ಕಾರ್ತಿಕ್ ಆರ್ಯನ್ - ಜಾನ್ವಿ ನಡುವೆ ಏನು ನಡೆಯುತ್ತಿದೆ? ದೋಸ್ತಾನಾ 2 ತಡವಾಗುತ್ತಿದೆಯೇಕೆ?

Suvarna News   | Asianet News
Published : Oct 30, 2021, 10:24 AM IST

ಕಾರ್ತಿಕ್ ಆರ್ಯನ್ (Kartik Aaryan)  ಮತ್ತು ಜಾನ್ವಿ ಕಪೂರ್‌ (Janhvi Kapoor) ನಟಿಸುತ್ತಿರುವ ದೋಸ್ತನಾ 2 (Dostana 2) ಸಿನಿಮಾದ ಬಗ್ಗೆ ಯಾವುದೇ ಅಪ್‌ಡೇಟ್ಸ್‌ ಇಲ್ಲ. ಈ ಸಿನಿಮಾ ತಡವಾಗಲು ಕಾರಣವೇನು? ಎಂಬ ವಿಷಯವೂ ಸಹ ತಿಳಿದು ಬಂದಿಲ್ಲ. ಇದು ಜಾನ್ವಿ ಮತ್ತು ಕಾರ್ತಿಕ್‌  ಆರ್ಯನ್‌ ನಡುವೆ ಏನು ನೆಡೆಯುತ್ತಿದೆ ಎಂದು ಅಭಿಮಾನಿಗಳಲ್ಲಿ ಸಂಶಯಕ್ಕೆ ಕಾರಣವಾಗಿದೆ. ಇದರ ಬಗ್ಗೆ ಸ್ವತಃ ಜಾನ್ವಿ ಕಪೂರ್‌ ಇತ್ತೀಚೆಗೆ ಮಾತನಾಡಿದ್ದಾರೆ. ಏನು ಹೇಳಿದ್ದಾರೆ ನೋಡಿ ನಟಿ.

PREV
16
ಕಾರ್ತಿಕ್ ಆರ್ಯನ್ - ಜಾನ್ವಿ ನಡುವೆ ಏನು ನಡೆಯುತ್ತಿದೆ? ದೋಸ್ತಾನಾ 2 ತಡವಾಗುತ್ತಿದೆಯೇಕೆ?

ದೋಸ್ತಾನಾ 2 ಸಿನಿಮಾಕ್ಕೆ  ಜಾನ್ವಿ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ಆಯ್ಕೆಯಾದಾಗ ಇಬ್ಬರೂ ಡೇಟಿಂಗ್‌ (Dating0 ನಡೆಸುತ್ತಿದ್ದರು. ಈ ಕಾರಣಗಳಿಂದ ಚಿತ್ರವು ವಿಳಂಬವಾಗುತ್ತಿದೆ ಎಂಬ ಊಹಾಪೋಹಗಳಿವೆ. ದೊಡ್ಡ ಬಜೆಟ್‌ನ (Big Budget) ಈ ಸಿನಿಮಾ ಕೆಲವು ಸಮಯದಿಂದ ಇನ್ನೂ ಸ್ಥಗಿತಗೊಂಡಿದೆ.

26

ಜಾನ್ವಿ ಕಪೂರ್ ಮತ್ತು ಕಾರ್ತಿಕ್ ಆರ್ಯನ್ ದೋಸ್ತಾನಾ 2 ಗೆ ಸಹಿ ಹಾಕಿದಾಗಿನಿಂದ ಸಂಬಂಧದಲ್ಲಿದ್ದಾರಂತೆ. ಆದಾಗ್ಯೂ, ಅವರಿಬ್ಬಲ್ಲಿ ಯಾರೂ ವದಂತಿಗಳನ್ನು ಕ್ಲೀಯರ್‌ ಮಾಡಿಲ್ಲ ಅಥವಾ ಅವರ ಲವ್‌ಲೈಫ್‌ (love life)  ಬಗ್ಗೆ ಯಾವುದೇ ಸ್ಪಷ್ಟೀಕರಣವನ್ನು ನೀಡಲಿಲ್ಲ. 

36

ನಂತರ ಕಾರಣಾಂತರಗಳಿಂದ ಸಿನಿಮಾ ತಡವಾಯಿತು ಹಾಗೂ ಲಾಕ್‌ಡೌನ್ ಪರಿಣಾಮಗಳಿಂದ ಸಹ  ಈ ಸಿನಿಮಾ ತೊಂದರೆಗೆ ಎದುರಿಸುತ್ತಿದೆ. ಸಿನಿಮಾದ ಕುರಿತು ಇತ್ತೀಚಿನ ಯಾವುದೇ ಅಪ್‌ಡೇಟ್ಸ್‌ ಇದುವರೆಗೂ ಹೊರಬಂದಿಲ್ಲ  ಮತ್ತು ಇಬ್ಬರೂ ಸ್ಟಾರ್ಸ್‌ ತಮ್ಮ ಕೆರಿಯರ್‌ನಲ್ಲಿ ಮುಂದುವರೆಯುತ್ತಿದ್ದಾರೆ.

46

ಆದಾಗ್ಯೂ, ಈಗ ಜಾನ್ವಿ ಕಪೋರ್ ಇತ್ತೀಚೆಗೆ ದೋಸ್ತಾನಾ 2 ಸಿನಿಮಾ ನಿಂತಿರುವ ಸಂದರ್ಭದಲ್ಲಿ ತಾನು ಅನುಭವಿಸಿದ ನೋವಿನ ಬಗ್ಗೆ ಮಾತನಾಡಿದ್ದಾರೆ. ಫಿಲ್ಮ್ ಕಂಪ್ಯಾನಿಯನ್ ಜೊತೆಗಿನ ಚಾಟ್‌ನಲ್ಲಿ, ನಟಿ ಅವರು ಪ್ರಾಜೆಕ್ಟ್‌ಗಳಿಗೆ ಸಹಿ ಮಾಡಿದಾಗಲೆಲ್ಲಾ, ಅವರು ಸೆಟ್‌ಗಳಲ್ಲಿ ಏನಾಗುತ್ತದೆ ಮತ್ತು ಅದಕ್ಕೆ ಸಂಬಂಧಪಟ್ಟ ವಿಷಯಗಳ ಕಲ್ಪನೆಯಲ್ಲಿರುತ್ತಾರೆ. ಕಾರ್ತಿಕ್ ಆರ್ಯನ್ ಜೊತೆಗಿನ ದೋಸ್ತಾನಾ 2 ಸಿನಿಮಾದ ಬಗ್ಗೆಯೂ ಅದೇ ರೀತಿ  ಕಲ್ಪನೆ ಮಾಡಿಕೊಂಡಿದ್ದರು ಎಂದು ಹೇಳಿದ್ದರು.

56

ಜಾನ್ವಿ ಕಪೂರ್ ಈ ಪ್ರಾಜೆಕ್ಟ್‌ ಬಗ್ಗೆ ತುಂಬಾ ಉತ್ಸುಕರಾಗಿದ್ದರು, ಆದರೆ ಅವರು ಕಾತುರದಿಂದ ಎದುರು ನೋಡುತ್ತಿದ್ದ ಸಿನಿಮಾ ಮುಂದೆವರೆಯದೇ ವಿಳಂಬವಾಗುವುತ್ತಿರುವುದು ಅವರಿಗೆ ತುಂಬಾ ಬೇಸರ ಉಂಟುಮಾಡಿದೆ ಎಂದು ಜಾನ್ವಿ ಹಂಚಿಕೊಂಡಿದ್ದಾರೆ 

66

ದೋಸ್ತನಾ 2 ಸಿನಿಮಾಕ್ಕೆ ಸಂಬಂಧಪಟ್ಟಂತೆ ಯಾವುದೇ ಇತ್ತೀಚಿನ ಅಪ್ಡೇಟ್‌ಗಳಿಲ್ಲ ಹಾಗೂ ಅವರ ಡೇಟಿಂಗ್ ಕುರಿತು ಜಾನ್ವಿ ಅಥವಾ ಕಾರ್ತಿಕ್ ಕಡೆಯಿಂದ ಸಹ ಯಾವುದೇ ಅಧಿಕೃತ ದೃಢೀಕರಣ ಬಂದಿಲ್ಲ. ಕಾರ್ತಿಕ್ ಅವರು ಕಿಯಾರಾ ಅಡ್ವಾಣಿ ಅವರೊಂದಿಗೆ ಭೂಲ್ ಭುಲೈಯಾ ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ.

Read more Photos on
click me!

Recommended Stories