ವಿವಾಹ ವಿಚ್ಚೇದನೆಯ ವಾರಗಳ ನಂತರ ನಟಿ ಸಮಂತಾ ರುತ್ ಪ್ರಭು ಅವರು ನಾಗ ಚೈತನ್ಯ ಅವರೊಂದಿಗೆ ಇರುವ ಎಲ್ಲಾ ಫೋಟೋಗಳನ್ನು Instagramನಿಂದ ಡಿಲೀಟ್ ಮಾಡಿದ್ದಾರೆ.
213
ಮಾಜಿ ಪತಿಯ ಜೊತೆಗಿದ್ದ ತಮ್ಮ ಎಲ್ಲಾ ಫೋಟೋಗಳನ್ನು ಅಳಿಸಿದ್ದಾರೆ. ಸಮಂತಾ ತಮ್ಮ ಮದುವೆಯ ಫೋಟೋಗಳನ್ನು ಅಳಿಸಿದ್ದಲ್ಲದೆ ಅವರ ವೆಕೇಷನ್ ಫೋಟೋಗಳನ್ನು ಅಳಿಸಿದ್ದಾರೆ.
313
ಸಮಂತಾ ರುತ್ ಪ್ರಭು ಅವರು ತಮ್ಮ ಸ್ಪೇನ್ ರಜೆ, ಆಂಸ್ಟರ್‌ಡ್ಯಾಮ್ ಪ್ರವಾಸ, ರಾಣಾ ದಗ್ಗುಬಾಟಿ ಅವರ ಮದುವೆ, ಕ್ರಿಸ್‌ಮಸ್ ಆಚರಣೆಗಳ ಹೆಚ್ಚಿನ ಫೋಟೋಗಳನ್ನು ಅಳಿಸಿದ್ದಾರೆ.
413
ಅವರ ಫೀಡ್‌ನಲ್ಲಿ ಉಳಿದಿರುವ ಚೈತನ್ಯ ಅವರ ಫೋಟೋಗಳು ಅವರ ಮುದ್ದಿನ ಹ್ಯಾಶ್‌ನೊಂದಿಗಿನ ಫೋಟೋ, ಸ್ನೇಹಿತರೊಂದಿಗೆ ಗುಂಪು ಫೋಟೋ ಮತ್ತು ಅವರ ಒಟ್ಟಿಗೆ ಪ್ರವಾಸದ ಕೆಲವು ಹಳೆಯ ಫೋಟೋಗಳು.
513
ಈ ತಿಂಗಳ ಆರಂಭದಲ್ಲಿ, ಸಮಂತಾ ಮತ್ತು ಚೈತನ್ಯ ಇಬ್ಬರೂ ತಮ್ಮ ವಿಚ್ಚೇದನೆ ಘೋಷಿಸುವ ಹೇಳಿಕೆಯನ್ನು ನೀಡಿದ್ದರು. ಈ ಮೂಲಕ ತಿಂಗಳಿಂದ ಇದ್ದ ಡಿವೋರ್ಸ್ ಸುದ್ದಿಗೆ ಸ್ಪಷ್ಟನೆ ಕೊಟ್ಟಿದ್ದರು.
613
ನಮ್ಮೆಲ್ಲ ಹಿತೈಷಿಗಳಿಗೆ. ಬಹಳ ಸಮಾಲೋಚನೆ ಮತ್ತು ಚಿಂತಿಸಿದ ನಂತರ ಚಾಯ್ ಮತ್ತು ನಾನು ನಮ್ಮದೇ ಹಾದಿಯನ್ನು ಅನುಸರಿಸಲು ಗಂಡ-ಹೆಂಡತಿಯಾಗಿ ಬೇರೆಯಾಗಲು ನಿರ್ಧರಿಸಿದ್ದೇವೆ. ಒಂದು ದಶಕದ ಸ್ನೇಹವನ್ನು ಹೊಂದಲು ನಾವು ಅದೃಷ್ಟಶಾಲಿಯಾಗಿದ್ದೇವೆ. ನಮ್ಮ ಸಂಬಂಧವು ಯಾವಾಗಲೂ ನಮ್ಮ ನಡುವೆ ವಿಶೇಷ ಬಂಧವನ್ನು ಹೊಂದಿರುತ್ತದೆ ಎಂದು ನಾವು ನಂಬುತ್ತೇವೆ ಎಂದು ಬರೆದಿದ್ದರು.
713
ಕಷ್ಟದ ಸಮಯದಲ್ಲಿ ನಮ್ಮ ಅಭಿಮಾನಿಗಳು, ಹಿತೈಷಿಗಳು ಮತ್ತು ಮಾಧ್ಯಮಗಳು ನಮ್ಮನ್ನು ಬೆಂಬಲಿಸಬೇಕು. ನಾವು ಮೂವ್ ಆನ್ ಆಗಲು ನಮಗೆ ಅಗತ್ಯವಿರುವ ಗೌಪ್ಯತೆಯನ್ನು ನೀಡುವಂತೆ ನಾವು ವಿನಂತಿಸುತ್ತೇವೆ. ನಿಮ್ಮ ಬೆಂಬಲಕ್ಕಾಗಿ ಧನ್ಯವಾದಗಳು ಎಂದು ಹೇಳಿಕೆಯಲ್ಲಿ ಬರೆಯಲಾಗಿತ್ತು.
813
ಸಮಂತಾ ತನ್ನ ಸೋಷಿಯಲ್ ಮೀಡಿಯಾದ ಮಾಧ್ಯಮ ಖಾತೆಗಳಲ್ಲಿ ತನ್ನ ಪೂರ್ಣ ಹೆಸರನ್ನು ಸಮಂತಾ ಅಕ್ಕಿನೇನಿ ಬದಲಿಗೆ 'S' ಎಂದು ಬದಲಿಸಿದ ನಂತರ ಅವರ ವಿಚ್ಚೇದನೆ ಬಗ್ಗೆ ವದಂತಿಗಳು ಪ್ರಾರಂಭವಾದವು.
913
ಈ ತಿಂಗಳ ಆರಂಭದಲ್ಲಿ ಅವರ ಡಿವೋರ್ಸ್ ನಂತರ, ಸಮಂತಾ ಎರಡು ಪ್ರವಾಸಗಳನ್ನು ಮಾಡಿದ್ದಾರೆ. ಚಾರ್ ಧಾಮ್ ಯಾತ್ರೆ ಮತ್ತು ದುಬೈ.
1013
ನಟಿ ಮೊದಲು ಋಷಿಕೇಶಕ್ಕೆ ಭೇಟಿ ನೀಡಿದ್ದರು. ಸಮಂತಾ ತಮ್ಮ ಪ್ರವಾಸದ ಹಲವಾರು ಫೋಟೋಗಳನ್ನು Instagram ನಲ್ಲಿ ಹಂಚಿಕೊಂಡಿದ್ದಾರೆ.
1113
ಅವರು ತಮ್ಮ ಪ್ರತ್ಯೇಕತೆಯನ್ನು ಘೋಷಿಸಿದ ಒಂದು ವಾರದ ನಂತರ ಚೈತನ್ಯ ಅವರು ಮೊದಲು ಸಾರ್ವಜನಿಕವಾಗಿ ಕಾಣಿಸಿಕೊಂಡರು. ಅವರು ತೆಲುಗು ಸಿನಿಮಾ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು.
1213
ಚಿತ್ರದಲ್ಲಿ ಪೂಜಾ ಹೆಗ್ಡೆ ಮತ್ತು ಅವರ ಸಹೋದರ ಅಖಿಲ್ ಅಕ್ಕಿನೇನಿ ಇದ್ದಾರೆ. 2017 ರ ಜನವರಿಯಲ್ಲಿ ಹೈದರಾಬಾದ್‌ನಲ್ಲಿ ನಡೆದ ಸಮಾರಂಭದಲ್ಲಿ ದಂಪತಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದರು.
1313
ಸಮಂತಾ ಮತ್ತು ಚೈತನ್ಯ ಅವರು ಅಕ್ಟೋಬರ್ 6, 2017 ರಂದು ಹಿಂದೂ ಸಂಪ್ರದಾಯದಂತೆ ಗೋವಾದಲ್ಲಿ ಮದುವೆಯಾದರು. ನಂತರ ಅಕ್ಟೋಬರ್ 7, 2017 ರಂದು ಕ್ರಿಶ್ಚಿಯನ್ ಸಂಪ್ರದಾಯದಂತೆ ಮದುವೆಯಾದರು.