Diwali: ಪಟಾಕಿ ನಿಷೇಧ ಮಾಡಿ ಅನ್ನೋರು ನಡ್ಕೊಂಡೇ ಆಫೀಸ್‌ಗೆ ಹೋಗಿ, ಕಾರ್ ತಗೋಬೇಡಿ ಎಂದ ಕಂಗನಾ

First Published | Nov 3, 2021, 5:50 PM IST
  • Diwali : ಪಟಾಕಿ ಬ್ಯಾನ್ ಮಾಡಿ ಅನ್ನೋರಿಗೆ ಕಂಗನಾ ರಣಾವತ್(Kangana Ranaut) ಖಡಕ್ ಉತ್ತರ
  • ಮೂರು ದಿನ ನಡ್ಕೊಂಡೇ ಆಫೀಸ್‌ಗೆ ಹೋಗಿ ಎಂದ ಕ್ವೀನ್

ದೀಪಾವಳಿ(Diwali) ಹಬ್ಬದ ಸಂದರ್ಭ ಪಟಾಕಿ ನಿಷೇಧ(Firecrackers) ವಿಷಯ ಭಾರೀ ಚರ್ಚೆಯಾಗುತ್ತಿದ್ದು ಈ ಬಗ್ಗೆ ಪರ ವಿರೋಧ ವಾದಗಳು ಕೇಳಿ ಬರುತ್ತಿದೆ. ಈ ಸಂದರ್ಭ ಬಾಲಿವುಡ್ ನಟಿ ಕಂಗನಾ ರಣಾವತ್ ಅವರೂ ಪ್ರತಿಕ್ರಿಯಿಸಿದ್ದಾರೆ.

ಪಟಾಕಿ ನಿಷೇಧಿಸುವ ಬಗ್ಗೆ ಕಂಗನಾ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. ಸದ್ಗುರು ಅವರ ವಿಡಿಯೋ ತುಣುಕೊಂದನ್ನು ಶೇರ್ ಮಾಡಿದ್ದಾರೆ ಕಂಗನಾ ರಣಾವತ್.

Tap to resize

ಪಟಾಕಿ ನಿಷೇಧಿಸಬೇಕೆನ್ನುವ ಕಾರ್ಯಕರ್ತರು ಕೆಲವು ದಿನಗಳ ಕಾಲ ಪರಿಸರ ಸಂರಕ್ಷಣೆಗಾಗಿ ಕಾರನ್ನು ಬಳಸಬೇಡಿ ಎಂದಿದ್ದಾರೆ ಕ್ವೀನ್(Queen) ನಟಿ.

ಕಂಗನಾ ಶೇರ್ ಮಾಡಿದ ವಿಡಿಯೋದಲ್ಲಿ ಸದ್ಗುರು(Sadguru) ತಮ್ಮ ಬಾಲ್ಯದ ದೀಪಾವಳಿ ನೆನಪನ್ನು ಹಂಚಿಕೊಳ್ಳುವುದನ್ನು ಕಾಣಬಹುದು. ದೀಪಾವಳಿಗೆ ತಿಂಗಳ ಮೊದಲೇ ತಾವು ಹೇಗೆ ಪಟಾಕಿ ಹಚ್ಚುತ್ತಿದ್ದರು ಹಾಗೂ ಸ್ವಲ್ಪ ಪಟಾಕಿ ಕೊನೆಗೆ ಹಚ್ಚಲು ಎತ್ತಿಡುತ್ತಿದ್ದರು ಎಂಬ ಬಗ್ಗೆ ಮಾತನಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಕಂಗನಾ, ಲಕ್ಷಾಂತರ ಗಿಡಗಳನ್ನು ನೆಟ್ಟು ಹಸಿರು ಹೊದಿಕೆಯ ವಿಶ್ವ ದಾಖಲೆಯನ್ನು ಸೃಷ್ಟಿಸಿದ ವ್ಯಕ್ತಿ ಎಂದು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಬರೆದುಕೊಂಡಿದ್ದಾರೆ.

ಎಲ್ಲಾ ದೀಪಾವಳಿ ಪರಿಸರ ಕಾರ್ಯಕರ್ತರಿಗೆ ಪರಿಪೂರ್ಣ ಉತ್ತರ: ನಿಮ್ಮ ಕಚೇರಿಗೆ ಮೂರು ದಿನಗಳವರೆಗೆ ಕಾರುಗಳನ್ನು ಬಳಸಬೇಡಿ ಎಂದಿದ್ದಾರೆ ನಟಿ.

ಮುಂಬೈ ಮೇಯರ್ ಕಿಶೋರಿ ಪೆಡ್ನೇಕರ್ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವಾಗ ಶಬ್ದ ಮತ್ತು ವಾಯು ಮಾಲಿನ್ಯದ ಮಟ್ಟವನ್ನು ನಿಯಂತ್ರಿಸುವಂತೆ ನಾಗರಿಕರಲ್ಲಿ ಮನವಿ ಮಾಡಿದ್ದಾರೆ.

ಪಟಾಕಿಗಳು ದೀಪಾವಳಿ ಹಬ್ಬದ ಅವಿಭಾಜ್ಯ ಅಂಗವಾಗಿದೆ. ಅವುಗಳು ಇರಬೇಕು. ಆದರೆ, ಪಟಾಕಿಗಳನ್ನು ಸಿಡಿಸುವಾಗ, ಜನರು ಶಬ್ದ ಮತ್ತು ವಾಯು ಮಾಲಿನ್ಯದ ಮಟ್ಟವನ್ನು ಪರಿಶೀಲಿಸಬೇಕು ಎಂದು ಅವರು ಹೇಳಿದ್ದಾರೆ.

Latest Videos

click me!