ನನ್ನ ಅಮ್ಮನ ಕನಸು ನನಸು ಮಾಡಿದ ಸಹೋದರ ರಿಷಬ್ ಶೆಟ್ಟಿ: ಜೂ.ಎನ್‌ಟಿಆರ್‌ ಹೇಳಿದ್ದಿಷ್ಟು...

Published : Sep 30, 2025, 11:19 AM IST

ರಿಷಬ್‌ ಒಬ್ಬ ಅಪರೂಪದ ನಟ, ನಿರ್ದೇಶಕ. ಅವರು ಈ ಚಿತ್ರಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ನನಗೆ ಗೊತ್ತು. ಸಿನಿಮಾದ ಎಲ್ಲಾ ಡಿಪಾರ್ಟ್‌ಮೆಂಟ್‌ಗಳೂ ಅ‍ವರಿಗೆ ಗೊತ್ತು ಎಂದು ಜೂ.ಎನ್‌ಟಿಆರ್‌ ಹೇಳಿದ್ದಾರೆ.

PREV
17
ನನ್ನ ಅಮ್ಮನ ಕನಸು ನನಸು

‘ನನ್ನ ಅಮ್ಮನಿಗೊಂದು ಕನಸಿತ್ತು. ಉಡುಪಿ ಶ್ರೀಕೃಷ್ಣನ ದರ್ಶನ ಮಾಡಬೇಕು ಎಂಬುದು. ನಾನು ಮತ್ತು ಅಮ್ಮ ಉಡುಪಿಗೆ ಹೋದಾಗ ತನ್ನ ಕುಟುಂಬದಂತೆ ನೋಡಿಕೊಂಡು ನನ್ನ ಅಮ್ಮನ ಕನಸು ನನಸು ಮಾಡಿದ್ದಾರೆ ರಿಷಬ್ ಶೆಟ್ಟಿ.’ ಹೀಗೆ ಹೇಳಿದ್ದು ಜೂ.ಎನ್‌ಟಿಆರ್‌.

27
ಯಾವತ್ತೂ ಅಂದುಕೊಂಡಿರಲಿಲ್ಲ

ಹೈದರಾಬಾದ್‌ನಲ್ಲಿ ನಡೆದ ‘ಕಾಂತಾರ ಚಾಪ್ಟರ್‌ 1’ ಪ್ರೀ ರಿಲೀಸ್‌ ಈವೆಂಟ್‌ನಲ್ಲಿ ಮಾತನಾಡಿದ ಅವರು, ‘ನಾನು ಚಿಕ್ಕಂದಿನಲ್ಲಿ ಕೇಳಿದ ಗುಳಿಗ, ಪಂಜುರ್ಲಿ ಕತೆಯನ್ನು ಸಿನಿಮಾ ಆಗಿ ನೋಡುತ್ತೇನೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ.

37
ರಿಷಬ್‌ ಅಪರೂಪದ ನಟ

ಆ ಕತೆಯನ್ನು ಸ್ಕ್ರೀನ್‌ ಮೇಲೆ ನೋಡಿದಾಗ ರೋಮಾಂಚಿತನಾದೆ. ರಿಷಬ್‌ ಒಬ್ಬ ಅಪರೂಪದ ನಟ, ನಿರ್ದೇಶಕ. ಅವರು ಈ ಚಿತ್ರಕ್ಕಾಗಿ ಎಷ್ಟು ಕಷ್ಟಪಟ್ಟಿದ್ದಾರೆ ಅಂತ ನನಗೆ ಗೊತ್ತು. ಸಿನಿಮಾದ ಎಲ್ಲಾ ಡಿಪಾರ್ಟ್‌ಮೆಂಟ್‌ಗಳೂ ಅ‍ವರಿಗೆ ಗೊತ್ತು. ಅವರಿಲ್ಲದಿದ್ದರೆ ಈ ಕಾಂತಾರ 1 ಸಿನಿಮಾ ಆಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

47
ಒಳ್ಳೆಯ ಆತಿಥ್ಯ ನೀಡಬೇಕು

ರಿಷಬ್‌ ಶೆಟ್ಟಿ ಮಾತನಾಡಿ, ‘ಜೂ.ಎನ್‌ಟಿಆರ್‌ ಅವರಿಗೆ ನಾನು ಒಳ್ಳೆಯ ಆತಿಥ್ಯ ನೀಡಬೇಕು ಎಂದು ಆಸೆ ಪಟ್ಟಿದ್ದೆ. ಆದರೆ ಕುಂದಾಪುರಕ್ಕೆ ಬಂದಾಗ ಅವರೇ ನಮಗೆ ನಾಟಿಕೋಳಿ ಸಾರು ಮಾಡಿ ಬಡಿಸಿದರು’ ಎಂದರು. ಪ್ರೀರಿಲೀಸ್‌ಗೆ ಸಾವಿರಾರು ಮಂದಿ ಆಗಮಿಸಿದ್ದರು.

57
ಕಾಂತಾರ ಚಾಪ್ಟರ್‌ 1 - ಮೊದಲ ಹಾಡು ಬ್ರಹ್ಮಕಲಶ ಬಿಡುಗಡೆ

ರಿಷಬ್‌ ಶೆಟ್ಟಿ ನಾಯಕನಾಗಿ ನಟಿಸಿ ನಿರ್ದೇಶನ ಮಾಡಿರುವ ‘ಕಾಂತಾರ ಚಾಪ್ಟರ್‌ 1’ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದೆ. ಕನ್ನಡ ಹಾಗೂ ತುಳು ಭಾಷೆ ಮಿಶ್ರಿತವಾಗಿರುವ ಈ ಹಾಡು ಶಾಸ್ತ್ರೀಯ ಸಂಗೀತದ ಹಿನ್ನೆಲೆಯಲ್ಲಿ ಮೂಡಿಬಂದಿದ್ದು ಶಿವನ ಆರಾಧನೆ ಇದರ ಹೈಲೈಟ್‌.

67
ಅ.2ರಂದು ವಿಶ್ವಾದ್ಯಂತ ತೆರೆಗೆ

‘ಕಾಂತಾರʼ ದ ʼವರಾಹ ರೂಪಂʼ ಹಾಡಿನ ಧಾಟಿಯಲ್ಲಿರುವ ಗೀತೆಗೆ ಜಾನಪದ ವಾದ್ಯ ಸಂಗೀತ ನೀಡಿರುವುದು ವಿಶೇಷ. ಕನ್ನಡದ ಜೊತೆಗೆ ಹಿಂದಿ, ಮಲಯಾಳಂ, ತೆಲುಗು, ತಮಿಳಿನಲ್ಲೂ ಈ ಹಾಡು ರಿಲೀಸ್‌ ಆಗಿದೆ. ಮಲಯಾಳಂ ಹೊರತುಪಡಿಸಿ ಉಳಿದೆಲ್ಲ ಭಾಷೆಗಳಿಗೆ ಅಬ್ಬಿ ವಿ. ಧ್ವನಿ ನೀಡಿದ್ದಾರೆ. ಅಕ್ಟೋಬರ್‌ 2ರಂದು ವಿಶ್ವಾದ್ಯಂತ ತೆರೆಗೆ ಬರಲಿದೆ. ಹೊಂಬಾಳೆ ಫಿಲಂಸ್ ಮೂಲಕ ವಿಜಯ ಕಿರಗಂದೂರು ನಿರ್ಮಿಸುತ್ತಿರುವ ಈ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ನಡೆಯುತ್ತಿದೆ.

77
ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ

ಮಾಲ್‌ಗಳಲ್ಲಿ ಚಿತ್ರದ ಟ್ರೇಲರ್‌ ಸ್ಕ್ರೀನಿಂಗ್‌, ಕತೆಯಲ್ಲಿ ಬರುವ ಅರಣ್ಯದ ಕಲಾಕೃತಿ, ರಿಷಬ್‌ ಅವರ ಕಟೌಟ್‌ ಇತ್ಯಾದಿಗಳ ಪ್ರದರ್ಶನ ನಡೆದಿದ್ದು, ಜನ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಮೆಟ್ರೋ ರೈಲು ಸೇರಿದಂತೆ ವಿವಿದೆಡೆ ‘ಕಾಂತಾರ ಚಾಪ್ಟರ್‌ 1’ರ ಪೋಸ್ಟರ್‌ ರಾರಾಜಿಸುತ್ತಿದೆ. ಇನ್ನೊಂದೆಡೆ ಹೈದರಾಬಾದ್‌ನಲ್ಲಿ ನಡೆದ ಇವೆಂಟ್‌ನಲ್ಲಿ ಜೂನಿಯರ್‌ ಎನ್‌ಟಿಆರ್‌ ಪಾಲ್ಗೊಂಡು ಸಿನಿಮಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Read more Photos on
click me!

Recommended Stories