ಈಗ್ಲೂ ಬ್ಯಾಚ್ಯುಲರ್ Salman Khan ಡಿಸೆಂಬರ್ 27ಕ್ಕೆ ಹುಟ್ಟಿದ್ದೇ ಒಂಟಿತನಕ್ಕೆ ಕಾರಣವಾಯ್ತಾ?

Published : Dec 26, 2025, 02:00 PM IST

Salman Khan love : ಬಾಲಿವುಡ್‌ ದಬಾಂಗ್‌ ಹುಡುಗ ಸಲ್ಮಾನ್ ಖಾನ್ ಯಾಕೆ ಈವರೆಗೂ ಮದುವೆ ಆಗಿಲ್ಲ. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಅವರ ಜಾತಕ, ಸ್ವಭಾವವೇ ಇದಕ್ಕೆ ಕಾರಣ ಅಂತ ಸಂಖ್ಯಾಶಾಸ್ತ್ರ ಹೇಳುತ್ತದೆ. 

PREV
19
ಬ್ಯಾಚ್ಯುಲರ್ ಸಲ್ಮಾನ್ ಖಾನ್

ಬಾಲಿವುಡ್ ನ ಮೋಸ್ಟ್ ವಾಂಟೆಂಡ್ ಬ್ಯಾಚ್ಯುಲರ್ ಸಲ್ಮಾನ್ ಖಾನ್. ಮೂರ್ನಾಲ್ಕು ಹುಡುಗಿಯರನ್ನು ಪ್ರೀತಿ ಮಾಡಿದ್ರೂ ಮದುವೆ ಭಾಗ್ಯಾ ಮಾತ್ರ ಧಕ್ಕಲಿಲ್ಲ. ಈಗ್ಲೂ ಸಲ್ಮಾನ್ ಖಾನ್ ಬ್ಯಾಚ್ಯುಲರ್. ಸಲ್ಮಾನ್ ಖಾನ್ ಎಷ್ಟೇ ಸಿನಿಮಾ ಮಾಡಿದ್ರೂ ಅಭಿಮಾನಿಗಳು ಕೇಳುವ ಪ್ರಶ್ನೆ ಮದುವೆ ಆಗಲ್ವ ಅಂತ.

29
ಜಾತಕ ದೋಷ?

ಸಲ್ಮಾನ್ ಖಾನ್ ಮದುವೆ ಆಗ್ದಿರೋದಕ್ಕೆ ಜಾತಕವೇ ಕಾರಣ ಅಂತ ಅನೇಕ ಜ್ಯೋತಿಷ್ಯಿಗಳು ಹೇಳ್ತಾರೆ. ಸಂಖ್ಯಾ ಶಾಸ್ತ್ರಗಳ ಪ್ರಕಾರ ಅವರ ಮೂಲಾಂಕಕ್ಕೂ ಅವರ ಮದುವೆಗೂ ನಂಟಿದೆ. ಸಲ್ಮಾನ್ ಖಾನ್ ಮೂಲಾಂಕ 9. ಈ ಮೂಲಾಂಕದವರು ಹಠಮಾರಿಗಳು. ಸಂಬಂಧದಲ್ಲಿ ಹೊಂದಾಣಿಕೆ ಸಾಧ್ಯವಾಗೋದಿಲ್ಲ, ದೀರ್ಘಕಾಲ ಸಂಬಂಧ ಉಳಿಯೋದಿಲ್ಲ.

39
ಮುಂಗೋಪಿ ಸಲ್ಮಾನ್

ಬಾಲಿವುಡ್ ದಬಾಂಗ್ ಬಾಯ್ ಜನಿಸಿದ್ದು ಡಿಸೆಂಬರ್ 27, 1965 ರಂದು. ಅವರ ಮೂಲಾಂಕ 2 +7 =9. ಇವರು ಮಂಗಳ ಗ್ರಹದಿಂದ ಪ್ರಭಾವಿತರಾಗಿರುತ್ತಾರೆ. ಸದಾ ಎನರ್ಜಿ ತುಂಬಿರುತ್ತದೆ. ಮುಕ್ತವಾಗಿ ಮಾತನಾಡುತ್ತಾರೆ. ಮಹತ್ವಾಕಾಂಕ್ಷೆಯುಳ್ಳವರಾಗಿರ್ತಾರೆ. ಆದ್ರೆ ಮುಂಗೋಪಿ. ಈ ವ್ಯಕ್ತಿಗಳು ಯಾವಾಗ ಕೋಪಗೊಳ್ತಾರೆ ಹೇಳೋದು ಕಷ್ಟ. ಸಲ್ಮಾನ್ ಖಾನ್ ಕೂಡ ಇದೇ ಸ್ವಭಾವ ಹೊಂದಿದ್ದಾರೆ.

49
ಹಠಮಾರಿ

ಸಲ್ಮಾನ್ ಖಾನ್ ವೃತ್ತಿ ಜೀವನದಲ್ಲಿ ಮಾತ್ರವಲ್ಲ ವೈಯಕ್ತಿಕ ಜೀವನದಲ್ಲೂ ಚರ್ಚೆಯಲ್ಲಿರ್ತಾರೆ. ಅವರ ಅನೇಕ ಹೇಳಿಕೆಗಳು ವಿವಾದಕ್ಕೆ ಕಾರಣವಾಗುತ್ವೆ. ಸಲ್ಮಾನ್ ಖಾನ್ ಪ್ರೀತಿ ವಿಷ್ಯ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡಿತ್ತು. ಗಲಾಟೆ, ಜಗಳಗಳ ನಡುವೆ ಪ್ರೀತಿಗೆ ಬ್ರೇಕ್ ಬಿದ್ದಿದೆ. ಸಲ್ಮಾನ್ ಖಾನ್ ಹಠಮಾರಿ ಸ್ವಭಾವ ಹೊಂದಿದ್ದಾರೆ. ಪಾರ್ಟನರ್ ನಿಯಂತ್ರಿಸಲು ಸಲ್ಮಾನ್ ಖಾನ್ ಬಯಸ್ತಾರೆ. ಇದೇ ಗಲಾಟೆ, ಬ್ರೇಕ್ ಅಪ್ ಗೆ ಕಾರಣವಾಗಿದೆ.

59
ಅಚಲರು

ಈ ಮೂಲಾಂಕದ ಜನರು ಅಚಲರು. ಅವರು ತಮ್ಮ ನಿರ್ಧಾರಗಳಲ್ಲಿ ಯಾರೂ ಹಸ್ತಕ್ಷೇಪ ಮಾಡುವುದನ್ನು ಇಷ್ಟಪಡುವುದಿಲ್ಲ. ಬೇರೆಯವರ ಮಾತಿಗಿಂತ ತಮ್ಮ ಭಾವನೆ, ಮಾತಿಗೆ ಹೆಚ್ಚು ಆದ್ಯತೆ ನೀಡ್ತಾರೆ.

69
ಪೊಸೆಸಿವ್

ಸಂಬಂಧಗಳಲ್ಲಿ ಹೆಚ್ಚು ಪೊಸೆಸಿವ್ ಆಗೋದ್ರಿಂದ ಸಂಬಂಧದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ. ಈ ಮೂಲಾಂಕದವರು ತಮ್ಮ ಸಂಗಾತಿಯ ಸಣ್ಣ ವಿಷಯಗಳಲ್ಲಿಯೂ ಹಸ್ತಕ್ಷೇಪ ಮಾಡುತ್ತಾರೆ. ಸಂಗಾತಿ ಏನು ಧರಿಸ್ತಾರೆ, ಏನು ಮಾಡ್ತಾರೆ, ಹೇಗೆ ನಿಲ್ತಾರೆ, ಯಾರ ಜೊತೆ ಓಡಾಡ್ತಾರೆ ಎಲ್ಲವನ್ನು ನೋಡ್ತಿರುತ್ತಾರೆ. ಎಲ್ಲವನ್ನೂ ನಿಯಂತ್ರಿಸುತ್ತಿರುತ್ತಾರೆ. ಎಲ್ಲ ಕೆಲ್ಸದಲ್ಲಿ ಹಿಡಿತ ಬಯಸ್ತಾರೆ. ಇದು ಸಂಬಂಧದಲ್ಲಿಉಸಿರುಗಟ್ಟಿಸುವ ವಾತಾವರಣ ನಿರ್ಮಾಣ ಮಾಡುತ್ತೆ.

79
ಶುದ್ಧ ಹೃದಯ

ಸಲ್ಮಾನ್ ಖಾನ್ ಸೇರಿದಂತೆ ಈ ಮೂಲಾಂಕದವರ ಸ್ವಭಾವ ನೋಡೋದಾದ್ರೆ ಇವರು ಶುದ್ಧ ಮನಸ್ಸನ್ನು ಹೊಂದಿರುತ್ತಾರೆ. ಅವರು ಇತರರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ. ಇದೇ ಕಾರಣಕ್ಕೆ ಅಭಿಮಾನಿಗಳ ಬಳಗ, ಸ್ನೇಹಿತರ ಬಳಗ ದೊಡ್ಡದಿರುತ್ತದೆ. ಆದ್ರೆ ಭಾವನೆಗಳನ್ನು ಇತರರ ಮುಂದೆ ಇಡುವಲ್ಲಿ ಇವರು ಹಿಂದೆ ಬೀಳ್ತಾರೆ. ಇದೇ ಕಾರಣಕ್ಕೆ ಸಂಬಂಧದಲ್ಲಿ ಯಶಸ್ಸು ಸಿಗೋದು ಕಷ್ಟ.

89
ವೃತ್ತಿ ಜೀವನದಲ್ಲಿ ಯಶಸ್ಸು

ಇವರ ವೈಯಕ್ತಿಕ ಜೀವನದಲ್ಲಿ ಎಷ್ಟೇ ಏರುಪೇರಿರಲಿ, ಇವರ ವೃತ್ತಿ ಜೀವನ ಉತ್ತಮವಾಗಿರುತ್ತದೆ. ಮಂಗಳನ ಆಶೀರ್ವಾದ ಸದಾ ಇರುತ್ತದೆ. ಇದಕ್ಕೆ ಸಲ್ಮಾನ್ ಖಾನ್ ಉತ್ತಮ ನಿದರ್ಶ. ಅವರ ವೃತ್ತಿ ಏಳ್ಗೆಗೆ ಮೂಲಾಂಕ 9 ವರದಾನವಾಗಿದೆ.

99
ಸಲ್ಮಾನ್ ಖಾನ್ ಪ್ರೀತಿ

ಸಲ್ಮಾನ್ ಜೊತೆ ಹೆಚ್ಚು ಕೇಳಿ ಬಂದಿದ್ದು ಐಶ್ವರ್ಯ ರೈ ಹಾಗೂ ಕತ್ರಿನಾ ಕೈಫ್ ಹೆಸರು. ಐಶ್ವರ್ಯ ವಿಷ್ಯದಲ್ಲಿ ಗಲಾಟೆಯಾದ್ರೆ ಕತ್ರಿನಾ ಕೈಫ್ ಸದ್ದಿಲ್ಲದೆ ಹೊರಗೆ ನಡೆದಿದ್ರು. ನಂತ್ರ ಜನಪ್ರಿಯ ರೋಮನ್ ಮಾಡೆಲ್ ಲುಲಿಯಾ ವಂತೂರ್ ಜೊತೆಗೂ ಸಲ್ಮಾನ್ ಖಾನ್ ಹೆಸರು ಕೇಳಿ ಬಂದಿತ್ತು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories