ಅವರು ಆಮೀರ್ ಖಾನ್ ಅವರ ಹಿಟ್ ಚಿತ್ರ 'ಗಜಿನಿ'ಯಲ್ಲಿ ಕಾಣಿಸಿಕೊಂಡು.ಚಿರಪರಿಚಿತರಾಗಿದ್ದ ಜಿಯಾ ಖಾನ್ ತಮ್ಮ 25ನೇ ವರ್ಷದಲ್ಲಿ ನಿಧನರಾದರು. ಆಕೆಯ ಸಾವನ್ನು ಆತ್ಮಹತ್ಯೆ ಎಂದೇ ಹೇಳಲಾಗಿದೆ. ಆದರೆ, ಆಕೆಯ ತಾಯಿ ರಾಬಿಯಾ ಇದೊಂದು ಕೊಲೆ ಎಂದು ಆರೋಪಿಸಿದ್ದರು.
ಜಿಯಾ ಖಾನ್ ಅವರ ತಾಯಿ, ಮಾಜಿ ನಟಿ ರಬಿಯಾ ಖಾನ್ ಅವರು ಆಮೀರ್ ಖಾನ್ ಅವರ ತಂದೆ ತಾಹಿರ್ ಹುಸೇನ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದರಂತೆ. ಇಬ್ಬರೂ ಸಂಬಂಧದಲ್ಲಿದ್ದರಂತೆ.
ಆದರೆ, ಆ ಸಮಯದಲ್ಲಿ ಈ ವಿಷಯ ಏನೂ ಬೆಳಕಿಗೆ ಬಂದಿರಲಿಲ್ಲ. ಆದರೆ ರಬಿಯಾ ಮತ್ತು ತಾಹಿರ್ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆಮೀರ್ ಮತ್ತು ಜಿಯಾ ಅವರ ಮುಖದ ಗುಣಲಕ್ಷಣಗಳು ಪರಸ್ಪರ ಹೋಲುತ್ತವೆ ಎಂದು ಹಲವು ಮಾಧ್ಯಮ ವರದಿಗಳು ಹೇಳಿವೆ.
ಆಮೀರ್ ಅವರ ತಂದೆ ತಾಹಿರ್ ಅವರು ಹಳೆಯ ಸಂದರ್ಶನವೊಂದರಲ್ಲಿ ಇದೇ ರೀತಿಯ ಆರೋಪಗಳಿಗೆ ಪ್ರತಿಕ್ರಿಯಿಸಿದ್ದರು. ಅವು ಆಧಾರ ರಹಿತ ಎಂದಿದ್ದರು. 'ನನಗೆ ತಿಳಿದಿರುವಂತೆ, ರಬಿಯಾ ಪಾಕಿಸ್ತಾನಿ ವ್ಯಕ್ತಿಯನ್ನು ಮದುವೆಯಾಗಿದ್ದಾಳೆ. ರಬಿಯಾ ಒಳ್ಳೆಯ ಸ್ನೇಹಿತೆ, ಆದರೆ ನಾವು ಮದುವೆಯಾಗಿಲ್ಲ ಮತ್ತು ಜಿಯಾ ನನ್ನ ಮಗು ಅಲ್ಲ,' ಎಂದೇ ಸ್ಪಷ್ಟಪಡಿಸಿದ್ದರು.
ವಾಸ್ತವವಾಗಿ, ದಿವಂಗತ ನಟಿ ಜಿಯಾ ಇದೇ ರೀತಿಯ ವದಂತಿಗಳನ್ನು ನಿರಾಕರಿಸಿದರು, ತನಗೆ ತನ್ನ ತಂದೆ ಯಾರೆಂದು ತಿಳಿದಿರಲಿಲ್ಲ ಮತ್ತು ಅವನ ಬಗ್ಗೆ ತನ್ನ ತಾಯಿಯನ್ನು ಎಂದಿಗೂ ಪ್ರಶ್ನಿಸಲಿಲ್ಲ ಎಂದಿದ್ದರು.
'ಇದು ಶುದ್ಧ ಸುಳ್ಳು ಮತ್ತು ರಬ್ಬಿಶ್. ನಿಜ ಹೇಳಬೇಕೆಂದರೆ, ನನ್ನ ತಂದೆ ಬಗ್ಗೆ ನಂಗೇನೂ ಗೊತ್ತಿಲ್ಲ. ಅವನ ಬಗ್ಗೆ ನನ್ನ ತಾಯಿಯನ್ನು ಎಂದಿಗೂ ಪ್ರಶ್ನಿಸಿಯೂ ಇಲ್ಲ. ಅವನು ಅಮೆರಿಕನ್ ಎಂದು ನನಗೆ ಗೊತ್ತು, ಎಂದಿದ್ದರು ಜಿಯಾ.