ಧರ್ಮಕ್ಕೆ ಬದಲಾಗಿದ್ದಾರೆ. ಇದರ ಹಿಂದಿನ ಕಾರಣವೇನು ಗೊತ್ತಾ?

ದಕ್ಷಿಣದ ನಟಿ  ನಯನಾತಾರ ಅವರು ಹುಟ್ಟಿ ಬೆಳೆದದ್ದು  ಕ್ರಿಶ್ಚಿಯನ್ ಕುಟುಂಬದಲ್ಲಿ . ನಯನತಾರಾ ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್. 

ಆದರೆ  ಸಿನಿಮಾ ರಂಗಕ್ಕೆ ಕಾಲಿಟ್ಟ ಕಾರಣ ತನ್ನ ಹೆಸರನ್ನು ಬದಲಾಯಿಸಿಕೊಂಡರು  ಮತ್ತು ನಂತರ ಇವರು ಹಿಂದೂ ಧರ್ಮಕ್ಕೂ ಸೇರಿದರು.

Tap to resize

ಮೀಡಿಯಾದ ವರದಿಗಳ ಪ್ರಕಾರ ನಯನಾತಾರ ಅವರು 2011ರಲ್ಲಿ ಚೈನೈನ ಆರ್ಯಸಮಾಜವೊಂದರಲ್ಲಿ ಹಿಂದೂ ಧರ್ಮಕ್ಕೆ ಬದಲಾದರು ಮತ್ತು ಇದು ಅವರ ವೈಯಕ್ತಿಕ ಆಯ್ಕೆ ಎಂದು ಹೇಳಿದ್ದರು.
 

'ಹೌದು, ನಾನು ಹಿಂದೂ ಆಗಿದ್ದೇನೆ ಮತ್ತು ಇದು ನನ್ನ ವೈಯಕ್ತಿಕ ನಿರ್ಧಾರ. ನಾನು ಇಡೀ ಸಮಾರಂಭವನ್ನು ಉತ್ಸಾಹ ಮತ್ತು ದೃಢವಿಶ್ವಾಸದಿಂದ ನಡೆಸಿದ್ದೇನೆ' ಎಂದು ನಯನಾತಾರ ಹೇಳಿಕೆ ನೀಡಿದ್ದರು.

ನಟಿ  ವಾಲ್ಟಾಕ್ಸ್ ರಸ್ತೆಯಲ್ಲಿರುವ ಆರ್ಯ ಸಮಾಜ ದೇವಾಲಯಕ್ಕೆ ಹೋದರು ಮತ್ತು ವೈದಿಕ ಶುದ್ಧೀಕರಣ ಪ್ರಕ್ರಿಯೆಯಾದ 'ಶುದ್ಧಿ ಕರ್ಮದ' ಎಲ್ಲಾ ಪ್ರಕ್ರಿಯೆಗಳನ್ನು ಶ್ರದ್ಧೆಯಿಂದ ಅನುಸರಿಸಿದರು ಎಂದು  ಆರ್ಯ ಸಮಾಜಕ್ಕೆ ಹತ್ತಿರವಿರುವ ಮೂಲಗಳು ಬಹಿರಂಗಪಡಿಸಿದ್ದವು. 

ಅದೇ ರೀತಿ  ಕೆಲವು ವರದಿಗಳ ಪ್ರಕಾರ, ನಯನಾತಾರ ಅವರ ಈ ನಡೆಯ ಹಿಂದಿನ ಕಾರಣ ಅವರ ಮಾಜಿ ಪ್ರೇಮಿ ನಟ ಪ್ರಭುದೇವ ಅವರು ಎನ್ನಲಾಗಿದೆ.

ನಯನತಾರಾ  ಪ್ರಭುದೇವ ಅವರನ್ನು ಮದುವೆಯಾಗಲು ನಿರ್ಧರಿಸಿದ್ದರು.  ಅವರಿಗಾಗಿ ನಟಿ ಕ್ರಿಶ್ಚಿಯನ್‌ ಧರ್ಮದಿಂದ ಹಿಂದೂ ಧರ್ಮಕ್ಕೆ ಬದಲಾದರು ಎಂದು ಹೇಳಲಾಗಿದೆ

ದುರದೃಷ್ಟವಶಾತ್, ಮದುವೆಯ ದಿನ ಹತ್ತಿರವಾಗುತ್ತಿದ್ದಂತೆ 2012ರಲ್ಲಿ ಅವರ ಸಂಬಂಧವು ಹದಗೆಟ್ಟಿತು. ಅದರೆ ಬ್ರೇಕಪ್‌   ನಂತರವೂ ನಯನತಾರಾ  ಹಿಂದೂ ಧರ್ಮದ ಅನುಸರಣೆಯನ್ನು ಮುಂದುವರಿಸಿದ್ದಾರೆ

2022ರ ಜೂನ್‌ 10ರಂದು ನಟಿ ಫಿಲ್ಮೇಕರ್‌ ವಿಘ್ನೇಶ್‌ ಶಿವನ್‌ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಮದುವೆಯಾಗಿ 4 ತಿಂಗಳ ನಂತರ ದಂಪತಿಗಳು ಸರೋಗಸಿ ಮೂಲಕ ಅವಳಿ ಗಂಡು ಮಕ್ಕಳಿಗೆ ಪೋಷಕರಾದರು.

Latest Videos

click me!