ರಾತ್ರೋ ರಾತ್ರಿ ಬೀದಿಗೆ ಬಂದ ನಟ ಪವನ್‌ ಕಲ್ಯಾಣ್‌!

First Published | Sep 10, 2023, 3:16 PM IST

ಶನಿವಾರ ತಡರಾತ್ರಿ ಹೈ ಡ್ರಾಮಾ ನಡೆಯುತ್ತಿದ್ದಂತೆ ಆಂಧ್ರಪ್ರದೇಶ ಪೊಲೀಸರು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ವಶಕ್ಕೆ ಪಡೆದುಕೊಂಡಿದ್ರು.

ತೆಲಂಗಾಣ-ಆಂಧ್ರ ಗಡಿಯಲ್ಲಿ ಪೊಲೀಸರು ತಮ್ಮ ಬೆಂಗಾವಲು ಪಡೆಯನ್ನು ನಿಲ್ಲಿಸಿದ್ದನ್ನು ವಿರೋಧಿಸಿ ನಟ-ರಾಜಕಾರಣಿಯೊಬ್ಬರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದ್ದಾನೆ. ಶನಿವಾರ ತಡರಾತ್ರಿ ಹೈ ಡ್ರಾಮಾ ನಡೆಯುತ್ತಿದ್ದಂತೆ ಆಂಧ್ರಪ್ರದೇಶ ಪೊಲೀಸರು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ವಶಕ್ಕೆ ಪಡೆದುಕೊಂಡಿದ್ರು.

ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸಲು ಬಂದಿದ್ದ ಪವನ್‌ ಕಲ್ಯಾಣ್‌ ಅವರನ್ನು ಎನ್‌ಟಿಆರ್‌ ಜಿಲ್ಲೆಯಲ್ಲಿ ವಶಕ್ಕೆ ಪಡೆಯಲಾಯ್ತು. 

Tap to resize

ಶನಿವಾರ ನಂದ್ಯಾಲದಲ್ಲಿ ನಡೆದ ಮುಂಜಾನೆ ಕಾರ್ಯಾಚರಣೆಯಲ್ಲಿ ಬಂಧಿತರಾಗಿರುವ ತೆಲುಗು ದೇಶಂ ಪಕ್ಷದ ಮುಖ್ಯಸ್ಥ ಎನ್ ಚಂದ್ರಬಾಬು ನಾಯ್ಡು ಅವರನ್ನು ಬೆಂಬಲಿಸಲು ಪವನ್ ಕಲ್ಯಾಣ್ ವಿಜಯವಾಡ ಕಡೆಗೆ ತೆರಳಿದ್ದರು. ಅವರು ಆರಂಭದಲ್ಲಿ ವಾಯುಮಾರ್ಗಗಳ ಮೂಲಕ ಆಂಧ್ರವನ್ನು ತಲುಪಲು ಪ್ರಯತ್ನಿಸಿದರು. ಆದರೆ ಕೃಷ್ಣಾ ಜಿಲ್ಲೆಯ ಪೊಲೀಸರು ಗನ್ನವರಂ ವಿಮಾನ ನಿಲ್ದಾಣಕ್ಕೆ ಅವರ ವಿಶೇಷ ವಿಮಾನವು ಹೈದರಾಬಾದ್‌ನಿಂದ ಟೇಕ್ ಆಫ್ ಆಗಲಿಲ್ಲ ಎಂಬುದನ್ನು ಖಚಿತಪಡಿಸಿಕೊಂಡಿದ್ದಾರೆ..

ಜನ ಕಲ್ಯಾಣ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್‌ ನಂತರ ರಸ್ತೆ ಮಾರ್ಗದಲ್ಲಿ ಪ್ರಯಾಣಿಸಲು ನಿರ್ಧರಿಸಿದರು. ಆದರೆ ಶನಿವಾರದಂದು ಎರಡು ಬಾರಿ ಎನ್‌ಟಿಆರ್ ಜಿಲ್ಲೆಯಲ್ಲಿ ಅವರ ಬೆಂಗಾವಲು ವಾಹನವನ್ನು ನಿರ್ಬಂಧಿಸಲಾಯಿತು. ಬಳಿಕ, ನಟ ಹಾಗೂ ರಾಜಕಾರಣಿ ವಾಹನದಿಂದ ಇಳಿದು ವಿಜಯವಾಡದ ಮಂಗಳಗಿರಿ ಕಡೆಗೆ ನಡೆದು ಹೋಗಲು ತಯಾರಾದರು. ಆದರೆ, ವಿಜಯವಾಡ ಕಡೆಗೆ ಹೋಗದಂತೆ ತಡೆದ ನಂತರ, ಪವನ್‌ ಕಲ್ಯಾಣ್ ಅನುಮಂಚಿಪಲ್ಲಿ ರಸ್ತೆಯಲ್ಲಿ ಮಲಗಿದರು. ಶನಿವಾರ ತಡರಾತ್ರಿ ಹೈ ಡ್ರಾಮಾ ನಡೆಯುತ್ತಿದ್ದಂತೆ ಆಂಧ್ರಪ್ರದೇಶ ಪೊಲೀಸರು ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ಅವರನ್ನು ಎನ್‌ಟಿಆರ್ ಜಿಲ್ಲೆಯಲ್ಲಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

ಈ ಸಂಬಂಧ ಮಾಹಿತಿ ನೀಡಿದ ಪೊಲೀಸ್‌ ಅಧಿಕಾರಿ "ನಾವು ಕಲ್ಯಾಣ್ ಮತ್ತು ಮನೋಹರ್ ಅವರನ್ನು ತಡೆಗಟ್ಟುವ ಕಸ್ಟಡಿಗೆ ತೆಗೆದುಕೊಂಡಿದ್ದೇವೆ. ನಾವು ಅವರನ್ನು ವಿಜಯವಾಡಕ್ಕೆ ಕರೆದೊಯ್ಯುತ್ತಿದ್ದೇವೆ" ಎಂದು ನಂದಿಗಾಮ ಉಪವಿಭಾಗದ ಪೊಲೀಸ್ ಅಧಿಕಾರಿ ಜನಾರ್ದನ್ ನಾಯ್ಡು ಪಿಟಿಐಗೆ ತಿಳಿಸಿದ್ದಾರೆ. 

ಬಹುಕೋಟಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದನ್ನು ಪವನ್ ಕಲ್ಯಾಣ್ ಈ ಹಿಂದೆ ಖಂಡಿಸಿದ್ದರು. ಅಲ್ಲದೆ, ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‌ಮೋಹನ್‌ ರೆಡ್ಡಿ ವಿರುದ್ಧ ಮುಸುಕಿನ ಗುದ್ದಾಟ ನಡೆಸಿದ್ದ ನಟ ಈ ಘಟನೆಗಳು "ಪ್ರಜಾಪ್ರಭುತ್ವದಲ್ಲಿ ದುರದೃಷ್ಟಕರ" ಎಂದು ಟೀಕಿಸಿದ್ದಾರೆ.
 

ಅಲ್ದೆ, ಶನಿವಾರ ಸುದ್ದಿ ಮಾಧ್ಯಮದೊಂದಿಗೆ ಮಾತನಾಡಿದ ಪವನ್‌ ಕಲ್ಯಾಣ್, ''ಮಾಜಿ ಮುಖ್ಯಮಂತ್ರಿಯನ್ನು ಇಂದು ಬಂಧಿಸಿರುವ ರೀತಿ ಬೇಸರ ತಂದಿದೆ. ಒಬ್ಬ ನಾಯಕನ (ಸಿಎಂ ಜಗನ್) ಆದೇಶದ ಮೇರೆಗೆ ರಾಜ್ಯ ಅಧಿಕಾರಿಗಳು ಮತ್ತು ಆಡಳಿತ ಪಕ್ಷವು ಬಂಧನಗಳನ್ನು ಮಾಡುತ್ತಿರುವ ರೀತಿಯನ್ನು ನಾವು ಖಂಡಿಸುತ್ತೇವೆ’’ ಎಂದಿದ್ದಾರೆ.

ಚಂದ್ರಬಾಬು ನಾಯ್ಡು ಅವರ ಬಂಧನವು ರಾಜ್ಯದಾದ್ಯಂತ ಪಕ್ಷದ ಕಾರ್ಯಕರ್ತರಿಂದ ಕೋಪಗೊಂಡ ಪ್ರತಿಭಟನೆಗೆ ಕಾರಣವಾಯಿತು ಮತ್ತು ಆಡಳಿತಾರೂಢ ವೈಎಸ್ಆರ್ ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ರಾಜಕೀಯ ಪಕ್ಷಗಳಿಂದ ವ್ಯಾಪಕ ಖಂಡನೆಗೆ ಕಾರಣವಾಯಿತು.  
 

Latest Videos

click me!