Salman Khan Birthday: 60 ವರ್ಷದ ಎವರ್’ಗ್ರೀನ್ ಬ್ಯಾಚುಲರ್ ಸಲ್ಮಾನ್ ಖಾನ್ ನೆಟ್ ವರ್ತ್ ಇಷ್ಟೊಂದಾ?

Published : Dec 26, 2025, 07:54 PM IST

Salman Khan Birthday: ಬಾಲಿವುಡ್ ಬ್ಯಾಡ್ ಮ್ಯಾನ್, ಹ್ಯಾಂಡ್ಸಮ್ ಹಂಕ್ ಸಲ್ಮಾನ್ ಖಾನ್, ಡಿಸೆಂಬರ್ 27 ರಂದು 60ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಸಲ್ಮಾನ್ ಖಾನ್ ನೆಟ್ ವರ್ತ್, ಏನೆಲ್ಲಾ ಆಸ್ತಿ ಅಂತಸ್ತು ಇದೆ, ಎಲ್ಲಾ ಮಾಹಿತಿಯನ್ನು ತಿಳಿಯೋಣ.

PREV
17
ಸಲ್ಮಾನ್ ಖಾನ್ ನೆಟ್ ವರ್ತ್ ಎಷ್ಟು ಗೊತ್ತಾ?

ಬಾಲಿವುಡ್ ಭಾಯ್ ಜಾನ್, ಸಲ್ಮಾನ್ ಖಾನ್ ಡಿಸೆಂಬರ್ 27 ರಂದು 60 ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಎವರ್ ಗ್ರೀನ್ ಬ್ಯಾಚುಲರ್ ಆಸ್ತಿ ಮೌಲ್ಯ ಎಷ್ಟಿರಬಹುದು ಎಂದು ತಿಳಿದುಕೊಳ್ಳುವ ಕುತೂಹಲ ಜನರಲ್ಲಿದೆ. ಸಲ್ಮಾನ್ ಖಾನ್ ನೆಟ್ ವರ್ತ್ ಬರೋಬ್ಬರಿ 3000 ಕೋಟಿ ಎಂದು ಅಂದಾಜಿಸಲಾಗಿದೆ . ಹಾಗಿದ್ರೆ ಸಲ್ಮಾನ್ ಖಾನ್ ಇಷ್ಟೊಂದು ಹಣ ಎಲ್ಲಿಂದ ಸಂಪಾದಿಸುತ್ತಾರೆ ನೋಡೋಣ.

27
ಬಿಲೇನಿಯರ್ ಸಲ್ಮಾನ್ ಖಾನ್

ಸಲ್ಮಾನ್ ಖಾನ್ ಚಲನಚಿತ್ರಗಳಿಂದ ಮಾತ್ರವಲ್ಲದೆ ಸೈಡ್ ಬಿಸಿನೆಸ್‌ಗಳಿಂದಲೂ ದೊಡ್ಡ ಮೊತ್ತವನ್ನು ಗಳಿಸುತ್ತಾರೆ. ಅವರು ಮೂರು ದಶಕಗಳಿಗೂ ಹೆಚ್ಚು ಕಾಲ ಫಿಲಂ ಇಂಡಷ್ಟ್ರಿಯಲ್ಲಿ ಕೆಲಸ ಮಾಡಿದ್ದಾರೆ. ಅವರನ್ನು ಭಾರತದ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅವರ ನೆಟ್ ವರ್ತ್ 3000 ಕೋಟಿ ಎಂದು ಅಂದಾಜಿಸಲಾಗಿದೆ, ಇದು ಹೆಚ್ಚಾಗಿರುವ ಸಾಧ್ಯತೆ ಕೂಡ ಇದೆ.

37
ಸಲ್ಮಾನ್ ಖಾನ್ ಫೀಸ್

ಚಲನಚಿತ್ರ ಫೀಸ್ ಗಳು, ಬ್ರಾಂಡ್ ಎಂಡೋರ್ಸ್’ಮೆಂಟ್, ಟಿವಿ ಕಾರ್ಯಕ್ರಮಗಳು ಮತ್ತು ವ್ಯವಹಾರ ಗಳಿಕೆಗಳು ಒಟ್ಟಾಗಿ ಸೇರಿ ಸಲ್ಮಾನ್ ಖಾನ್ ಒಂದು ವರ್ಷದಲ್ಲಿ ಸುಮಾರು 200-300 ಕೋಟಿ ರೂಪಾಯಿಗಳನ್ನು ಗಳಿಸುತ್ತಾರೆ.

47
ಚಲನಚಿತ್ರದಿಂದ ಗಳಿಕೆ ಎಷ್ಟು?

ಸಲ್ಮಾನ್ ಖಾನ್ ಪ್ರತಿ ಚಿತ್ರಕ್ಕೆ ಸರಿಸುಮಾರು 100-150 ಕೋಟಿ ರೂಪಾಯಿಗಳನ್ನು ಪಡೆಯುತ್ತಾರೆ. ಅವರು ಲಾಭ ಹಂಚಿಕೆಯನ್ನು ಸಹ ತೆಗೆದುಕೊಳ್ಳುತ್ತಾರೆ, ಇದು ಅವರ ಗಳಿಕೆಯನ್ನು ಡಬಲ್ ಮಾಡುತ್ತದೆ.

57
ಸಲ್ಮಾನ್ ಅವರ ಸೂಪರ್‌ಹಿಟ್ ಚಿತ್ರಗಳು

ಚಲನಚಿತ್ರಗಳ ಬಗ್ಗೆ ಹೇಳುವುದಾದರೆ, ಸಲ್ಮಾನ್ ಉದ್ಯಮದಲ್ಲಿ ಹಲವಾರು ಸೂಪರ್‌ಹಿಟ್‌ಗಳನ್ನು ನೀಡಿದ್ದಾರೆ. "ಟೈಗರ್," "ದಬಾಂಗ್," "ಭಜರಂಗಿ ಭಾಯಿಜಾನ್," ಮತ್ತು "ಸುಲ್ತಾನ್" ನಂತಹ ಚಿತ್ರಗಳು ಅವರನ್ನು ಬಾಕ್ಸ್ ಆಫೀಸ್ ಕಿಂಗ್ ಆಗಿಸಿದೆ.

67
ಸಲ್ಮಾನ್ ಖಾನ್ ಬಿಗ್ ಬಾಸ್ ಸಂಭಾವನೆ ಎಷ್ಟು?

ಜನಪ್ರಿಯ ರಿಯಾಲಿಟಿ ಟಿವಿ ಶೋ ಬಿಗ್ ಬಾಸ್ ಗೆ ಸಲ್ಮಾನ್ ಖಾನ್ ಭಾರಿ ಸಂಭಾವನೆ ಪಡೆಯುತ್ತಾರೆ. ಅವರ ಪ್ರತಿ ಸಂಚಿಕೆಯ ಶುಲ್ಕ ಕೋಟಿಗಳಷ್ಟಿದೆ. ಒಂದೇ ಸೀಸನ್ ಗೆ ಅವರು 200 ಕೋಟಿ ರೂಪಾಯಿಗಳಿಗೂ ಹೆಚ್ಚು ಸಂಭಾವನೆ ಪಡೆಯುತ್ತಾರೆ. ಅವರನ್ನು ಅತ್ಯಂತ ದುಬಾರಿ ಟಿವಿ ನಿರೂಪಕ ಎಂದು ಪರಿಗಣಿಸಲಾಗಿದೆ.

77
ರಿಯಲ್ ಎಸ್ಟೇಟ್ ಮತ್ತು ಐಷಾರಾಮಿ ಮನೆಗಳು

ಸಲ್ಮಾನ್ ಖಾನ್ ಪನ್ವೇಲ್‌ನಲ್ಲಿ ಒಂದು ಫಾರ್ಮ್ ಹೌಸ್, ಮುಂಬೈನಲ್ಲಿ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ಗಳು ಮತ್ತು ದುಬೈನಲ್ಲಿ ಹಲವಾರು ಆಸ್ತಿಗಳನ್ನು ಹೊಂದಿದ್ದಾರೆ. ನಟ ಐಷಾರಾಮಿ ವಾಹನಗಳ ಸಂಗ್ರಹವನ್ನೂ ಹೊಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories