ಟಾಲಿವುಡ್ ನಟ ಶಿವಾಜಿ ಹೊತ್ತಿಸಿದ ಬೆಂಕಿ ಇನ್ನೂ ಆರೇ ಇಲ್ಲ. ಅದರಲ್ಲೂ ಅನಸೂಯಾ ಈ ವಿಷಯದಲ್ಲಿ ತುಂಬಾ ಖಾರವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇದೀಗ ಮತ್ತೊಮ್ಮೆ ಶಿವಾಜಿ ಮೇಲೆ ಗರಂ ಆಗಿದ್ದಾರೆ. ಅಷ್ಟಕ್ಕೂ ಆಕೆ ಹೇಳಿದ್ದೇನು?
ನಟಿಯರು ಪೂರ್ತಿ ಬಟ್ಟೆ ಹಾಕಬೇಕು ಎಂದು ನಟ ಶಿವಾಜಿ ಮಾಡಿದ ಕಾಮೆಂಟ್ ದೊಡ್ಡ ವಿವಾದ ಸೃಷ್ಟಿಸಿದೆ. ಈ ಬಗ್ಗೆ ಅನಸೂಯಾ ಖಾರವಾಗಿ ಪ್ರತಿಕ್ರಿಯಿಸಿದ್ದು, ಇದಕ್ಕೆ ಶಿವಾಜಿ ಕೂಡ ತಿರುಗೇಟು ನೀಡಿದ್ದಾರೆ.
25
ತುಂಬಾ ಡೇಂಜರ್
ಶಿವಾಜಿ ಕಾಮೆಂಟ್‌ಗಳಿಗೆ ಅನಸೂಯಾ ಮತ್ತೊಮ್ಮೆ ಇನ್‌ಸ್ಟಾಗ್ರಾಮ್ ಲೈವ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. 'ಅತಿ ವಿನಯಂ ಧೂರ್ತ ಲಕ್ಷಣಂ' ಎಂಬ ಮಾತು ನೆನಪಾಯಿತು. ಅಮ್ಮ, ತಾಯಿ ಎನ್ನುವವರೇ ತುಂಬಾ ಡೇಂಜರ್ ಎಂದು ಅನಿಸಿತು ಎಂದಿದ್ದಾರೆ.
35
ವಿಕ್ಟಿಮ್ ಕಾರ್ಡ್ ಪ್ಲೇ
ಸ್ಟೋರ್ ಲಾಂಚ್‌ನಲ್ಲಿ ಪತ್ರಕರ್ತರ ಪ್ರಶ್ನೆಗೆ ಮಾತ್ರ ನಾನು ಪ್ರತಿಕ್ರಿಯಿಸಿದ್ದು. ಶಿವಾಜಿ ತಮ್ಮ ಅಭಿಪ್ರಾಯ ಹೇಳಿದಂತೆ, ನಾನು ನನ್ನ ಅಭಿಪ್ರಾಯ ಹೇಳಿದ್ದೇನೆ. ಅವರು ವಿಕ್ಟಿಮ್ ಕಾರ್ಡ್ ಪ್ಲೇ ಮಾಡುತ್ತಿದ್ದಾರೆ ಎಂದು ಅನಸೂಯಾ ಹೇಳಿದ್ದಾರೆ.
ಹೆಂಗಸರ ಬಟ್ಟೆ ಬಗ್ಗೆ ಮಾತಾಡೋದು ಅಸಮರ್ಥತೆ. ತಮ್ಮ ಮೇಲೆ ನಿಯಂತ್ರಣ ಇಲ್ಲದವರು ಬೇರೆಯವರ ಮೇಲೆ ಹೇರುತ್ತಾರೆ. ನಾವೇನು ಹಾಕೋಬೇಕು ಅಂತ ನೀವು ಹೇಳ್ತೀರಾ? ನಾನೂ ಒಬ್ಬ ನಟಿ, ಗ್ಲಾಮರಸ್ ಆಗಿರೋ ಹಕ್ಕು ನನಗೂ ಇದೆ ಎಂದಿದ್ದಾರೆ.
55
ಧೈರ್ಯವಿದ್ದರೆ ಗಂಡಸರ ನಡತೆ ಬಗ್ಗೆ ಪ್ರಶ್ನಿಸಿ
ಕಾಮೆಂಟ್ ಮಾಡಿ ಸಾರಿ ಹೇಳಿದ್ರೆ ಸಾಲದು, ನಿಮ್ಮ ನಿಜ ಸ್ವರೂಪ ಆ ಟೋನ್‌ನಲ್ಲೇ ಕಾಣಿಸುತ್ತೆ. ಧೈರ್ಯವಿದ್ದರೆ ಗಂಡಸರ ನಡತೆ ಬಗ್ಗೆ ಪ್ರಶ್ನಿಸಿ. ಬಟ್ಟೆಯಲ್ಲ, ಕ್ಯಾರೆಕ್ಟರ್ ಮುಖ್ಯ ಎಂದು ಅನಸೂಯಾ ಸ್ಪಷ್ಟಪಡಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.