ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಈಗ ಕೇವಲ ಸ್ಟಾರ್ ಕಿಡ್ ಅಲ್ಲ, ಚಲನಚಿತ್ರಗಳು ಮತ್ತು ನಿರ್ದೇಶನದಲ್ಲೂ ಹೆಸರು ಮಾಡುತ್ತಿದ್ದಾರೆ. 27ನೇ ವಯಸ್ಸಿನಲ್ಲಿ ಕೋಟ್ಯಾಧಿಪತಿಯಾಗಿರುವ ಆರ್ಯನ್ ನೆಟ್ ವರ್ತ್ ಎಷ್ಟು ಇಲ್ಲಿದೆ ಮಾಹಿತಿ.
ಶಾರುಖ್ ಖಾನ್ (Shahrukh Khan) ಅವರ ಹಿರಿಯ ಮಗ ಈಗ ಕೇವಲ ಸ್ಟಾರ್ ಕಿಡ್ ಆಗಿ ಉಳಿದಿಲ್ಲ. ಸದ್ಯ ಬಾಲಿವುಡ್ ನಲ್ಲಿ ಸದ್ದು ಮಾಡ್ತಿದ್ದಾರೆ ಆರ್ಯನ್ ಖಾನ್. ಅಷ್ಟೇ ಅಲ್ಲ ಇತ್ತೀಚೆಗೆ ನಿರ್ದೇಶಕರಾಗಿ ಬಾಲಿವುಡ್‌ಗೆ ಎಂಟ್ರಿ ನೀಡುವ ಮೂಲಕ ಧೂಳೆಬ್ಬಿಸಿದ್ದಾರೆ ಶಾರುಕ್ ಪುತ್ರ.
27
ಮೊದಲ ವೆಬ್ ಸೀರೀಸ್
ಆರ್ಯನ್ ಅವರ ಮೊದಲ ವೆಬ್ ಸೀರೀಸ್ "ದಿ ಬ*ರ್ಡ್ಸ್ ಆಫ್ ಬಾಲಿವುಡ್" ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಿದೆ. ಈ ಸೀರೀಸ್ ಬಜೆಟ್ ಸುಮಾರು 150 ಕೋಟಿ ರೂ.ಗಳೆಂದು ಹೇಳಲಾಗುತ್ತಿದೆ. ಸದ್ಯ ಈ ವೆಬ್ ಸೀರೀಸ್ ಮೂಲಕ ಎಲ್ಲೆಡೆ ಆರ್ಯನ್ ಖಾನ್ ಸುದ್ದಿಯಲ್ಲಿದ್ದಾರೆ.
37
ಶಾರುಖ್ ಪುತ್ರನ ನೆಟ್ ವರ್ತ್ ಎಷ್ಟು?
ಇತ್ತೀಚಿನ ದಿನಗಳಲ್ಲಿ ಆರ್ಯನ್ ಖಾನ್ ತಮ್ಮ ವೆಬ್ ಸಿರೀಸ್ (web series) ಮತ್ತು ಐಷಾರಾಮಿ ಜೀವನಶೈಲಿಯಿಂದ ಅಭಿಮಾನಿಗಳಲ್ಲಿ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. 27ನೇ ವಯಸ್ಸಿನಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಹೊಂದಿರುವ ಶಾರುಖ್ ಪುತ್ರನ ನೆಟ್ ವರ್ತ್ ಎಷ್ಟು ನೋಡೋಣ.
ಆರ್ಯನ್ ಮುಂಬೈನ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆಯಲ್ಲಿ ಶಾಲಾ ಶಿಕ್ಷಣ ಪಡೆದು ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ತೆರಳಿದ್ದರು. ಇನ್ನು ಆರ್ಯನ್ ದಕ್ಷಿಣ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಿಂದ (USC) ಸಿನಿಮಾ ಮತ್ತು ಚಲನಚಿತ್ರ ನಿರ್ಮಾಣದಲ್ಲಿ ಪದವಿ ಪಡೆದರು.
57
"ಝೀರೋ" ಚಿತ್ರದ ಸೆಟ್‌ಗಳಲ್ಲಿ ಸಹಾಯಕ
ಸ್ಟಾರ್ ಕಿಡ್ ಆದರೂ ಆರಂಭದಿಂದಲೇ ಪುಟ್ಟ ಹೆಜ್ಜೆ ಇಟ್ಟು ಮೇಲೆ ಬಂದಿರುವ ಆರ್ಯನ್ (Aryan Khan), ತನ್ನ ತಂದೆಯ "ಝೀರೋ" (2018) ಚಿತ್ರದ ಸೆಟ್‌ಗಳಲ್ಲಿ ಸಹಾಯಕನಾಗಿ ಕೆಲಸ ಮಾಡಿದ್ದರು ಮತ್ತು ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು.
67
ಒಟ್ಟು ಆಸ್ತಿ ಸುಮಾರು 80 ಕೋಟಿ ರೂ.
ಸದ್ಯ ಆರ್ಯನ್ ಖಾನ್ ಅವರಿಗೆ 27 ವರ್ಷ. ಈ ವಯಸ್ಸಿನಲ್ಲೇ ಅಪಾರ ಆಸ್ತಿ ಗಳಿಸಿದ್ದಾರೆ ಆರ್ಯನ್. ಆರ್ಯನ್ ಖಾನ್ ಅವರ ಆಸ್ತಿಯ ಬಗ್ಗೆ ಹೇಳುವುದಾದರೆ, ಅವರ ಒಟ್ಟು ಆಸ್ತಿ ಸುಮಾರು 80 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
77
ಐಷಾರಾಮಿ ಲೈಫ್ ಸ್ಟೈಲ್ ಬ್ರಾಂಡ್
ಐಷಾರಾಮಿ ಲೈಫ್ ಸ್ಟೈಲ್ ಬ್ರಾಂಡ್ "ಡಿ'ಯಾವೋಲ್" ಅನ್ನು ಪ್ರಾರಂಭಿಸಿದರು. ನಂತರ ಅವರು ಪ್ರೀಮಿಯಂ ಫ್ಯಾಷನ್ ಮತ್ತು ವೋಡ್ಕಾವನ್ನು ಒಳಗೊಂಡಿರುವ ಸ್ಟ್ರೀಟ್ ಡ್ರೆಸ್ ಮತ್ತು ಸ್ಪಿರಿಟ್‌ಗಳ "ಡಿ'ಯಾವೋಲ್ ಎಕ್ಸ್" ಅನ್ನು ಪ್ರಾರಂಭಿಸಿದರು. ಆ ಮೂಲಕ ಹೆಚ್ಚಿನ ಹಣ ಗಳಿಸಿದ್ದಾರೆ.